ಕನ್ನಡಪ್ರಭ ವಾರ್ತೆ ಹುಕ್ಕೇರಿ
ಯರನಾಳದಲ್ಲಿ ಬುಧವಾರ ಆರಂಭವಾದ ಮಹಾಮಾತಾ ಕಾಳಿಕಾದೇವಿ ಯಾತ್ರಾ ಮಹೋತ್ಸವದಲ್ಲಿ ಚಂಡಿಕಾ ಹೋಮಕ್ಕೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬ್ರಹ್ಮಾನಂದ ಸ್ವಾಮೀಜಿ ಸಾರಥ್ಯದಲ್ಲಿ ಕಾಳಿಕಾದೇವಿ ಮಠ ಚಿಕ್ಕ ಭಾರತವಾಗಿದೆ. ಈ ಧಾರ್ಮಿಕ ಕೇಂದ್ರದಲ್ಲಿ ಹೃದಯದಿಂದ ಬರುವ ವಾಣಿಗಳು ಭಕ್ತರ ಪಾಲಿಗೆ ಅಮೃತ ನುಡಿಗಳಾಗಿವೆ. ಹಾಗಾಗಿ ಇದೊಂದು ತ್ರಿವೇಣಿ ಸಂಗಮದಂತಿದ್ದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಭಕ್ತರ ಪಾಲಿನ ಕಾಮಧೇನು ಎಂದು ಅವರು ಹೇಳಿದರು.
ಪೀಠಾಧಿಪತಿ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಮಹಿಳೆಯರಿಗೆ ಗೌರವ ಕೊಡುವ ದೇಶ ಭಾರತವಾಗಿದೆ. ದೇಶದ ಹಿರಿಮೆ ಹೆಚ್ಚಿಸುವಲ್ಲಿ ಮಠಗಳ ಪಾತ್ರ ಅವಿಸ್ಮರಣೀಯ ಎಂದರು.ಮುಖಂಡರಾದ ಮುಕುಂದ ಮಠದ, ಶಂಕರಯ್ಯ ಮಠದ, ಸುರೇಶ ತಳವಾರ, ಆನಂದ ಹೊಸಮನಿ, ಕಲ್ಲಪ್ಪ ಕಮತಿ, ಆನಂದ ವಸ್ತ್ರದ, ಗೋಪಾಲ ಮಠದ, ರಮೇಶ ಹುಂಜಿ, ಹರಿಕೃಷ್ಣಾ, ಅಭಿನವ, ಯಲ್ಲಾಪುರದ ವೇದ ಅಧ್ಯಯನ ಪಂಡಿತರರಾದ ರಾಮಕೃಷ್ಣ ಭಟ್ಟರ, ಗಣಪತಿ ಭಟ್ಟ, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.