ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಯೋಗ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಕಡೂರುಪ್ರತಿಯೊಬ್ಬರು ಯೋಗ ಮಾಡುವ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ಸಧೃಡ ಆರೋಗ್ಯ ಕಾಪಾಡಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.10ನೇ ವಿಶ್ವಯೋಗ ದಿನದ ಅಂಗವಾಗಿ ಶುಕ್ರವಾರ ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ, ತಾಲೂಕು ಆಡಳಿತ, ಆಯುಷ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಘ, ಸಂಸ್ಥೆಗಳಿಂದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಯೋಗ ಪ್ರದರ್ಶನದಲ್ಲಿ ಮಾತನಾಡಿದರು. ಆಧುನಿಕ ಯುಗದ ಒತ್ತಡ ಜೀವನದ ನಡುವೆ ಮನುಷ್ಯ ಉತ್ತಮ ಆರೋಗ್ಯ ಪಡೆಯಲು ಯೋಗವನ್ನು ದಿನಚರಿಯಾಗಿ ಅಳವಡಿಸಿಕೊಳ್ಳಬೇಕು. ಜೂನ್ 21ನೇ ತಾರೀಖಿಗೆ ಯೋಗವನ್ನು ಮಾತ್ರ ಸೀಮೀತಗೊಳಿಸದೆ ದಿನ ನಿತ್ಯ ಯೋಗಾಬ್ಯಾಸ ಮಾಡುವುದರಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿದೆ. ಕಡೂರು ಪಟ್ಟಣದಲ್ಲಿ ಯೋಗ ಮಂದಿರ ಸ್ಥಾಪಿಸಿ ಅಲ್ಲಿ ನಿತ್ಯ ಯೋಗ ಕಲಿಕೆಗೆ ಪುರಸಭೆ ಒತ್ತು ನೀಡಲಿದ್ದು ತಾವು ಸಹಕಾರ ನೀಡುವುದಾಗಿ ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಯೋಗದಿಂದ ಆರೋಗ್ಯ ಪಡೆಯುವುದಲ್ಲದೆ ಆಯಸ್ಸು ಸಹ ವೃದ್ದಿಸಿಕೊಳ್ಳಬಹುದು. ತಾವು ಸಹ ಗಿರೀಶ್ ಅವರಿಂದ ಯೋಗವನ್ನು ದಿನ ನಿತ್ಯ ಅಭ್ಯಾಸ ಮಾಡಿ ಕಲಿಯುತ್ತಿದ್ದು ಯೋಗ ದಿಂದ ಒತ್ತಡ, ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿದೆ ಎಂದರು. ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಗಿರೀಶ್ ಮಾತನಾಡಿ ಭಾರತೀಯ ಋಷಿ ಮುನಿಗಳ ತಪಸ್ಸಿನ ಫಲ ಯೋಗ. ಇದಕ್ಕೆ 6 ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಯೋಗಾಭ್ಯಾಸದಿಂದ ತನ್ನ ಆರೋಗ್ಯ ಕಾಪಾಡಿ ಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಭಾರತ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಇಡೀ ಪ್ರಪಂಚವೇ ಯೋಗ ಕಲೆ ಯನ್ನು ಸಂಭ್ರಮದಿಂದ ಬರಮಾಡಿಕೊಂಡು ಸತತ 10 ವರ್ಷದಿಂದ ಜೂನ್ 21 ರಂದು ಯೋಗ ದಿನವನ್ನಾಗಿ ಆಚರಿಸ ಲಾಗುತ್ತಿದೆ ಎಂದರು. ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷ ಬೆಂಕಿ ಶೇಖರಪ್ಪ, ಡಾ.ದಿನೇಶ್,ಡಾ.ಪೂರ್ಣಿಮಾ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ. ಡಾ.ಉಮೇಶ್, ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಡಾ.ನಿರ್ಮಲ, ಡಾ.ದೊಡ್ಡಗುಣಿ, ಡಾ.ಮಂಜುನಾಥ್, ನರೇಂದ್ರನಾಥ್, ಮಂಗಳಾ ನರೇಂದ್ರ, ಬಿಇಓ ಸಿದ್ಧರಾಜನಾಯ್ಕ,ವಿಜಯಾಗಿರೀಶ್, ಟಿ.ಆರ್.ಲಕ್ಕಪ್ಪ, ಕಾವೇರಿ ಲಕ್ಕಪ್ಪ, ಹಾಗೂ ಪಟ್ಟಣದ ಗಣ್ಯರು ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು. 21ಕೆಕೆಡಿಯು3
ಕಡೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀರಾಘವೇಂದ್ರ ಯೋಗ ಸಂಸ್ಥೆ ಆಯೋಜಿಸಿದ್ದ ಯೋಗ ದಿನದಲ್ಲಿ ಶಾಸಕ ಕೆ.ಎಸ್.ಆನಂದ್ ಯೋಗ ಪ್ರದರ್ಶಿಸಿದರು.21ಕೆಕೆಡಿಯು3ಎ..
ಕಡೂರಿನ ತಾಲೂಕು ಕ್ರೀಡಾಂಗಣದಲ್ಲಿ ವಿಶ್ವಯೋಗ ದಿನದ ಅಂಗವಾಗಿ ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಶಾರದೊಂದಿಗೆ ಸಾರ್ವಜನಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದ ಯೋಗಪಟುಗಳು.