ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿಲು ಇನ್ನಿಲ್ಲದ ಕಸರತ್ತು ನಡೆಸಿದ ಅಭ್ಯರ್ಥಿಗಳು, ಸೋಮವಾರ ಸಂಜೆಗೆ ಬಹಿರಂಗ ಚುನಾವಣೆ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಮನೆ ಮನೆಗೆ ತರಳಿ ಮತಯಾಚನೆ ಮಾಡಿದರು.
ನಗರದ ರೈಲ್ವೆ ನಿಲ್ದಾಣ, ದೊಡ್ಡ ಮಳೂರು ಗ್ರಾಮ, ರಾಘವೇಂದ್ರ ಮಠ, ಕೋಟೆ, ಸಂತೆ ಮೊಗೇನಹಳ್ಳಿ, ಮಳೂರು ಪಟ್ಟಣ, ಹೊಡಿಕೆ ಹೊಸಹಳ್ಳಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತಯಾಚನೆ ಮಾಡಿದರು.
ಇನ್ನು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಗ್ರಾಮಗಳ ವ್ಯಾಪ್ತಿ ಹಾಗೂ ನಗರ ಪ್ರದೇಶದಲ್ಲಿ ಮತಯಾಚನೆ ಮಾಡಿದರು.ಪೊಟೋ೧೨ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಸಂತೆ ಮೊಗೇನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮತಯಾಚನೆ ಮಾಡಿದರು.