ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕಾಲಜ್ಞಾನ ಎಂದರೆ ಯೋಗ ಸಿದ್ಧಿ ಪಡೆದ ತಪಸ್ವಿಯ ಮುಖದಿಂದ. ಕೈವಾರ ತಾತಯ್ಯ ತನ್ನ ಕೀರ್ತನೆಗಳು ಹಾಗೂ ತತ್ವ ಪದಗಳನ್ನು ಹೇಳುವ ಮೂಲಕ ಮನೆ ಮಾತಾಗಿದ್ದರು ಎಂದರು.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿ, ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪರಿಚಯಿಸಿದರು. ಯೋಗಿ ನಾರೇಯಣ ಯತೀಂದ್ರರು ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದರು. ಕೈವಾರ ತಾತಯ್ಯನವರು ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಖ ಘಟನೆಗಳು ಸತ್ಯವಾಗಿವೆ ಎಂದರು.ಆಹಾರವಿದ್ದರೂ ಕೊಳ್ಳಲು ಆಗಲ್ಲ, ದುಬಾರಿ ಜಗತ್ತಿನಲ್ಲಿ ವಿಚಿತ್ರ ಬರಗಾಲ, ಪತಿ- ಪತ್ನಿ ಸಂಬಂಧಕ್ಕೆ ಧಕ್ಕೆ ಸೇರಿದಂತೆ ಸಮಾಜದ ಬಗ್ಗೆ ಅನೇಕ ಪ್ರಚಲಿತ ವಿಷಯಗಳ ಬಗ್ಗೆ ಬಹಳ ಹಿಂದೆಯೇ ಉಲ್ಲೇಖಿಸಿದ್ದು, ಅಚ್ಚರಿ ಹಾಗೂ ಗಮನಾರ್ಹ ಎಂದರು.
ಸಮಾನವಾಗಿ ಪ್ರೀತಿಸುತ್ತಿದ್ದರು:
ಕೋಲಾರ ಜಿಲ್ಲೆಯಲ್ಲಿ ಸ್ಥಾಪಿತವಾದ ಸಂಸ್ಥೆ ಇವತ್ತು ಕರ್ನಾಟಕ ಸರ್ಕಾರ ಕೈವಾರ ಪ್ರದೇಶವನ್ನು ಬಯೋಲಾಜಿಕಲ್ ರಿಸರ್ವ್ ಅರಣ್ಯ ಎಂದು ಘೋಷಣೆ ಮಾಡಿದ್ದಾರೆ. ಅಲ್ಲಿರುವ ಜಿಂಕೆ, ನವಿಲುಗಳು ಇತ್ಯಾದಿಗಳನ್ನು ಯಾವುದೇ ಜೀವಿಗಳನ್ನು ಯಾರು ಮುಟ್ಟದ ಸ್ಥಿತಿಯಲ್ಲಿ ಇಟ್ಟಿದ್ದಾರೆ. ಏಕೆಂದರೆ ಕೈವಾರ ತಾತಯ್ಯನವರು ಎಲ್ಲಾ ಜೀವಿಗಳನ್ನು ಅಷ್ಟೇ ಪ್ರೀತಿಸುತ್ತಿದ್ದರು. ಮತ್ತು ಸುತ್ತಮುತ್ತ ಪರಿಸರವನ್ನು ಬೆಳೆಸಿದಂತ ಜೀವ ಆಧ್ಯಾತ್ಮಿಕ ಜೀವ ಅದು ಎಂದರು.
ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಅಂಗವಾಗಿ ಅವರ ಭಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆಯು ಕೆ.ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆಯ ಮೂಲಕ ಕಲಾಮಂದಿರಕ್ಕೆ ತಲುಪಿತು. ವಿವಿಧ ಬಲಿಜ ಸಂಘಗಳ ಮುಖಂಡರು ಪಾಲ್ಗೊಂಡಿದ್ದರು.