ಹಜರತ್ ಸಯ್ಯದ್ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಕೈಗೊಂಡಿದ್ದ ಸೌಹಾರ್ದ ಯಾತ್ರೆಯ ಸಂದರ್ಭದಲ್ಲಿ ಪಟ್ಟಣದ ದರ್ಗಾ ಬಳಿ ಉಳಿದುಕೊಂಡಿದ್ದ ಪುಣ್ಯಭೂಮಿಯಾಗಿದೆ.
ಹೂವಿನಹಡಗಲಿ: ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಸಂಕೇತ ಸಾರುವ ಯಮನೂರು ಸ್ವಾಮಿ- ರಾಜಬಾಗ್ ಸವಾರ್ ಉರೂಸ್ ಶನಿವಾರ ರಾತ್ರಿ ಗಂಧ ಮಹೋತ್ಸವಕ್ಕೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಿಂದೆ ಹಜರತ್ ಸಯ್ಯದ್ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಕೈಗೊಂಡಿದ್ದ ಸೌಹಾರ್ದ ಯಾತ್ರೆಯ ಸಂದರ್ಭದಲ್ಲಿ ಪಟ್ಟಣದ ದರ್ಗಾ ಬಳಿ ಉಳಿದುಕೊಂಡಿದ್ದ
ಪುಣ್ಯಭೂಮಿಯಾಗಿದೆ. ಎಲ್ಲರೂ ಸೌಹಾರ್ದಯುತವಾಗಿ ನಡೆದುಕೊಂಡಾಗ ಮಾತ್ರ ಉರೂಸ್ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.
ಗಂಧ ಮಹೋತ್ಸವ ಮೆರವಣಿಗೆ ಮೂಲಕ ಕುಂಬಾರ ಮನೆಗೆ ಹೋಗಿ ಹೊಸ ಮಡಿಕೆ ತೆಗೆದುಕೊಂಡು, ಮುಖ್ಯ ರಸ್ತೆ ಮೂಲಕ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತಾ, ಪಟ್ಟಣದ ಹೊರ ವಲಯದ ಹಳ್ಳದ ನೀರನ್ನು ಮಡಿಕೆಯಲ್ಲಿ ಭಕ್ತಿಯಿಂದ ತುಂಬಿಕೊಂಡರು. ಬಳಿಕ ಪಟ್ಟಣದ ದರ್ಗಾ ಬಳಿ ಇರುವ ಪವಾಡ ಪೀಠದ ಮುಂದೆ ಮಡಿಕೆಯಲ್ಲಿದ್ದ ನೀರಿನಿಂದ ದೀಪ ಉರಿಸುವ ಪವಾಡ ನಡೆಯಿತು. ಸಾಮರಸ್ಯ ಬೋಧಿಸುವ ಈ ಮಡಿಕೆಯಲ್ಲಿನ ನೀರಿನಿಂದ ಮುಜಾವರರು ದೀಪ ಉರಿಸಿದರು. ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಮೆರವಣಿಗೆಯಲ್ಲಿ ದೇವರ ಕುದುರೆಗಳೆಂದು ಕರೆಯುವ ಕುದುರೆಗಳಿಗೆ, ಅಡ್ಡಲಾಗಿ ಮಲಗಿರುವ ಭಕ್ತರನ್ನು ದಾಟುತ್ತಾ, ಯಮನೂರು ಸ್ವಾಮಿ ಪವಾಡ ಪೀಠಕ್ಕೆ ಬಂದವು. ಉರೂಸ್‌ಗೆ ಬಂದಿರುವ ಸಾವಿರಾರು ಭಕ್ತರು, ದೀಡ್ ನಮಸ್ಕಾರ, ಸಕ್ಕರೆ ಓದಿಸುವುದು, ಬೆಳ್ಳಿ ಕುದುರೆಗಳನ್ನು ದಾನ ನೀಡುವ ಹರಕೆಗಳನ್ನು ತೀರಿಸಿ ಸ್ವಾಮಿ ಕೃಪೆಗೆ ಪಾತ್ರರಾದರು.
ಗಂಧ ಮಹೋತ್ಸವ ಮೆರವಣಿಗೆಯಲ್ಲಿ ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಬಸವ ಕಲ್ಯಾಣದ ಹಜರತ್ ಖಾಜ ಜಿಯಾಉಲ್ ಹಸ್ಸನ್ ಜಾಗಿರ್ದಾರ್ ನಿಜಾಮಿ ಶೇರ್ -ಏ-ಸವಾರ್ ಸಜ್ಜಾದ ನಶೀನ್, ಬೆಳಗಟ್ಟಿಯ ಸೈಯದ್ ಶಾಹ ಅನ್ವರ್ ಬಾಷ (ಸೈಯದ ಶಾಹ ಮುಸ್ತಫಾ ಖಾದ್ರಿ), ಹಜರತ್ ಸೈಯದ್ ಖಲೀಫ್ ಮಹಮದ್ ಹುಸೇನ್ ಶಾವಲಿ ಉರ್ಫ್, ಶ್ರೀರಾಮ ದೇವರ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ರಾಮಸ್ವಾಮಿ, ಚೌಕಿ ಮಠದ ಸದ್ಗುರು ಗಾಡಿತಾತಾ, ಉರೂಸ್ ಸಮಿತಿ ಅಧ್ಯಕ್ಷ ಸರ್ಜಪ್ನವರ್ ಶೆಫಿವುಲ್ಲಾ, ವಾರದ ಗೌಸ್ ಮೋಹಿದ್ದೀನ್, ಪುನೀತ್ ದೊಡ್ಮನಿ, ಜೆ,ಶಿವರಾಜ, ಕೆ.ಪುತ್ರೇಶ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.