ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಿನ್ನಿಗೋಳಿ ಘಟಕ ಉದ್ಘಾಟನೆ

KannadaprabhaNewsNetwork |  
Published : May 10, 2025, 01:05 AM IST
ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ನೂತನ ಕಿನ್ನಿಗೋಳಿ ಘಟಕದ ಉದ್ಘಾಟನೆ  ಸಾಧಕ ಕಲಾವಿದರಿಗೆ ಗೌರವಾರ್ಪಣೆ  ಸಮಾಜಸೇವಕರಿಗೆ ಸನ್ಮಾನ  ಯಕ್ಷಗಾನ ಗಾನ ವೈಭವ | Kannada Prabha

ಸಾರಾಂಶ

ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪದ ಬಳಿ ನಡೆದ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನೂತನ ಕಿನ್ನಿಗೋಳಿ ಘಟಕದ ಉದ್ಘಾಟನೆ ಶುಕ್ರವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಯಕ್ಷ ಧ್ರುವ ಫೌಂಡೇಶನ್‌ ಎಲ್ಲಾ ವರ್ಗದ ಅಶಕ್ತ ಕಲಾವಿದರಿಗೆ ಸಹಾಯ ಹಸ್ತ, ಮನೆ ನಿರ್ಮಾಣ ಸೇರಿದಂತೆ ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಿದ್ದು ಸಂಸ್ಥೆ ಮೂಲಕ ಉತ್ತಮ ಕಾರ್ಯಗಳು ನಡೆಯಲೆಂದು ಕಟೀಲು ಕ್ಷೇತ್ರದ ಅರ್ಚಕ ವೇ.ಮೂ. ಲಕ್ಷ್ಮಿನಾರಾಯಣ ಆಸ್ರಣ್ಣ ಹೇಳಿದ್ದಾರೆ.

ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪದ ಬಳಿ ನಡೆದ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನೂತನ ಕಿನ್ನಿಗೋಳಿ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಶಕ್ತ ಕುಟುಂಬಕ್ಕೆ ವೈದ್ಯಕೀಯ ನೆರವು, ಸಾಧಕರ ನೆಲೆಯಲ್ಲಿ ಹವ್ಯಾಸಿ ಭಾಗವತ ಜಗನ್ನಾಥ ಶೆಟ್ಟಿ ಮಮ್ಮೆಟ್ಟು, ರಂಗ ಕಲಾವಿದ, ಸಾಮಾಜಿಕ ಕಾರ್ಯಕರ್ತ, ಕೃಷಿಕ ಸುಧಾಕರ ಸಾಲ್ಯಾನ್ ಸಂಕಲ ಕರಿಯ ಮತ್ತು ಪಾವಂಜೆ ಮೇಳದ ಹಿಮ್ಮೇಳ ಕಲಾವಿದ ಗುರುಪ್ರಸಾದ್ ಬೊಳಿಂಜಡ್ಕ ಅವರನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಗೌರವಿಸಿದರು.

ಮುಂಡ್ಕೂರು ಕ್ಷೇತ್ರದ ಅರ್ಚಕ ರಾಮದಾಸ ಆಚಾರ್ಯ, ಸುರಗಿರಿ ಕ್ಷೇತ್ರದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ ಶುಭ ಕೋರಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ ಬಳಕುಂಜಗುತ್ತು, ಧನಂಜಯ ಶೆಟ್ಟಿಗಾರ ದುಬೈ, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯಾದವ ದೇವಾಡಿಗ, ಧನಪಾಲ ಶೆಟ್ಟಿ ತಾಳಿಪಾಡಿಗುತ್ತು, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್, ಕಿನ್ನಿಗೋಳಿಯ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಸುಧಾಕರ ಶೆಟ್ಟಿ ಮುಲ್ಲಡ್ಕ ಮುಂಡ್ಕೂರು, ಮಾಧವ ಶೆಟ್ಟಿಗಾರ್ ಕೆರೆಕಾಡು, ಬಬಿತಾ ಉಮೇಶ್ ಶೆಟ್ಟಿ, ರವೀಂದ್ರ ಶೆಟ್ಟಿ ಮುಲ್ಲಡ್ಕ ಪರಾರಿ, ದೀಪಕ್ ರೊಡ್ರಿಗಸ್ , ಕಿನ್ನಿಗೋಳಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿತಿನ್ ಶೆಟ್ಟಿ ಗುತ್ತಿನಾರ್ ಕೊಡೆತ್ತೂರುಗುತ್ತು, ಅಶೋಕ್ ಶೆಟ್ಟಿ ಪೆರ್ಮುದೆ, ಕುಶಾಲ ಪೂಜಾರಿ ತಾಳಿಪಾಡಿ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಪಕ್ಷಿಕೆರೆ, ಪೃಥ್ವಿರಾಜ ಆಚಾರ್ಯ,ದಿವಾಕರ ಕರ್ಕೇರಾ,ಸ್ವರಾಜ್ ಶೆಟ್ಟಿ ಮುಂಡ್ಕೂರು, ದೊಡ್ಡ ಮನೆ ಶಮಿನಾ ಆಳ್ವ ಕೆಂಚನಕೆರೆ, ಅಭಿಲಾಷ್ ಶೆಟ್ಟಿ ಕಟೀಲು ಮತ್ತಿತರರು ಇದ್ದರು.

ಕಿನ್ನಿಗೋಳಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಪ್ರಕಾಶ್ ಕಿನ್ನಿಗೋಳಿ ಪ್ರಾರ್ಥಿಸಿದರು.

ಗೌರವಾಧ್ಯಕ್ಷ ಸಾಯಿನಾಥ್ ಶೆಟ್ಟಿ ಮುಂಡ್ಕೂರು ಪ್ರಾಸ್ತಾವಿಕ ಮಾತನಾಡಿದರು. ಶರತ್ ಶೆಟ್ಟಿ ನಿರೂಪಿಸಿದರು. ದಿವಾಕರ ಕರ್ಕೇರ ವಂದಿಸಿದರು .

ಸಭಾ ಕಾರ್ಯಕ್ರಮದ ಮೊದಲು ಕಿನ್ನಿಗೋಳಿ ಯುಗಪುರುಷ ಸಭಾಭವನದಿಂದ ವಿವಿಧ ಕುಣಿತ ಭಜನಾ ತಂಡಗಳ ಜೊತೆ ಪಾವಂಜೆ ಮೇಳದ ದೇವರನ್ನು ರಂಗಸ್ಥಳದ ಚೌಕಿಯವರೆಗೆ ಅದ್ಧೂರಿಯ ಮೆರವಣಿಗೆ ನಡೆಯಿತು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಅನ್ನ ಸಂತರ್ಪಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ