ಹೊನ್ನಾಳಿ: ಕಾಲೇಜುಗಳಲ್ಲಿ ಉತ್ತಮ ಆಡಳಿತಾತ್ಮಕ ವ್ಯವಸ್ಥೆ ಹಾಗೂ ಗುಣಮಟ್ಟದ ಕಲಿಕಾ ಮಟ್ಟವನ್ನು ಅಭಿವೃದ್ಧಿಪಡಿಸಲು ಮಾ.19ರಂದು ಒಂದು ದಿನದ ಕಾರ್ಯಾಗಾರವನ್ನು ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಪ್ರೊ. ಧನಂಜಯ ಬಿ.ಜಿ. ಹೇಳಿದರು.
ಪ್ರಸ್ತುತ 1 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜಿನಲ್ಲಿ ಪ್ರಸ್ತುತ 42 ಅನುಭವಿ ಮತ್ತು ಅರ್ಹ ಅಧ್ಯಾಪಕರ ತಂಡವನ್ನು ಹೊಂದಿದ್ದು, ಕಾಲೇಜಿನ ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಮಕ್ಕಳಿಗೆ ಅತ್ಯುತ್ತಮ ಕಲಿಕಾ ವ್ಯವಸ್ಥೆಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ಮಾ.19ರಂದು ಆಂತರಿಕ ಗುಣಮಟ್ಟ ಭರವಸಾ ಕೋಶದಿಂದ ಆಯೋಜಿಸಲಾಗಿರುವ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಡಿ ಆಡಳಿತಾತ್ಮಕ ತರಬೇತಿ ಹಾಗೂ ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ ಸಾಧನೆಗಳು ಎಂಬ ವಿಷಯವಾಗಿ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ. ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಭಾಗವಹಿಸಲಿದ್ದಾರೆ. ಕರ್ನಾಟಕ ವಿ.ವಿ. ನಿವೃತ್ತ ಪ್ರಧ್ಯಾಪಕ ಪ್ರೊ. ಸೋಮಶೇಖರಪ್ಪ ಸಿ.ಎ. ಶಿವಮೊಗ್ಗ ನಿವೃತ್ತ ಉಪ ಖಜಾನಾಧಿಕಾರಿ ಗಂಗಾಧರ ಗಡಗಲಿ, ಸರ್ ಎಂ.ವಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಧ್ರಾವತಿಯ ಸಹಾಯಕ ಪ್ರಾದ್ಯಾಪಕ ಗಣಕ ವಿಭಾಗದ ಡಾ. ಶೋಯಬ್ ಅಹಮದ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಧನಂಜಯ ಬಿ.ಜಿ. ವಹಿಸಲಿದ್ದಾರೆ ಎಂದರು.
ಸಮಾರೋಪದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತಾಲೂಕಿನ ತಹಸೀಲ್ದಾರ್ ಪಟ್ಟರಾಜ ಗೌಡ, ಡಾ.ಶೋಯಬ್ ಅಹಮದ್ ಉಪಸ್ಥಿತಿ ಇರುವರು.ಸುದ್ದಿಗೋಷ್ಠಿಯಲ್ಲಿ ಕಾರ್ಯಾಗಾರದ ಸಂಚಾಲಕಿ ಎಚ್.ಬಿ.ಗೀತಾ, ಸಹ ಸಂಚಾಲಕ ರಾಘವೇಂದ್ರ ರಾವ್ ಜಿ.ಎಸ್., ಸಂಘಟನಾ ಸಮಿತಿಯ ಡಾ.ಬೀನಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು, ಗ್ರಂಥಪಾಲಕ ನಾಗರಾಜಾ ನಾಯ್ಕ, ಕನ್ನಡ ವಿಭಾಗದ ಮುಖ್ಯಸ್ಥರಾದ ದಿಲೀಪ್, ಕಂಬಳಿ, ಡಾ.ರಜನಿ, ಟಿ.ಎಂ.ಸುದಿನ, ಅಶೋಕ, ಪ್ರಾಧ್ಯಾಪಕರು ಉಪಸ್ಥಿತರಿದ್ದರು.