ವೈಸಿಸಿ ಕ್ರಿಕೆಟ್ ಕಪ್‌: ಗರಗಂದೂರಿನ ದಳಪತಿ ಕ್ರಿಕೆಟರ್ಸ್‌ ತಂಡಕ್ಕೆ ಪ್ರಶಸ್ತಿ, ಹಿಡನ್‌ ಲೀಫ್‌ ದ್ವಿತೀಯ

KannadaprabhaNewsNetwork |  
Published : Mar 19, 2026, 02:30 AM IST
ವೈಸಿಸಿ ಕ್ರಿಕೆಟ್ ಕಪ್‌ನ್ನು ಗರಗಂದೂರಿನ ದಳಪತಿ ಕ್ರಿಕೆಟರ‍್ಸ್ ತಂಡಕ್ಕೆ ಪ್ರಶಸ್ತಿ,ಹಿಡನ್‌ ಲೀಫ್‌ ದ್ವಿತೀಯ | Kannada Prabha

ಸಾರಾಂಶ

ಇಲ್ಲಿನ ಯಡೂರು ಗ್ರಾಮದ ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಯಡೂರಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ೨೬ನೇ ವರ್ಷದ ವೈಸಿಸಿ ಕ್ರಿಕೆಟ್ ಕಪ್‌ನ್ನು ಗರಗಂದೂರಿನ ದಳಪತಿ ಕ್ರಿಕೆಟಸ್‌ರ್ ತಂಡ ತನ್ನ ಮುಡಿಗೇರಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಯಡೂರು ಗ್ರಾಮದ ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಯಡೂರಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ೨೬ನೇ ವರ್ಷದ ವೈಸಿಸಿ ಕ್ರಿಕೆಟ್ ಕಪ್‌ನ್ನು ಗರಗಂದೂರಿನ ದಳಪತಿ ಕ್ರಿಕೆಟಸ್‌ರ್ ತಂಡ ತನ್ನ ಮುಡಿಗೇರಿಸಿಕೊಂಡಿತು.ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಸೋಮವಾರಪೇಟೆಯ ಹಿಡನ್ ಲೀಫ್ ಕೂರ್ಗ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ೩೦ ಸಾವಿರ ರು. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೨೦ ಸಾವಿರ ರು. ನಗದು ಹಾಗೂ ಟ್ರೋಫಿ ನೀಡಲಾಯಿತು.ಪಂದ್ಯಾಟದ ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಯನ್ನು ಹಿಡನ್‌ಲೀಫ್ ತಂಡದ ರಾಜೇಶ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ದಳಪತಿ ತಂಡದ ಕವನ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಹಿಡನ್ ಲೀಫ್‌ನ ಉದಯ್, ಫೈನಲ್ ಪಂದ್ಯದ ಮ್ಯಾನ್ ಆಫ್‌ದ ಮ್ಯಾಚ್ ಪ್ರಶಸ್ತಿಯನ್ನು ದಳಪತಿ ತಂಡದ ಅಭಿಷೇಕ್, ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ದಳಪತಿ ತಂಡದ ಅನಿಲ್ ಅವರು ಪಡೆದುಕೊಂಡರು.ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವೈಸಿಸಿ ಕ್ಲಬ್‌ನ ಅಧ್ಯಕ್ಷ ಕಿರಣ್ ಗೌಡ ವಹಿಸಿದ್ದರು. ಕಾರ್ಯದರ್ಶಿ ಲೋಹಿತ್, ಉದ್ಯಮಿ ಡಿ.ಜೆ. ಮಹೇಶ್, ಸಿ.ಡಿ. ಪ್ರವೀಣ್, ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವೈ.ಎಂ. ನಾಗರಾಜು. ಡಿ.ಎಸ್. ಸುರೇಶ್ ರಘು, ಏಲಕ್ಕಿ ಸಹಕಾರ ಸಂಘದ ನಿರ್ದೇಶಕ ಡಿ.ಸಿ. ರಾಜು, ದೊಡ್ಡತೋಳೂರಿನ ಪ್ರಸಿದ್ಧ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು. ಹಿರಿಯ ಕ್ರಿಕೆಟ್ ಆಟಗಾರ ಸ್ಪಾಟ್ ನಾಗ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಕ್ರಿಕೆಟಿಗರಾದ ಯಡೂರು ಗ್ರಾಮದ ಅಸೆಗೋಡಿಮನೆ ಪರಮೇಶ್ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಎಸ್ಸೆಸ್ಸೆಲ್ಸಿ: ಕನ್ನಡ ಪರೀಕ್ಷೆ ಬರೆದ 254 ವಿದ್ಯಾರ್ಥಿಗಳು