ಕೆಎಂಸಿಯಲ್ಲಿ ವಿಶ್ವ ತಂಬಾಕುರಹಿತ ದಿನಾಚರಣೆ: ಕಲಾಕೃತಿ ಅನಾವರಣ

KannadaprabhaNewsNetwork |  
Published : Jun 03, 2025, 12:12 AM ISTUpdated : Jun 03, 2025, 12:13 AM IST
2ತಂಬಾಕು | Kannada Prabha

ಸಾರಾಂಶ

ವಿಶ್ವ ತಂಬಾಕು ರಹಿತ ದಿನ -೨೦೨೫ ಇದರ ಅಂಗವಾಗಿ ಇಲ್ಲಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯನ್ನು ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕಾಲೇಜಿನ ಆವರಣದಲ್ಲಿ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವ ತಂಬಾಕು ರಹಿತ ದಿನ -೨೦೨೫ ಇದರ ಅಂಗವಾಗಿ ಇಲ್ಲಿನ ಕಸ್ಕೂರ್ಬಾ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯನ್ನು ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕಾಲೇಜಿನ ಆವರಣದಲ್ಲಿ ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗದಂತೆ ಮಾಡುವುದೇ ಸಮುದಾಯದಲ್ಲಿ ತಂಬಾಕಿಗೆ ಸಂಬಂಧಿಸಿದ ಕ್ಯಾನ್ಸರ್‌ಗಳನ್ನು ತಡೆಯುವ ಒಂದೇ ಮಾರ್ಗವಾಗಿದೆ ಎಂದು ಸಲಹೆ ನೀಡಿದರು.ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ತಂಬಾಕಿನ ಬಗ್ಗೆ ಜಾಗೃತಿ ಮೂಡಿಸುವಂತಹ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.ಈ ಕಲಾಕೃತಿಯಲ್ಲಿ ತಂಬಾಕಿನ ಸೇವನೆಯಿಂದ ಹಾನಿಗೊಳಗಾದ ಶ್ವಾಸಕೋಶವನ್ನು ಆಕರ್ಷಕವಾಗಿ ಬಿಂಬಿಸಲಾಗಿದೆ ಮತ್ತು ತಂಬಾಕು ಉದ್ಯಮವು ಯಾವ ರೀತಿ ತನ್ನ ಆಮಿಷಕ್ಕೆ ಒಳಪಡಿಸುತ್ತಿದೆ ಎಂಬುದನ್ನು ಭಯಾನಕವಾಗಿ ಬಿಂಬಿಸಲಾಗಿದೆ. ತಂಬಾಕಿನ ಸೇವನೆಯಿಂದ, ಜಗಿಯುವುದರಿಂದ ಬಾಯಿಯ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಶಕೋಶದ ಕ್ಯಾನ್ಸರ್, ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ತಾಂಬಾಕಿನ ಸೇವನೆಯಿಂದಾಗಿ ಪ್ರತಿವರ್ಷ ೮ ಮಿಲಿಯನ್ ಜನರು ಸಾವನಪ್ಪುತ್ತಿರುವುದು ದುಃಖಕರ ವಿಷಯವಾಗಿದೆ. ಕಲಾಕೃತಿಯನ್ನು ಒಂದು ವಾರಗಳ ಕಾಲ ಮಣಿಪಾಲ ಮತ್ತು ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾವುದು ಎಂದು ಕಲಾವಿದ ಶ್ರೀನಾಥ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ