ವರ್ಲ್ಡ್‌ ಯೂನಿವರ್ಸಿಟಿ ಗೇಮ್ಸ್‌: ಆಳ್ವಾಸ್‌ನ 11 ಕ್ರೀಡಾಪಟುಗಳು ಭಾಗಿ

KannadaprabhaNewsNetwork |  
Published : May 30, 2025, 11:58 PM ISTUpdated : May 30, 2025, 11:59 PM IST
32 | Kannada Prabha

ಸಾರಾಂಶ

ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜು. ೧೬ರಿಂದ ೨೭ರವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ೨೦೨೫ (ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-೨೦೨೫)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ೧೧ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜು. ೧೬ರಿಂದ ೨೭ರವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ೨೦೨೫ (ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-೨೦೨೫)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ೧೧ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ವರೆಗೆ ೩೨ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರ ವಿಭಾಗದಲ್ಲಿ ಗಗನ್ (೫೦೦೦ ಮೀಟರ್ಸ್ ಓಟ), ಸಚಿನ್ (೨೦ ಕಿ.ಮೀ ನಡಿಗೆ), ಬಾಲಕೃಷ್ಣ (೪೦೦ ಮೀ ಓಟ), ತೌಫಿಕ್ ಎನ್ (ಡೆಕತ್ಲಾನ್) ಹಾಗೂ ಮಹಿಳಾ ವಿಭಾಗದಲ್ಲಿ ದೀಕ್ಷಿತಾ (೪೦೦ ಮೀ ಹರ್ಡಲ್ಸ್), ಬಸಂತಿ ಕುಮಾರಿ (ಹಾಫ್ ಮ್ಯಾರಥಾನ್), ಮಂಜು ಯಾದವ್(ಸ್ಟೀಪಲ್ ಚೇಸ್), ಸಿಂಧುಶ್ರೀ(ಪೋಲ್‌ವರ್ಟ್), ಸಾಕ್ಷಿ(ಈಟಿ ಎಸೆತ), ಜ್ಯೋತಿ (ಹಾಫ್ ಮ್ಯಾರಥಾನ್), ಶಾಲಿನಿ (೨೦ ಕಿಮೀ ನಡಿಗೆ), ಪಾಲ್ಗೊಳ್ಳಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕ್ರೀಡಾಪಟುಗಳು ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಪ್ ಇಂಡಸ್ಟಿçಯಲ್ ಟೆಕ್ನಾಲಜಿ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ (ಸಿಲೆಕ್ಷನ್ ಟ್ರಯಲ್ಸ್ ಗೇಮ್ಸ್) ಪ್ರವೇಶ ಪಡೆದಿದ್ದಾರೆ. ಅಖಿಲ ಭಾರತ ಅಂತರ ವಿವಿಯ ವಿವಿಧ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಭಾರಿ ಅಥ್ಲೇಟಿಕ್ಸ್, ಕ್ರಾಸ್ ಕಂಟ್ರಿ, ಖೋಖೋ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿ, ಬಾಲ್ ಬ್ಯಾಡ್ಮಿಂಟನ್, ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿದ ಹೆಗ್ಗಳಿಗೆಗೆ ಪಾತ್ರವಾಗಿದ್ದರು. ರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಆಳ್ವಾಸ್ ಸಂಸ್ಥೆಯ ಕಿಶಾನ್‌ಗೆ ಬೆಸ್ಟ್ ಫಿಸಿಕ್ ಪ್ರಶಸ್ತಿ ಲಭಿಸಿತ್ತು. ---೩೨ ವಿದ್ಯಾರ್ಥಿಗಳು ಆಯ್ಕೆಈ ಹಿಂದೆ ನಡೆದ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ಗಳಲ್ಲೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಈ ವರ್ಷ ಸೇರಿದಂತೆ ಈ ವರೆಗೆ ೩೨ ಮಂದಿ ಆಯ್ಕೆಯಾಗಿದ್ದಾರೆ. ೨೦೧೫ರಲ್ಲಿ ಕ್ರೊವೇಶಿಯಾ ನಡೆದ ಗೇಮ್ಸ್ನಲ್ಲಿ ಒಬ್ಬರು, ೨೦೧೭ರಲ್ಲಿ ತೈವಾನ್ ನಡೆದ ಗೇಮ್ಸ್ನಲ್ಲಿ ಇಬ್ಬರು, ೨೦೧೯ರಲ್ಲಿ ಇಟಲಿಯಲ್ಲಿ ನಡೆದ ಗೇಮ್ಸ್ನಲ್ಲಿ ೧೦ ಜನ, ೨೦೨೩ರಲ್ಲಿ ಚೀನಾದ ಚಾಂಗ್ಡುನಲ್ಲಿ ನಡೆದ ಗೇಮ್ಸ್‌ನಲ್ಲಿ ೮ ಜನ ಪಾಲ್ಗೊಂಡಿದ್ದರು. ---ಜಾಗತಿಕ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಸಂಸ್ಥೆಯಿಂದ ೧೧ ಕ್ರೀಡಾಪಟುಗಳು ಆಯ್ಕೆಯಾಗಿದ್ದು ಒಬ್ಬರಿಗೆ ತಲಾ ರು. ೨,೫೦,೦೦೦ ಹಣಕಾಸಿನ ವ್ಯವಸ್ಥೆ ಅಗತ್ಯವಿದ್ದು, ಇದರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಒಬ್ಬರಿಗೆ ತಲಾ ರು. ೭೫,೦೦೦ ಮೊತ್ತವನ್ನು ನೀಡುವ ಭರವಸೆ ನೀಡಿದ್ದು, ಉಳಿದ ಮೊತ್ತವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯು ಭರಿಸುತ್ತಿದೆ ಎಂದು ಡಾ.ಆಳ್ವ ತಿಳಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌