ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾನುವಾರ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ವಿಶ್ವ ಯೋಗದಿನದ ಅಂಗವಾಗಿ ಏರ್ಪಡಿಸಿದ ಯೋಗಾಸನಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ದಿನದ ಆಚರಣೆಯ ಪ್ರಸ್ತಾಪವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. 2015 ರಿಂದ ಮೊದಲ ಬಾರಿಗೆ ಅಧಿಕೃತವಾಗಿ ಆಚರಿಸಲು ಆರಂಭಿಸಲಾಯಿತು. ಜೂನ್ 21ರ ಮಹತ್ವ ಈ ದಿನವು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿದ್ದು (ದಕ್ಷಿಣಾಯನ ಆರಂಭ), ಆದ್ದರಿಂದ ಇದು ದೀರ್ಘಾಯುಷ್ಯ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಸಂಕೇತಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮುನಿಗಳು ಮಂಡೂಕಾಸನ, ಪದ್ಮಾಸನ, ವಜ್ರಾಸನ, ಊಟದ ನಂತರ ಮಾಡಲು ಸೂಕ್ತವಾದ ಏಕೈಕ ಆಸನ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಭುಜಂಗಾಸನ ಹಾವಿನ ಹೆಡೆಯಾಕಾರದ ಭಂಗಿ. ಬೆನ್ನು ನೋವನ್ನು ನಿವಾರಿಸಿ, ಶ್ವಾಸಕೋಶವನ್ನು ಬಲಪಡಿಸುತ್ತದೆ. ಧನುರಾಸನ ಬಿಲ್ಲು ಆಕಾರದ ಭಂಗಿ. ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಮತ್ತು ಬೆನ್ನುಹುರಿಯನ್ನು ಬಲಪಡಿಸಲು ಸಹಕಾರಿ. ತಾಡಾಸನ ಮರ ಅಥವಾ ನೇರವಾಗಿ ನಿಲ್ಲುವ ಭಂಗಿ. ದೇಹದ ಸಮತೋಲನವನ್ನು ಸುಧಾರಿಸುತ್ತದೆ. ಹೀಗೆ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನದ ಕುರಿತು ಅನೇಕ ಆಸನಗಳನ್ನು ಹೇಳಿಕೊಟ್ಟರು.ಯೋಗಾಸನ ಸಂದರ್ಭದಲ್ಲಿ ಅನೇಕ ಶ್ರಾವಕ ಶ್ರಾವಕಿಯರು ಇದ್ದರು.