ರಂಗಸ್ಥಳದಲ್ಲಿ ವೇಷಗಳಾಗಿ ವಿಜೃಂಭಿಸುವ ಕಲಾವಿದರ ಕ್ರಿಕೆಟ್‌ ಪಂದ್ಯಾಟ ಸಂಭ್ರಮ

KannadaprabhaNewsNetwork | Published : Apr 28, 2025 11:48 PM

ಸಾರಾಂಶ

ಕಟೀಲು ಮೇಳದವರ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಿಗೆ ಇತ್ತೀಚೆಗೆ ಕ್ರಿಕೆಟ್ ಪಂದ್ಯಕೂಟ ಆಯೋಜಿಸಲಾಗಿತ್ತು. ಕಮಲಶಿಲೆ ಮೇಳ ಶ್ರೀ ದುರ್ಗಾಟ್ರೋಫಿಯನ್ನು ರು.20000 ನಗದಿನೊಂದಿಗೆ ,ಕಟೀಲು ಮೇಳ ರು. 15000 ನಗದಿನೊಂದಿಗೆ ರನ್ನರ್ಸ್ ಅಪ್ ಹಾಗೂ ಕೆರೆಕಾಡು ಮೇಳ ರು.1111 ನಗದಿನೊಂದಿಗೆ ತೃತೀಯ ಬಹುಮಾನ ಗೆದ್ದುಕೊಂಡವು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಯಕ್ಷಗಾನ ಮೇಳಗಳಲ್ಲಿ ದೇವತೆ, ರಾಕ್ಷಸ ವೇಷಗಳನ್ನು ಧರಿಸಿ ಬಯಲಾಟ ಪ್ರದರ್ಶಿಸುವ ಯಕ್ಷಗಾನ ಮೇಳಗಳ ಕಲಾವಿದರು ಶಿಮಂತೂರು ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಆಟ ಆಡಿ ಸಂಭ್ರಮಿಸಿದರು.

ಕಟೀಲು ಮೇಳದವರ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಿಗೆ ಇತ್ತೀಚೆಗೆ ಕ್ರಿಕೆಟ್ ಪಂದ್ಯಕೂಟ ಆಯೋಜಿಸಲಾಗಿತ್ತು.

ಪಂದ್ಯದಲ್ಲಿ ಕಮಲಶಿಲೆ ಮೇಳ ಶ್ರೀ ದುರ್ಗಾಟ್ರೋಫಿಯನ್ನು ರು.20000 ನಗದಿನೊಂದಿಗೆ ,ಕಟೀಲು ಮೇಳ ರು. 15000 ನಗದಿನೊಂದಿಗೆ ರನ್ನರ್ಸ್ ಅಪ್ ಹಾಗೂ ಕೆರೆಕಾಡು ಮೇಳ ರು.1111 ನಗದಿನೊಂದಿಗೆ ತೃತೀಯ ಬಹುಮಾನ ಗೆದ್ದುಕೊಂಡವು.

ಕಮಲಶಿಲೆ ಮೇಳದ ಅಜಿತ್ ಮ್ಯಾನ್ ಆಫ್ ದ ಮ್ಯಾಚ್, ಮ್ಯಾನ್ ಆಫ್ ದ ಸೀರೀಸ್ ರಾಮಪ್ರಕಾಶ್ ಕಟೀಲು ಮೇಳ, ಬೆಸ್ಟ್ ಬೌಲರ್ ಕಮಲಶಿಲೆ ಮೇಳದ ವಿಕ್ರಮ್, ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ ಸಂದೇಶ್ ಬೆಳ್ಳೂರು ಕಟೀಲು ಮೇಳ, ಬೆಸ್ಟ್ ಕೀಪರ್ ಹರಿನಾರಾಯಣ ಭಟ್ ಕಟೀಲು ಮೇಳ ಪಡೆದರು.

ಸಸಿಹಿತ್ಲು , ಪಾವಂಜೆ, ಕಟೀಲು ಆರು ಮೇಳಗಳಲ್ಲಿ ಮೂರು, ನಾಲ್ಕು ಹಾಗೂ ಐದನೇ ಮೇಳಗಳು, ಕೆರೆಕಾಡು ಮೇಳ, ಕೂಡ್ಲು ಮೇಳ, ಕಮಲಶಿಲೆ ಮೇಳ, ಮಂದಾರ್ತಿ ಮೇಳದ ಎರಡು ತಂಡ, ಹಿರಿಯಡ್ಕ ಧರ್ಮಸ್ಥಳ ಸೇರಿದಂತೆ ಒಟ್ಟು 13 ಮೇಳಗಳು ಈ ಶ್ರೀ ದುರ್ಗಾ ಟ್ರೋಫಿ ಕ್ರಿಕೆಟ್ ಪಂದ್ಯಕೂಟದಲ್ಲಿ ಭಾಗವಹಿಸಿದ್ದವು.

.........

ದೇಗುಲ ಮೌನ, ಧ್ಯಾನ ಕೇಂದ್ರವಾಗಲಿ: ಅರುಣ್ ಉಳ್ಳಾಲ್‌ದೇವಾಲಯಗಳು ಮುಗ್ದತನ ಮತ್ತು ತಜ್ಞ ತನದ ಸಂಕೇತವಾಗಿದೆ. ದೇವಸ್ಥಾನ ಮೌನ ಮತ್ತು ಧ್ಯಾನದ ಕೇಂದ್ರವಾಗಬೇಕು. ಜ್ಞಾನ ತಾಣವಾಗಬೇಕು. ಅಗ ಮಾನ ಬರುತ್ತದೆ. ಆ ದೇವಳದಲ್ಲಿ ಆಧ್ಯಾತ್ಮಿಕ ಜಾಗೃತಿ ಆಗಮಿಸುತ್ತದೆ ಎಂದು ಉಪನ್ಯಾಸಕ ಅರುಣ್‌ ಉಳ್ಳಾಲ್ ಅಭಿಪ್ರಾಯಪಟ್ಟಿದ್ದಾರೆ.

ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಇಲ್ಲಿ ಚೂರ್ಣೋತ್ಸವ, ರಾತ್ರಿ ರಥೋತ್ಸವ, ಓಕುಳಿ ಸವಾರಿಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ‘ದೇವಾಲಯಗಳು ಆಧ್ಯಾತ್ಮದತ್ತ ಬೆಳಕು ತೋರುವ ಶ್ರದ್ದಾ ಕೇಂದ್ರಗಳು’ ಕುರಿತು ಅವರು ಉಪನ್ಯಾಸ ನೀಡಿದರು.ಶ್ರೀ ವಿದ್ಯೇಂದ್ರ ಶ್ರೀಪಾದ ಚಿತ್ರಾಪುರ ಮಠ ಕುಳಾಯಿ ಇವರ ಸಾನಿಧ್ಯದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ದೀಪ ಪ್ರಜ್ವಲಿಸಿದರು.ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿಗಳಾದ ಸಂಜೀವ ಎಂ. ಶೆಟ್ಟಿ, ಸುಜಿತ್ ಆಳ್ವ ಏತಮೊಗರು ಗುತ್ತು, ಸಂತೋಷ್ ಕುಮಾರ್ ರೈ ಬೋಳಿಯಾರ್, ಜಯರಾಮ್ ಶಂಭು ಮಲ್ಲಿ ಮದ್ಯ, ಗುರಿಕಾರ ಶ್ರಿನಿವಾಸ ಶೆಟ್ಟಿಗಾರ್ ಕಾಟಿಪಳ್ಳ, ರೋಹಿಣಿ ರಾಧಾಕೃಷ್ಣ ರಾವ್, ಅಧ್ಯಕ್ಷರು ಭಗಿನೀ ಸೇವಾ ಸಮಾಜ ಉಪಸ್ಥಿತರಿದ್ದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಸ್ವಾಗತಿಸಿ, ಪ್ರಸ್ತಾಪಿಸಿದರು.

ವಿಜಯ ಕುಕ್ಯಾನ್ ಪ್ರಾರ್ಥಿಸಿದರು. ಸುಧಾಕರ ಕಾಮತ್ ನಿರೂಪಿಸಿದರು.ಉಮಾನಾಥ ಅಮೀನ್ ವಂದಿಸಿದರು.

Share this article