ಎತ್ತಿನಹೊಳೆ ಯೋಜನೆಗೆ ಇದ್ದ ಅಡೆತಡೆಗಳನ್ನು ಮೀರಿ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದೆ. ಸುಮಾರು 22 ಟಿ.ಎಂ.ಸಿ ನೀರು ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸುವ ಯೋಜನೆ ಇದೆ ಎಂದರು.
ಜಿಲ್ಲೆಯ ಗಡಿಭಾಗವಾದ ನಂಗಲಿಗೆ ನೀರು । 3 ಮಾರ್ಗದ ಪೈಪ್‌ಗಳಲ್ಲಿ ಹರಿವು: ಸಚಿವ ಕೆ.ಎಚ್.ಮುನಿಯಪ್ಪ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಡಾ.ಪರಮಶಿವಯ್ಯನವರ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಯೋಜನೆಯು ನೀರು ಇನ್ನು ಒಂದೂವರೆ ವರ್ಷದಲ್ಲಿ ಜಿಲ್ಲೆಯ ಗಡಿಭಾಗವಾದ ನಂಗಲಿಗೆ ಹರಿಯಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನಗರದ ಹಾರೋಹಳ್ಳಿಯ ಸಚಿವರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಇದ್ದ ಅಡೆತಡೆಗಳನ್ನು ಮೀರಿ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದೆ. ಸುಮಾರು 22 ಟಿ.ಎಂ.ಸಿ ನೀರು ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸುವ ಯೋಜನೆ ಇದೆ ಎಂದರು.ಸಕಲೇಶ್ವರದಿಂದ ನೀರನ್ನು ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದ ಸಾಸಲು ಹೋಬಳಿ ಬಳಿ ಶೇಖರಿಸಿ ನಂತರ ದೇವನಹಳ್ಳಿ ಸಮೀಪದ ಕುಂದಾಣದ ಮೂಲಕ ಪಂಪ್ ಮಾಡುವ ಮೂಲಕ 3 ಮಾರ್ಗದ ಪೈಪ್‌ಗಳಲ್ಲಿ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ ಗೌರಿಬಿದನೂರು, ಹೊಸಕೋಟೆ, ಕೆ.ಜಿ.ಎಫ್ ಸೇರಿದಂತೆ ಪೈಪುಗಳ ಮೂಲಕ ಗಡಿಭಾಗದವರೆಗೆ ನೀರನ್ನು ಹರಿಸಲಾಗುವುದು ಎಂದು ಹೇಳಿದರು.ಸಚಿವರಾದ ಸೋಮಣ್ಣ ಮತ್ತು ನನ್ನ ನಡುವೆ ಉತ್ತಮ ಸಂಬಂಧವಿದೆ. ರೈಲ್ವೇ ಕೋಚ್ ಕಾರ್ಖಾನೆಯ ಯೋಜನೆ ಕಾಲಕಾಲಕ್ಕೆ ನವೀಕರಣ ಮಾಡಲಾಗುತ್ತಿತ್ತು, ರೈಲ್ವೆ ಕೋಚ್ ಕಾರ್ಖಾನೆಗೆ 1200 ಎಕರೆ ಭೂಮಿ ಕೋಲಾರ, ಶ್ರೀನಿವಾಸಪುರ ನಡುವೆ ಜಾಗ ಗುರುತಿಸಲಾಗಿದೆ. ಈಗಾಗಲೇ 700 ಎಕರೆ ಸರ್ಕಾರದ ಮತ್ತು ಇತರರ ಬಳಿ ಇದೆ ಉಳಿದ ಜಮೀನು ರೈತರಿಂದ ಖರೀದಿಸಿ ರೈಲ್ವೆ ಇಲಾಖೆಗೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.ರಾಜ್ಯದಲ್ಲಿ ಯಾವುದೇ ರೀತಿ ರಾಜಕೀಯ ಬದಲಾವಣೆಗಳಿಲ್ಲ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿದೆ. ರಾಜ್ಯದ ಆಡಳಿತದ ಬದಲಾವಣೆಗಳನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಸಚಿವ ಸಂಪುಟದ ಪುನರ್ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಮಾನವೇ ಅಂತಿಮ, ಸದ್ಯಕ್ಕೆ ಈ ವಿಷಯವು ಪಕ್ಷದಲ್ಲಿ ಯಾವುದೇ ರೀತಿ ಚರ್ಚೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಪರ್ಯಾಯ ಮನೆಗಳ ಹಂಚಿಕೆ ಮಾಡಲು ಸರ್ಕಾರವುನಿರ್ಧರಿಸಿದೆ ಆದರೆ ರಾಜ್ಯದಲ್ಲಿ ಜೀವನ ಪರ್ಯಾಂತ ಸೂರು ಇಲ್ಲದೆ ಇರುವವರು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡುತ್ತಿದ್ದರೂ ಗಮನ ಹರಿಸದ ಸರ್ಕಾರವು ಕೇರಳದ ಸಿಎಂ ಈ ಬಗ್ಗೆ ಪ್ರಸಾಪಿಸಿದ ಕೂಡಲೇ ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಶಿಫಾರಸ್ಸಿಗೆ ಸರ್ಕಾರ ಮಣೆ ಹಾಕಿದೆ ಎಂಬ ಪ್ರಶ್ನೆಗೆ ಯಾರೇ ನೊಂದವರು ಆಗಿದ್ದರೂ ಸಹ ಮಾನವೀಯತೆ ದೃಷ್ಟಿಯಲ್ಲಿ ಕ್ರಮಕೈಗೊಂಡಿದೆ, ರಾಜ್ಯದ ಪ್ರತಿಯೊಂದು ತಾಲೂಕಿನಲ್ಲೂ ಆರ್ಹರಿಗೆ ನಿವೇಶನ ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ತಿಳಿಸಿದರು.ರಾಜ್ಯ ಕಾಂಗ್ರೆಸ್ ಮುಖಂಡ ಮುಳಬಾಗಿಲಿನ ರಾಮಪ್ರಸಾದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಮುಖಂಡರಾದ ಪ್ರಸಾದ್ ಬಾಬು, ಜಯದೇವ್, ಸೀತಿಹೊಸೂರು ಮುರಳಿ, ಮುರಳಿಗೌಡ, ನಾಗರಾಜ್, ಲಾಲ್‌ಬಹುದ್ದೂರ್ ಶಾಸ್ತ್ರಿ, ಹಾರೋಹಳ್ಳಿ ರವಿ, ಖಲೀಲ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.