ಚನ್ನಪಟ್ಟಣ: ಮಾಜಿ ಪ್ರಧಾನಿ ಎಚ್.ಡಿ. ದೇವಗೌಡರ ಜನ್ಮದಿನದ ಪ್ರಯುಕ್ತ ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಇತಿಹಾಸ ಪ್ರಸಿದ್ದ ಶ್ರೀ ಕೆಂಗಲ್ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಾಗೂ ಕೆಕ್ ಕಟ್ ಮಾಡಿ ಆಚರಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ನೂರಾರು ಕಾಲ ಬಾಳಲಿ, ಭಗವಂತ ಅವರಿಗೆ ಮತ್ತು ಕುಟುಂಬಕ್ಕೆ ಒಳ್ಳೆಯ ಆರೋಗ್ಯ ಭಾಗ್ಯವನ್ನು ಕರುಣಿಸಲಿ. ಅವರು ಶತಾಯುಶಿಗಳಾಗಲಿ, ಅವರು ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶಕ್ಕೆ ಅಪಾರವಾದಂತಹ ಕೊಡುಗೆ ನೀಡಬೇಕು ಅವರು ಜನರ ಸೇವೆ ಮಾಡಲು ಮತ್ತಷ್ಟು ಆಯಸ್ಸು, ಆರೋಗ್ಯ, ಶಕ್ತಿಯನ್ನು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ಮಾತನಾಡಿ, ದೇವೆಗೌಡರು ರೈತರು, ದೀನ ದಲಿತರು, ಬಡವರು ಶೋಷಿತ ವರ್ಗ ದವರಿಗೆ ಮೀಸಲಾತಿ ಕೊಡಲು ಹೋರಾಟ ನಡೆಸಿದ ಮುತ್ಸದಿ ರಾಜಕಾರಣಿ, ಭಗವಂತ ಅವರಿಗೆ ಆರೋಗ್ಯ ಆಯಸ್ಸು ಜೊತೆಗೆ ಶತಾಯುಷಿ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಇಗ್ಗಲೂರು ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ಅಜಯ್, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಮುಖಂಡರಾದ ನಿಡಗೋಡಿ ಬಾಬು, ಅಳ್ಳಿದೊಡ್ಡಿ ಮಹೇಶ್ ಗೌಡ, ನಾಗವಾರ ರಂಗಸ್ವಾಮಿ, ರಘು, ರೇಖಾ ಉಮಾಶಂಕರ್, ನಿಸರ್ಗ ಲೋಕೇಶ್, ಬೋರೆಗೌಡ, ಬಿಳಿಯಪ್ಪ, ಇತರರು ಇದ್ದರು.