ಇಡೀ ರಾಜ್ಯದಲ್ಲೇ ಯಳಂದೂರು ತಾಲೂಕು ವಿಭಿನ್ನ, ವಿಶಿಷ್ಟ; ಮಹೇಶ್ ಚಿಕ್ಕಲ್ಲೂರು ಬಣ್ಣನೆ

KannadaprabhaNewsNetwork |  
Published : Dec 09, 2025, 12:30 AM IST
8ಸಿಎಚ್‌ಎನ್‌53ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೂಳೀಪುರ ನಂದೀಶ್, ಶಂಕರ ಅಂಕನಶೆಟ್ಟಿಪುರ ಹಾಗೂ ಹಾಗೂ ಉಪ ಪ್ರಾಂಶುಪಾಲ ಆರ್. ನಂಜುಂಡಯ್ಯ ಅವರನ್ನು ಸನ್ಮಾನಿಸಲಾಯಿತು. ಡಾ. ಎಂ. ಮಹೇಶ್‌ಚಿಕ್ಕಲ್ಲೂರು, ಎನ್‌ರಿಚ್ ಮಹದೇವಸ್ವಾಮಿ, ಕೆಪಿಎಸ್‌ನ ಮಾಜಿ ರಾಜ್ಯ ಉಪಾಧ್ಯಕ್ಷೆ ಕೆ.ಆರ್. ಪ್ರಭಾವತಿ, ಪತ್ರಕರ್ತ ಫೈರೋಜ್‌ಖಾನ್ ಇದ್ದರು. | Kannada Prabha

ಸಾರಾಂಶ

ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೂಳೀಪುರ ನಂದೀಶ್, ಶಂಕರ್ ಅಂಕನಶೆಟ್ಟಿಪುರ ಹಾಗೂ ಉಪಪ್ರಾಂಶುಪಾಲ ಆರ್. ನಂಜುಂಡಯ್ಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಯಳಂದೂರು

ಇಡೀ ರಾಜ್ಯದಲ್ಲೇ ಅತ್ಯಂತ ಚಿಕ್ಕ ತಾಲೂಕಾಗಿರುವ ಯಳಂದೂರು, ಸಾಹಿತ್ಯ, ಕಲೆ, ಸಂಸ್ಕೃತಿ, ಪರಿಸರ, ಬುಡಕಟ್ಟು ಸಂಸ್ಕೃತಿ ಕ್ಷೇತ್ರದಲ್ಲಿ ದೇಶದಲ್ಲೇ ಗುರುತಿಸಿಕೊಂಡಿದೆ ಎಂದು ಬೆಂಗಳೂರು ಜನಪದ ಸಾಹಿತ್ಯ ಪರಿಷತ್ತಿನ ಡಾ.ಎಂ. ಮಹೇಶ್‌ ಚಿಕ್ಕಲ್ಲೂರು ಮಾಹಿತಿ ನೀಡಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅನುಪಮಾ ಟ್ರಸ್ಟ್, ಜನಪರ ಸಾಹಿತ್ಯ ಪರಿಷತ್ತು, ಅಂಜತ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ಮತ್ತು ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಭೌಗೋಳಿಕವಾಗಿ ಚಿಕ್ಕದಿದ್ದರೂ ಕೂಡ 33 ಗ್ರಾಮಗಳಲ್ಲೂ 33 ಕೆರೆಗಳನ್ನು ಹೊಂದಿದ್ದು ಅಚ್ಚ ಹಸಿರಿನಿಂದ ಕೂಡಿದೆ. ಇಲ್ಲಿನ ಬಳೇಮಂಟಪದ ಏಕಶಿಲಾ ಬಳೆಗಳು ವಿಶ್ವಪ್ರಸಿದ್ಧಿ ಪಡೆದಿವೆ. ಕವಿ ಷಡಕ್ಷರದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ಅನರ್ಘ್ಯ ರತ್ನಗಳನ್ನು ನೀಡಿದ ನೆಲೆ ಇದಾಗಿದೆ. ಇಲ್ಲಿ ಕವಿಗೋಷ್ಠಿ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಕವಿಗಳು ವಾಚಿಸಿದ ಕವನಗಳೂ ಕೂಡ ವಿಭಿನ್ನವಾಗಿದ್ದವು ಎಂದು ಬಣ್ಣಿಸಿದರು.

ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣನವರು ಸಮಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿಗಳಾಗಿದ್ದರು. ಸಂವಿಧಾನ ಸಮರ್ಪಣಾ ಮತ್ತು ಕನ್ನಡ ರಾಜ್ಯೋತ್ಸವ ಕುರಿತು ನಡೆಸುತ್ತಿರುವ ಈ ಕವಿಗೋಷ್ಠಿ ಅರ್ಥಪೂರ್ಣವಾಗಿದೆ. ಅಂಬೇಡ್ಕರ್ ಪರಿನಿರ್ವಾಣ ದಿನದಂದು ಅವರಿಗೆ ನಾವು ಸಲ್ಲಿಸುತ್ತಿರುವ ನಿಜವಾದ ಶ್ರದ್ಧಾಂಜಲಿಯೂ ಇದಾಗಿದೆ ಎಂದರು.

ಗಮನ ಸೆಳೆದ ಕವಿಗೋಷ್ಠಿ: ಕವನ ವಾಚಿಸಿದ ಅನೇಕ ಕವಿಗಳ ಕಾವ್ಯಗಳಲ್ಲಿ ಅಂಬೇಡ್ಕರ್‌ರ ಬದುಕು, ಅವರ ತತ್ವಗಳ ಅಳವಡಿಕೆ, ಕನ್ನಡ ಭಾಷೆ, ಬಳಕೆ, ಇಂದಿನ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತು. ಇದರೊಂದಿಗೆ ಹೊಣೆಗಾರ ಹೆಣ್ಣಿನ ನೋವು, ಹೆತ್ತಮ್ಮ, ಹೆತ್ತವರು ಎಂಬ ಕವನಗಳಲ್ಲಿ ತಾಯಿ, ಅಜ್ಜಿಯ ಪ್ರೀತಿ ಇಣುಕಿತು. ಬಿಳಿಗಿರಿರಂಗನ ಕುಸುಮಾಲೆಯ ಪ್ರೇಮ ಪ್ರಸಂಗ, ಕಾಯುತ್ತಿರುವೆ ನಲ್ಲನಿಗೆ ಬದಲಾದ ಹೆಣ್ಣಾಗಿ ಎಂಬ ಶೀರ್ಷಿಕೆಯ ಕವನಗಳು ಗಮನ ಸೆಳೆದವು. 20ಕ್ಕೂ ಹೆಚ್ಚು ಕವಿ, ಕವಯತ್ರಿಯರು ಕವನ ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೂಳೀಪುರ ನಂದೀಶ್, ಶಂಕರ್ ಅಂಕನಶೆಟ್ಟಿಪುರ ಹಾಗೂ ಉಪಪ್ರಾಂಶುಪಾಲ ಆರ್. ನಂಜುಂಡಯ್ಯರನ್ನು ಸನ್ಮಾನಿಸಲಾಯಿತು. ಕೆಪಿಎಸ್‌ನ ಮಾಜಿ ರಾಜ್ಯ ಉಪಾಧ್ಯಕ್ಷೆ ಕೆ.ಆರ್. ಪ್ರಭಾವತಿ, ಪತ್ರಕರ್ತ ಫೈರೋಜ್‌ಖಾನ್, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ನಿವೃತ್ತ ಉಪನೋಂದಣಾಧಿಕಾರಿ ರುದ್ರಯ್ಯ ಮಾತನಾಡಿದರು. ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಆರ್. ನಂಜುಂಡಯ್ಯ, ಪಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀಮಲ್ಲು, ಡಾ.ಸಿ. ಪ್ರೇಮ, ವಸಂತಗೀತಾ, ದೀಪಾಬುದ್ಧೆ, ಮಹದೇವಸ್ವಾಮಿ, ಶಿಕ್ಷಕ ಪುಟ್ಟಸ್ವಾಮಿ, ಭಾಗ್ಯ ಗೌರೀಶ್, ಮಮತಾ, ಅಂಬಳೆ ಜೈಗುರು, ಪ್ರಭಾವತಿ, ಮಮತಾ, ಶಾಂತಕುಮಾರಿ, ನಾಗರಾಜು, ಶಾಂತರಾಜು ಸೇರಿ ಅನೇಕರು ಇದ್ದರು.

------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರಿಗೂ ಸಮಾನತೆ ತಂದು ಕೊಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್: ಲಿಂಗರಾಜಮೂರ್ತಿ
ಜೇಸಿ ಸಂಸ್ಥೆಯಿಂದ ದೇಶದ ಮುಂದಿನ ನಾಯಕರ ಉದಯ: ಪ್ರಜ್ವಲ್ ಎಸ್. ಜೈನ್