ಹಾವೇರಿ: ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಾಗ ನಮ್ಮದೇ ಆದ ಆದರ್ಶಗಳನ್ನು ಇಟ್ಟುಕೊಂಡಿದಿದ್ದೇವೆ. ನಮ್ಮ ಆದರ್ಶ ಮತ್ತು ಅಧಿಕಾರ ಎರಡರ ನಡುವೆ ಸಂಘರ್ಷ ಇರುತ್ತದೆ. ಆದರ್ಶ ತಾಯಿ ಇದ್ದ ಹಾಗೆ, ಅಧಿಕಾರ ಕಟ್ಟಿಕೊಂಡ ಹೆಂಡತಿ ಇದ್ದ ಹಾಗೇ, ತಾಯಿ ಜನ್ಮ ಕೊಟ್ಟಿದ್ದೇನೆ ನನ್ನ ಮಗ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಹೆಂಡತಿ ನಾನು ಇವನಿಗೋಸ್ಕರ ತವರು ಮನೆ ಬಿಟ್ಟು ಬಂದಿದ್ದೇನೆ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಹೇಳಿದರು.
ರೈತರ ಪರವಾಗಿ ರಾಜಕಾರಣ ಮಾಡುವ ನಾಯಕರು ಮೊದಲು ಇರಲಿಲ್ಲ. ವಿರೋಧ ಪಕ್ಷದಲ್ಲಿ ಇದ್ದರೂ ಒಬ್ಬರು, ಇಬ್ಬರೇ. ಶಾಸಕರಿದ್ದರೂ ರೈತರ ಪರ ಹೋರಾಟ ಮಾಡಿ ಅದನ್ನು ಮುಖ್ಯಮಂತ್ರಿಗಳ ವರೆಗೆ ತೆಗೆದುಕೊಂಡು ಹೋಗಿ ರಾಜ್ಯದಲ್ಲಿ ರೈತರ ಪರ ಹೋರಾಟ ಮಾಡುವ ಆಯಾಮ ತಂದವರು ಯಡಿಯೂರಪ್ಪ ಅವರು. ಯಾರು ವಿರೋಧ ಪಕ್ಷ ಇದ್ದಾಗ ಹೋರಾಟ ಮಾಡಿದ್ದರೋ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೆ ತರುವ ಪ್ರಯತ್ನ ಮಾಡಿದರು. ಅವರು ಮೊದಲು ಅಧಿಕಾರಕ್ಕೆ ಬಂದಾಗ ನಾಲ್ಕು ವರ್ಷದ ಅವಧಿಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು. 7.36 ಲಕ್ಷ ಎಕರೆ ಹೊಸದಾಗಿ ನೀರಾವರಿ ಮಾಡಿರುವ ದಾಖಲೆ ಮಾಡಿದರು ಎಂದು ಹೇಳಿದರು.ಬಹಳ ಜನರು ಮಂತ್ರಿಗಳಾಗಿ ಹೋಗಿದ್ದಾರೆ. ಆದರೆ, ಎಂಟತ್ತು ಜನ ಮಂತ್ರಿಗಳು ನೆನಪಿದ್ದಾರೆ. ಮುಖ್ಯಮಂತಿಗಳಲ್ಲಿ ನಿಜಲಿಂಗಪ್ಪ, ದೇವರಾಜ್ ಅರಸು, ಯಡಿಯೂರಪ್ಪ ಅವರ ಹೆಸರು ನೆನಪಿಗೆ ಬರುತ್ತವೆ. ಅವರು ಈ ರಾಜ್ಯದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದರು.