ರಾಣಿಬೆನ್ನೂರು: ಶಿಕ್ಷಕರ ಬೋಧನೆಯ ಜತೆಗೆ ನುರಿತ ಸಂಪನ್ಮೂಲ ವ್ಯಕ್ತಿಗಳು ನೀಡುವ ಕಾರ್ಯಾಗಾರಗಳು ಮಕ್ಕಳ ಸರ್ವತೋಮುಖ ಪ್ರಗತಿಗೆ ಸಹಕಾರಿಯಾಗಬಲ್ಲವು ಎಂದು ಟ್ಯಾಗೋರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂದು ಡಾ. ಬಸವರಾಜ ಕೇಲಗಾರ ತಿಳಿಸಿದರು.ನಗರದ ಟ್ಯಾಗೋರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಕು, ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ಮೆಮೊರಿ ಸೆಮಿನಾರ್‌ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ತರಬೇತುದಾರ ಮೈಸೂರಿನ ಎಸ್. ಪ್ರಶಾಂತ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ಅವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ. ಎಲ್ಲ ವಿದ್ಯಾರ್ಥಿಗಳಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಪೋಷಕರು, ಶಿಕ್ಷಕರು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ಬಾಯಿಪಾಠಕ್ಕೆ ಒತ್ತು ಕೊಡದೇ ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಿ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ವೀರೇಶ ಮೋಟಗಿ, ಕಾರ್ಯದರ್ಶಿ ಪ್ರಕಾಶ ಮಾಳಗಿ, ಟ್ಯಾಗೋರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ, ಡಿ.ಜೆ. ಹಿರೇಮಠ, ಎಸ್.ಕೆ. ಮಾಳಗಿ, ಸುಧೀರ ಕುರವತ್ತಿ, ಕುಮಾರಣ್ಣ ಮುಷ್ಠಿ, ವಾಸುದೇವ ಗುಪ್ತಾ, ವಿನೋದ ಜಂಬಗಿ ಉಪಸ್ಥಿತರಿದ್ದರು.ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ
ರಾಣಿಬೆನ್ನೂರು: ಕಳಪೆ ಬಿತ್ತನೆ ಬೀಜ ಮಾರಾಟದ ಆರೋಪ ಕೇಳಿಬಂದ ಹಿನ್ನೆಲೆ ನಗರದಲ್ಲಿ ಶುಕ್ರವಾರ ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಮಾರಾಟ ಮಳಿಗೆಗಳಿಗೆ ಪರಿಶೀಲನೆ ನಡೆಸಿ ಬೀಗ ಜಡಿದರು.ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ನೇತೃತ್ವದ ತಂಡ ನಿಸರ್ಗ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಇವರು ಉತ್ಫಾದಿಸಿದ ಮೆಕ್ಕೆಜೋಳ ಬೆಳೆಯ ವಿವಿಧ ತಳಿಗಳನ್ನು ಮಾರಾಟ ಮಾಡಿದ ರಾಣಿಬೆನ್ನೂರು ನಗರದ ಮಾರಾಟ ಮಳಿಗೆಗಳಾದ ಗುರುಶಾಂತೇಶ್ವರ ಆಗ್ರೋ ಸೆಂಟರ್ ಮತ್ತು ಶ್ರೀ ಗುರು ಹೈಬ್ರಿಡ್ ಸೀಡ್ಸ್ ಮಳಿಗೆಗಳನ್ನು ಮಳಿಗೆಗಳನ್ನು ಪರಿಶೀಲಿಸಿ ಬಿತ್ತನೆ ಬೀಜಗಳ ದಾಸ್ತಾನು ಜಪ್ತಿ ಮಾಡಿ ಬೀಗ ಹಾಕುವ ಜತೆಗೆ ಸೀಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಕೃಷಿ ಅಧಿಕಾರಿಗಳಾದ ಜಿ.ಎಂ. ಬತ್ತಿಕೊಪ್ಪದ ಬಸವರಾಜ ಎಫ್.ಎಂ., ಅರವಿಂದ ಎಂ ಉಪಸ್ಥಿತರಿದ್ದರು.