- ಪಂಚಮಸಾಲಿಗಳಲ್ಲಿ ಅರಿವು ಮೂಡಿಸಲು ರಾಜ್ಯ ಅಭಿಯಾನ: ವಚನಾನಂದ ಶ್ರೀ
ಕರ್ನಾಟಕ ಸರ್ಕಾರದ ಆದೇಶದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಶುರು ಮಾಡಿದೆ. ಪಂಚಮಸಾಲಿ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ, ಕ್ರಮ ಸಂಖ್ಯೆ A-0868 ಬರೆಸಬೇಕು. ಜಾತಿಗಣತಿ ಹಿನ್ನೆಲೆ ಯಲ್ಲಿ ರಾಜ್ಯದ ಪ್ರತಿ ಊರಿಗೆ ಹೋಗಿ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದೇವೆ. ಸೋಮವಾರ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಹಿಂದೂ ಧರ್ಮ ಬರೆಸುವ ಕುರಿತ ಯಾವುದೇ ಗೊಂದಲದ ವಿಚಾರ ಬೇಡ. ಈಗಾಗಲೇ ನಾವೆಲ್ಲಾ ಶ್ರೀಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂಬುದಾಗಿ ಬರೆಸಬೇಕೆಂಬುದಾಗಿ ಹೇಳಿದ್ದಾರೆ. ವೀರಶೈವ ಲಿಂಗಾಯತರು ಸಾಮಾಜಿಕವಾಗಿ ಒಂದು ಧರ್ಮದ ಕಾಲಂನಲ್ಲಿ ಹಿಂದೂ ಅಂತಲೇ ಬರೆಸಬೇಕು. ಈ ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಬಾಂಧವರಲ್ಲಿ ಯಾವುದೇ ಗೊಂದಲವೂ ಇಲ್ಲ. ಇದು ಕೇವಲ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಲ್ಲ. ರಾಜಕೀಯವೂ ಇದೆ ಎಂದು ಶ್ರೀಗಳು ಸೂಚ್ಯವಾಗಿ ವಿವರಿಸಿದರು.ನಮ್ಮ ಸಮುದಾಯದ ಸಂಖ್ಯೆಯು ಗಣತಿಯಲ್ಲಿ ಕಡಿಮೆಯಾದರೆ ನಮಗೆ ಸಿಗುವಂತಹ ಮೀಸಲಾತಿಯ ಪ್ರಮಾಣವೇ ಕಡಿಮೆಯಾಗುತ್ತದೆ. ಈ ಹಿಂದೆ ಅವೈಜ್ಞಾನಿಕ ಸಮೀಕ್ಷೆ ಆಗಿದ್ದ ಕಾರಣಕ್ಕೆ ಇದೀಗ ಮತ್ತೊಮ್ಮೆ ಜಾತಿಗಣತಿ ಆರಂಭವಾಗಿದೆ. ಜಾತಿಗಣತಿಯನ್ನು ನಾವೂ ನಿರಂತರ ಗಮನಿಸುತ್ತೇವೆ. ಒಂದುವೇಳೆ ಜಾತಿಗಣತಿ ಕಾರ್ಯವು ಸರಿ ಆಗದಿದ್ದರೆ ತಿರಸ್ಕಾರ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದೇ ವೇಳೆ ಸಮಾಜ ಬಾಂಧವರ ಮನೆಗಳಿಗೆ ಜಾಗೃತಿ ಸ್ಟಿಕ್ಕರ್ಗಳನ್ನು ಶ್ರೀ ವಚನಾನಂದ ಸ್ವಾಮೀಜಿ ಅಂಟಿಸಿ, ಜಾತಿಗಣತಿ ವೇಳೆ ಏನೆಲ್ಲಾ ಬರೆಸಬೇಕೆಂಬ ಬಗ್ಗೆ ಅರಿವು ಮೂಡಿಸಿದರು.
(ಕೋಟ್)
- ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ.
-22ಕೆಡಿವಿಜಿ1, 2, 3: ದಾವಣಗೆರೆ ಸರಸ್ವತಿ ಬಡಾವಣೆಯಲ್ಲಿ ಪಂಚಮಸಾಲಿ ಮನೆಗಳಿಗೆ ಶ್ರೀ ವಚನಾನಂದ ಸ್ವಾಮೀಜಿ, ಬಿ.ಸಿ.ಉಮಾಪತಿ ಇತರರು ಸ್ಟಿಕ್ಕರ್ ಅಂಟಿಸಿ, ಜಾತಿಗಣತಿ ಬಗ್ಗೆ ಅರಿವು ಮೂಡಿಸಿದರು.