ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಪಳ್ಳಿ ನಿಂಜೂರು ಘಟಕ 7ನೇ ವಾರ್ಷಿಕೋತ್ಸವ

KannadaprabhaNewsNetwork |  
Published : Mar 09, 2026, 02:45 AM IST
ಸಮಾರಂಭದಲ್ಲಿ ಸಾಧಕರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಪಳ್ಳಿ ನಿಂಜೂರು ಘಟಕದ 7ನೇ ವಾರ್ಷಿಕೋತ್ಸವ ಹಾಗೂ ಯಕ್ಷ ಮಿತ್ರರು ಪಳ್ಳಿ ನಿಂಜೂರು ಇದರ 9ನೇ ವರ್ಷದ ವಾರ್ಷಿಕೋತ್ಸವ ಶನಿವಾರ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಳ್ಳಿ ರಾಮಕೃಷ್ಣ ಸಭಾಭವನದ ಬಳಿ ನಡೆಯಿತು.

ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಪಳ್ಳಿ ನಿಂಜೂರು ಘಟಕದ 7ನೇ ವಾರ್ಷಿಕೋತ್ಸವ ಹಾಗೂ ಯಕ್ಷ ಮಿತ್ರರು ಪಳ್ಳಿ ನಿಂಜೂರು ಇದರ 9ನೇ ವರ್ಷದ ವಾರ್ಷಿಕೋತ್ಸವ ಶನಿವಾರ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಳ್ಳಿ ರಾಮಕೃಷ್ಣ ಸಭಾಭವನದ ಬಳಿ ನಡೆಯಿತು.ಮುಖ್ಯ ಅತಿಥಿಗಳಾಗಿ ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಉಷಾ ಯು. ಅಂಚನ್, ಪಟ್ಲ ಫೌಂಡೇಷನ್ ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು, ಜಗದೀಶ್ ಶೆಟ್ಟಿ ಪಳ್ಳಿ ದೊಡ್ಡಮನೆ, ಸಾಯಿನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ನವೀನ್ ಶೆಟ್ಟಿ, ಅರುಣ್ ಕುಮಾರ್ ನಿಟ್ಟೆ, ಸುಮಿತ್ ಶೆಟ್ಟಿ ಕೌಡೂರು, ರತ್ನಾಕರ ಅಮೀನ್, ಪಳ್ಳಿ ಘಟಕದ ಗೌರವಾಧ್ಯಕ್ಷ ಭರತ್ ಹೆಗ್ಡೆ ಪಳ್ಳಿ, ಅಧ್ಯಕ್ಷ ಸುನೀಲ್ ಬಿ ಶೆಟ್ಟಿ ಮತ್ತು ಘಟಕದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಳ್ಳಿ ಇದರ ಮುಖ್ಯ ಶಿಕ್ಷಕಿ ನಾಗರತ್ನ ಎಂ. ಆರ್. ಮತು ಶ್ರೀರಾಮ ಯಕ್ಷಗಾನ ಕಲಾಭಿಮಾನಿ ಬಳಗದ ಅಧ್ಯಕ್ಷ ರತ್ನಾಕರ ಅಮೀನ್, ಪಾವಂಜೆ ಮೇಳದ ನೇಪಥ್ಯ ಕಲಾವಿದರ ಮಹಾಲಿಂಗ ನಾಯ್ಕ ನಿರ್ಚಾಲು, ದೈವ ನರ್ತಕರಾದ ಉಗ್ಗಪ್ಪ ಪರವ ಕೆರ್ವಾಶೆ, ರಂಗಭೂಮಿ ಕಲಾವಿದ ಪ್ರಜ್ವಲ್ ಭಂಡಾರಿ ಕೌಡೂರು, ಸಚಿನ್ ಆಚಾರ್ಯ ಕೌಡೂರು ಇವರನ್ನು ಗೌರವಧನದೊಂದಿಗೆ ಸನ್ಮಾನಿಸಲಾಯಿತು.ಯಕ್ಷಚಂದ್ರಿಕೆ ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ಪರವಾಗಿ ಪತ್ನಿ ದೇವಿಕಾ ಹಾಗೂ ಕಲಾವಿದರ ದಿನೇಶ್ ಬಂಗೇರ ಮತ್ತು ಶಿವ ಇವರು ಸಹಾಯ ಧನ ಸ್ವೀಕರಿಸಿದರು. ಶರತ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಳ್ಳಿ ಇಲ್ಲಿನ ಯಕ್ಷಧ್ರುವ ಯಕ್ಷ ಶಿಕ್ಷಣದ ವಿದ್ಯಾರ್ಥಿಗಳಿಂದ ಶ್ಯಮಂತಕ ರತ್ನ ಹಾಗೂ ಪಾವಂಜೆ ಮೇಳದವರಿಂದ ‘ಗಜೇಂದ್ರ ಮೋಕ್ಷ - ಕಂಸ ವಧೆ- ಅಗ್ರಪೂಜೆ’ ಯಕ್ಷಗಾನ ಬಯಲಾಟ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನು ಮಾರಾಟ ಫೆಡರೇಶನ್‌ನಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್‌ರೇ ಯಂತ್ರ ಕೊಡುಗೆ
ಬನ್ನಂಜೆ ಶನಿ ಕ್ಷೇತ್ರ: ಚಂದ್ರಮಂಡಲ ರಥೋತ್ಸವ