ತಲ್ವಾರ್‌ಗೆ ಪೂಜೆ ಮಾಡಿ ಹೇಳಿಕೆ: ಅರುಣ್‌ಕುಮಾರ್‌ ಪುತ್ತಿಲ ವಿರುದ್ಧ ಸುಮೊಟೊ ಪ್ರಕರಣ ದಾಖಲು

KannadaprabhaNewsNetwork |  
Published : Oct 08, 2023, 12:01 AM IST

ಸಾರಾಂಶ

ಸೆಕ್ಷನ್ 153 ಏ ಅನ್ವಯ ಕೋಮುಸೌಹಾರ್ದಕ್ಕೆ ಧಕ್ಕೆ ತಂದಿದ್ದಾರೆ ಎಂದು ಎಫ್ಐಆರ್‌

ಶಿವಮೊಗ್ಗ: ನವರಾತ್ರಿ ದಿನ ಸ್ಪ್ಯಾನರ್‌, ಸ್ಕ್ರೂಡೈವರ್ ಬಿಟ್ಟು ತಲ್ವಾರ್ ಪೂಜೆ ಮಾಡಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಹಿಂದುಪರ ಸಂಘಟನೆ ಮುಖಂಡ ಅರುಣ್‌ಕುಮಾರ್‌ ಪುತ್ತಿಲ ಅವರ ವಿರುದ್ಧ ಶಿವಮೊಗ್ಗದಲ್ಲಿ ಪೊಲೀಸರಿಂದ ಸುಮೊಟೊ ಕೇಸು ದಾಖಲಾಗಿದೆ. ಶಿವಮೊಗ್ಗದ ರಾಗಿಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿದ್ದ ಹಿಂದೂಪರ ಸಂಘಟನೆ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರು ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ನವರಾತ್ರಿಯಲ್ಲಿ ಹಿಂದುಗಳು ಆಯುಧಗಳಿಗೆ ಪೂಜೆ ಮಾಡಿ ಎಂದು ಕರೆ ನೀಡಿದ್ದರು. ಇದು ಪ್ರಚೋದನೆಗೆ ಪುಷ್ಟಿ ನೀಡುತ್ತಿರುವುದರಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 153 ಏ ಅನ್ವಯ ಕೋಮುಸೌಹಾರ್ದಕ್ಕೆ ಧಕ್ಕೆ ತಂದಿದ್ದಾರೆ ಎಂದು ಎಫ್ಐಆರ್‌ ದಾಖಲಾಗಿದೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ