ಉಡುಪಿ ವಲಯ ಮಟ್ಟದ ವಿಶ್ವ ವಿಶೇಷ ಚೇತನರ ದಿನಾಚರಣೆ

KannadaprabhaNewsNetwork |  
Published : Dec 12, 2025, 03:00 AM IST
11ವಿಶೇಷ | Kannada Prabha

ಸಾರಾಂಶ

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಉಡುಪಿ ವಲಯ ಮಟ್ಟದ ವಿಶ್ವ ವಿಶೇಷ ಚೇತನದ ದಿನಾಚರಣೆ ಎಸ್‌ಆರ್‌ಪಿ ಕೇಂದ್ರದಲ್ಲಿ ನಡೆಯಿತು.

ಉಡುಪಿ: ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಉಡುಪಿ ವಲಯ ಮಟ್ಟದ ವಿಶ್ವ ವಿಶೇಷ ಚೇತನದ ದಿನಾಚರಣೆ ಎಸ್‌ಆರ್‌ಪಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ ಅವರು, ವಿಶೇಷ ಚೇತನರಲ್ಲಿ ಸ್ವಾವಲಂಬನೆ ಮತ್ತು ಆರೋಗ್ಯ ಹೆಚ್ಚಿಸಿ ಅವರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರದ ಮುಖ್ಯವಾಹಿನಿಗೆ ತರುವುದು ಹಾಗೂ ಅವರಿಗೆ ಸಮಾನ ಅವಕಾಶಗಳನ್ನು ನೀಡುವುದು ಹಾಗೂ ಅವರ ಸಾಧನೆಗಳನ್ನು ಗುರುತಿಸುವುದು ಈ ದಿನಾಚರಣೆ ಉದ್ದೇಶವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟಕ್ಕೆ ಆಯ್ಕೆಯಾದ ನಾಲ್ಕು ವಿಶೇಷ ಚೇತನ ಮಕ್ಕಳನ್ನು ಸನ್ಮಾನಿಸಲಾಯಿತು ಹಾಗೂ ವಿಶೇಷ ಚೇತನ ಮಕ್ಕಳು ಹಾಗೂ ಪೋಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.ಅಂಬಲಪಾಡಿ ರೋಟರಿ ಕ್ಲಬ್ ನ ರಾಜೇಶ್ ಕರ್ಕೆರ, ಗಂಗೆ ಶಾನ್ ಬಾಗ್, ನಾಗರಾಜ್, ಜಯಶೀಲ ಬಿ. ರೋಟೆ ಹಾಗು ಬಿ.ಐ.ಇ.ಆರ್.ಟಿ. ಯವರಾದ ಆಶಾ, ಗೀತಾ ಎಸ್. ಹೆಗಡೆ ಹಾಗೂ ಫಿಜಿಯೋಥೆರಪಿಸ್ಟ್ ದೀಕ್ಷಿತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಕೀಲರ ದಿನಾಚರಣೆ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ: ನಾಳೆ ಆಳ್ವಾಸ್ ಸಾಂಸ್ಕೃತಿಕ ವೈಭವ