ಕೊಪ್ಪ: ಹರಿಹರಪುರ ಸಮೀಪದ ಅದ್ದಡ ಪ್ರಭೋದಿನಿ ಗುರುಕುಲ, ಯೋಗ ಬಳಗ, ಎ.ಎಲ್.ಎನ್.ರಾವ್. ಕಾಲೇಜು, ನಚಿಕೇತ ಶಾಲೆ ಜಂಟಿಯಾಗಿ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೊಪ್ಪ ಪುರಭವನದಲ್ಲಿ ಶನಿವಾರ ಯೋಗ ಪ್ರದರ್ಶನ ಮತ್ತು ಯೋಗಕ್ಕೆ ಸಂಬಂಧಿಸಿದ ವಿವಿಧ ನೃತ್ಯವನ್ನು ಪ್ರದರ್ಶಿಸಲಾಯಿತು.
ಎ.ಎಲ್.ಎನ್.ರಾವ್. ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ. ಪಲ್ಲವಿ ಹೆಗಡೆ ಇವರು ಯೋಗದಿಂದ ಮಧುಮೇಹ ನಿವಾರಣೆಯ ಬಗ್ಗೆ ವಿಶೇಷವಾದ ಮಾಹಿತಿ ನೀಡಿದರು. ಮಧು ಮೇಹ ನಿವಾರಣೆಯಲ್ಲಿ ಉಪಯೋಗವಾಗುವ ವಿವಿಧ ಆಸನ ಮತ್ತು ಪ್ರಾಣಾಯಾಮದ ಭಂಗಿಗಳನ್ನು ಎ.ಎಲ್.ಎನ್.ರಾವ್. ಕಾಲೇಜು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.
ಪ್ರಭೋದಿನಿ ಗುರುಕುಲದ ಉಮೇಶ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗಾಯಿತ್ರಿ ವಿವಿದೊಧ್ದೇಶ ಸಂಘದ ಅಧ್ಯಕ್ಷರಾದ ಮಂಗಳ ಪ್ರವೀಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗ ಬಳಗದ ಸದಸ್ಯರು, ಎಎಲ್‌ಎನ್ ರಾವ್ ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ನಚಿಕೇತ ಶಾಲಾ ಮಕ್ಕಳು, ಸಾರ್ವಜನಿಕರು ಹಾಜರಿದ್ದರು.