ದೇಹ, ಮನಸ್ಸನ್ನು ಒಂದು ಮಾಡುವುದೇ ಯೋಗ: ಶಶಿಕುಮಾರ್ ಮೆಹರ್ವಾಡೆ

KannadaprabhaNewsNetwork |  
Published : Jun 23, 2025, 12:33 AM IST
22 ಎಚ್‌ಆರ್ ಆರ್‌ 0122 ಎಚ್‌ಆರ್ ಆರ್‌ 01 ಎಹರಿಹರ ಸಮೀಪದ ದೊಡ್ಡಬಾತಿಯ ತಪೋವನದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ತಪೋವನ ಸಮೂಹ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್ ಮೆಹರ್ವಾಡೆ ಹಾಗೂ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು. | Kannada Prabha

ಸಾರಾಂಶ

ದೇಹ ಹಾಗೂ ಮನಸ್ಸನ್ನು ಒಂದುಗೂಡಿಸುವುದೆ ಯೋಗ ಎಂದು ತಪೋವನ ಸಮೂಹ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್ ಮೆಹರ್ವಾಡೆ ತಿಳಿಸಿದರು.

ಅಂತಾರಾಷ್ಟ್ರೀಯ ಯೋಗ ದಿನ । 3 ಸಾವಿರ ಮಕ್ಕಳಿಂದ ಯೋಗಾಭ್ಯಾಸ

ಕನ್ನಡಪ್ರಭ ವಾರ್ತೆ ಹರಿಹರದೇಹ ಹಾಗೂ ಮನಸ್ಸನ್ನು ಒಂದುಗೂಡಿಸುವುದೆ ಯೋಗ ಎಂದು ತಪೋವನ ಸಮೂಹ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್ ಮೆಹರ್ವಾಡೆ ತಿಳಿಸಿದರು.

ಹರಿಹರ ಸಮೀಪದ ದೊಡ್ಡಬಾತಿಯ ತಪೋವನ ಆವರಣದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆ, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ (ಎಸ್‍ಎಲ್‍ಸಿಎ) ಸಹಯೋಗದಲ್ಲಿ ಶನಿವಾರ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ದೇಹವೆಲ್ಲೋ ಇರುತ್ತೆ, ಯಾವುದೋ ಕಾರ್ಯ ಮಾಡುತ್ತಿರುತ್ತೇವೆ, ಆದರೆ ಮನಸ್ಸು ಎಲ್ಲಿಯೋ ಇರುತ್ತೆ. ಇವೆಲ್ಲ ಪರಸ್ಪರ ಬೇರೆಯಾದಾಗ ಮಾಡುವ ಕಾರ್ಯ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ. ಈ ಮೂರೂ ಒಟ್ಟಿಗೆ ಸೇರಿದಾಗ ಬರುವುದೇ ಏಕಾಗ್ರತೆ. ಏಕಾಗ್ರತೆಯಿಂದ ಮಾಡುವ ಕಾರ್ಯ ಯಶಸ್ವಿಯಾಗಲು ಹಾಗೂ ಸಿದ್ಧಿಸಲು ಸಾಧ್ಯ. ಏಕಾಗ್ರತೆ ಸಾಧಿಸಲು ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದರು.

ಅಂತಹ ಯೋಗವನ್ನು ಇಡಿ ಪ್ರಪಂಚಕ್ಕೆ ನೀಡಿದ್ದು ಮೋದಿ ಅವರ ಸಾಧನೆ ಇಂದು ಯೋಗವನ್ನು ಪ್ರಪಂಚದ ಎಲ್ಲ ದೇಶಗಳು ಒಪ್ಪಿಕೊಂಡು ಮಾಡುತ್ತಿದ್ದಾರೆ. ಆದರೆ ಕೆಲವರು ಮೊಬೈಲುಗಳಲ್ಲಿ ಕಳೆದು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹರಿಹರದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ನಮ್ಮ ದೇಶದ ಸಂಸ್ಕøತಿ ಪರಂಪರೆ ಋಷಿ ಮುನಿಗಳ ಕಾಲದಲ್ಲಿದ್ದ ಈ ಯೋಗವನ್ನು ಇಡೀ ಪ್ರಪಂಚಕ್ಕೆ ತಲುಪಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದರು.

ನಮ್ಮೆಲ್ಲರ ಆರೋಗ್ಯ ಶಾಂತಿ ಹಾಗೂ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿತ್ಯ ಯೋಗವನ್ನು ಮಾಡೊಣ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಯೋಗವನ್ನು ತಲುಪಿಸೋಣ. ಹರಿಹರದ ತುಂಗಭದ್ರಾ ನದಿ ತೀರದ ತುಂಗಭದ್ರಾರತಿ ಮಂಟಪದ ಬಳಿ ಯೋಗ ಮಾಡಲು ಪ್ರಶಸ್ತ್ಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರಕೃತಿಯ ಸೊಭಗನ್ನು ನೋಡಿದ್ದೀರಿ. ಮುಂದಿನ ಬಾರಿ ಅಲ್ಲಿಗೆ ಬಂದು ನದಿಯ ಸೊಭಗನ್ನು ಸವಿಯಿರಿ ಎಂದರು.

ಯೋಗ ದಿನಾಚರಣೆ ನಿಮಿತ್ತ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಭ್ಯಾಸ ಹಾಗೂ ವಿವಿಧ ಆಸನಗಳನ್ನು ಮಾಡಿದರು. ವಿವಿಧ ಯೋಗ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿ 20ಕ್ಕೂ ಹೆಚ್ಚು ಯೋಗ ಭಂಗಿಗಳನ್ನು ಪ್ರದರ್ಶಿಸಿ ಜನ, ಮನ ಸೆಳೆದರು.

ಈ ವೇಳೆ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪೂರೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಹನುಮಂತಪ್ಪ, ಜೈನ್ ಸಮೂಹ ಸಂಸ್ಥೆ ಪ್ರಾಚಾರ್ಯ ನಾಗರಾಜ್, ವಿದ್ವತ್ ಮೆಡಿಕಲ್ ಮತ್ತು ಐಐಟಿ ಸಂಸ್ಥೆಯ ಅರುಣ್‍ಕುಮಾರ್ ಬಿ.ಎಸ್, ಹನುಮಂತಪ್ಪ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ.ಸುಮನಾ ಭಟ್, ತಪೋವನದ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಅಶ್ವಿನಿ ಕೆ.ಆರ್., ತಪೋವನದ ನರ್ಸಿಂಗ್‌ ಕಾಲೇಜಿನ ಶೈಲಜಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ