ಯೋಗ ದೇಹ, ಮನಸ್ಸು ಒಗ್ಗೂಡಿಸುವ ಸಾಧನ: ನಿರಂಜನ ಸ್ವಾಮೀಜಿ

KannadaprabhaNewsNetwork |  
Published : Nov 05, 2026, 03:00 AM IST
೪ ಇಳಕಲ್ಲ ೧ | Kannada Prabha

ಸಾರಾಂಶ

ಇಳಕಲ್ಲಿನ ಬಸವ ಕೇಂದ್ರ, ಅಕ್ಕನ ಬಳಗ, ಹಾಗೂ ವಿಜಯ ಮಹಾಂತೇಶ ತರುಣ ಸಂಘದ ಆಶ್ರಯದಲ್ಲಿ ವಿಜಯ ಮಹಾಂತೇಶ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡ ಹಿಮಾಲಯನ್ ಧ್ಯಾನ ಯೋಗ ಮತ್ತು ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನದ ಮುಕ್ತಾಯ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಯೋಗ ಭಾರತದ ಅತ್ಯಂತ ಪ್ರಾಚೀನವಾದ ಕಲೆಯಾಗಿದ್ದು, ದೇಹ ಮತ್ತು ಮನಸ್ಸುನ್ನು ಒಗ್ಗೂಡಿಸುವ ಸಾಧನವಾಗಿದೆ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ನೆಲೆಸಲು ಯೋಗ ಅತ್ಯಗತ್ಯವಾಗಿದೆ ಎಂದು ಯೋಗಗುರು ನಿರಂಜನ ಸ್ವಾಮೀಜಿ ಹೇಳಿದರು.

ಇಳಕಲ್ಲಿನ ಬಸವ ಕೇಂದ್ರ, ಅಕ್ಕನ ಬಳಗ, ಹಾಗೂ ವಿಜಯ ಮಹಾಂತೇಶ ತರುಣ ಸಂಘದ ಆಶ್ರಯದಲ್ಲಿ ವಿಜಯ ಮಹಾಂತೇಶ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡ ಹಿಮಾಲಯನ್ ಧ್ಯಾನ ಯೋಗ ಮತ್ತು ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನದ ಮುಕ್ತಾಯ ಸಮಾರಂಭದ ಶಿಬಿರದಲ್ಲಿ ಮಾತನಾಡಿದ ಅವರು, ದೈಹಿಕ ಆರೋಗ್ಯಕ್ಕಾಗಿ, ಮಾನಸಿಕ ಶಾಂತಿ, ಏಕಾಗ್ರತೆ ಹೆಚ್ಚಿಸಿಕೊಳ್ಳುವುದಕ್ಕೆ ಯೋಗ ಕೇವಲ ವ್ಯಾಯಾಮವಲ್ಲ, ಅದೊಂದು ಉತ್ತಮ ಜೀವನ ಶೈಲಿ. ಪ್ರತಿದಿನ ಸ್ವಲ್ಪ ಸಮಯ ಯೋಗಾಭ್ಯಾಸ ಮಾಡುವುದರಿಂದ ರೋಗ ಮುಕ್ತ ಮತ್ತು ಸಂತೋಷದ ಜೀವನ ನಡೆಸಬಹುದು ಎಂದರು.

ಈ ಹನ್ನೊಂದು ದಿನಗಳಲ್ಲಿ ಕಲಿತ ಹಿಮಾಲಯನ್ ಧ್ಯಾನ ಮತ್ತು ಯೋಗವನ್ನು ಪ್ರತಿಯೊಬ್ಬರು ಪ್ರತಿದಿನ ಅಭ್ಯಾಸ ಮಾಡುವುದರಿಂದ ಮೊಣಕಾಲು ನೋವು, ತಲೆ ನೋವು ಮತ್ತು ದೈಹಿಕ ತೊಂದರೆಗಳಿಂದ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.

ಡಾ.ಗುರುಮಹಾಂತ ಶ್ರೀಗಳು ಆಶೀರ್ವಚನ ನೀಡಿ, ದೇಹ, ಮನಸ್ಸು ಮತ್ತು ಅತ್ಮದ ನಡುವೆ ಸಾಮರಸ್ಯ ಕಲ್ಪಿಸುವ ಹಿಮಾಲಯನ್ ಯೋಗ ಹಾಗೂ ನಿಯಮಿತ ಯೋಗಾಭ್ಯಾಸದಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಹೇಳಿದರು.

ಸಿರಗುಪ್ಪದ ನಾಗಭೂಷಣ ಸ್ವಾಮೀಜಿ ಉಪಸ್ಥಿತರಿದ್ದರು.

ನಿರಂಜನ ಸ್ವಾಮಿಗಳು ಅಮ್ಮಣಗಿ ಶ್ರೀಗಳು, ಕಲಾವಿದರು ಮತ್ತು ಸೇವಾರ್ಥಿಗಳಿಗೆ ಡಾ.ಗುರುಮಹಾಂತ ಶ್ರೀಗಳು ಗೌರವಿಸಿ ಸನ್ಮಾನಿಸಿದರು.

ಬಸವ ಕೇಂದ್ರ, ಅಕ್ಕನ ಬಳಗ, ವಿಜಯ ಮಹಾಂತೇಶ ತರುಣ ಸಂಘ, ಮಹಿಳಾ ಕದಳಿ ವೇದಿಕೆ, ವಚನ ಸಾಹಿತ್ಯ ಪರಿಷತ್, ನೀಲಾಂಬಿಕ ಬಳಗ, ಅಕ್ಕನಾಗಮ್ಮ ಬಳಗ, ಕಿತ್ತೂರು ವೀರರಾಣಿ ಚನ್ನಮ್ಮ ಬಳಗ, ಯುವ ಸೇವಾ ಬಳಗ, ಮಹಾಂತ ಕಲಾ ಲೋಕ, ಜಾಗತಿಕ ಲಿಂಗಾಯತ ಮಹಾಸಭಾ, ಎಸ್.ಆರ್. ಕಂಠಿ ವೇದಿಕೆ, ಕಿಲ್ಲಾ ಮಾರುತಿ ತರುಣ ಸಂಘ, ಅಕ್ಕನ ತವನಿಧಿ, ಫ.ಗು. ಹಳಕಟ್ಟಿ ವೇದಿಕೆ, ನಗರದ ಎಲ್ಲ ಸಂಗೀತ ಕಲಾ ಬಳಗ ಮತ್ತು ವಿವಿಧ ಸಮಾಜದ, ಶೈಕ್ಷಣಿಕ,ಆರ್ಥಿಕ, ಸಂಘ ಹಾಗೂ ಸಂಸ್ಥೆಗಳ ಸದಸ್ಯರು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಮಲ್ಲಯ್ಯ ಗಣಾಚಾರಿ ಶರಣ ಸಿದ್ದಾಂತ ವಿದ್ಯಾಪೀಠದ ಪ್ರಾಧ್ಯಾಪಕರು ಮತ್ತು ಯೋಗ ಗುರು, ಸಂಗಣ್ಣ ಬಂಡರಗಲ್ಲ ಯೋಗ ಕುಟುಂಬ, ಚಿದಂಬರ ದೇಶಪಾಂಡೆ ಯಾಜ್ಞವಲ್ಕ್ಯ ಯೋಗ ಕಮ್ಯುನಿಟಿ, ಗಿರೀಶ್ ಲದ್ವಾ ಸರಳ ಯೋಗ ಪ್ರತಿಷ್ಠಾನ, ಪ್ರಭಯ್ಯ ಬನ್ನಿಗೋಳಮಠ ಮಹಾಂತ ಪಿರಾಮಿಡ್ ಧ್ಯಾನ ಕೇಂದ್ರ, ಬಸವ ನಗರದ ಯೋಗ ಸ್ನೇಹ ಬಳಗದ ಎಲ್ಲಾ ಯೋಗ ಗುರುಗಳು ಮತ್ತು ಯೋಗ ಸದಸ್ಯರು ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.

ಜಗನ್ನಾಥ ಕೆಂಧೂಳಿ ತಬಲಾ ಸಾಥ್, ಶರಣಪ್ಪ ಪತ್ತಾರ ಪ್ಯಾಡ್ ನುಡಿಸಿದರು. ಪ್ರಭಯ್ಯ ಬನ್ನಿಗೋಳಮಠ, ಡಿ.ಜಿ. ಸಜ್ಜನ ಮತ್ತು ಗಿರೀಶ್ ಲದ್ವಾ ಸಾಮೂಹಿಕ ಭಜನೆಗೆ ಕೋರಸ ನೀಡಿದರು,

ಸಂಗಶೆಟ್ಟಿ ವಾಲಿ ಭಾಲ್ಕಿ, ಪ್ರಲ್ಲಾಹದ ಬಾಗಿ ತೇರದಾಳ, ಶಿವು ಧರೆಗೊಂಡ್ರ, ಇಂದ್ರಕುಮಾರ್ ಆಗಲದಾಳ, ಶಿವಲಿಂಗಪ್ಪ ಶೀಲವಂತರ, ಶರಣಪ್ಪ ಅಂಗಡಿ, ಶ್ರೀ ಮಠದ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಪ್ರತಿದಿನ ಶಿಬಿರದ ವೇದಿಕೆ ನಿರ್ವಹಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ