ಗೋಕರ್ಣದ ಸಮುದ್ರದಲ್ಲಿ ಮುಳುಗಿ ಯುವತಿ ಸಾವು, ಓರ್ವ ಪಾರು

KannadaprabhaNewsNetwork |  
Published : Jan 27, 2026, 03:45 AM IST
ಅಸ್ವಸ್ಥಗೊಂಡ ಪ್ರವಾಸಿಗನಿಗೆ ವೈದ್ಯರು ಚಿಕಿತ್ಸ ನೀಡಿದರು. | Kannada Prabha

ಸಾರಾಂಶ

ಸಮುದ್ರದಲ್ಲಿ ಆಟವಾಡಲು ತೆರಳಿದ ಯುವತಿಯೋರ್ವಳು ಸುಳಿಗೆ ಸಿಲುಕಿ ಸಾವಿಗೀಡಾದ ಘಟನೆ ಇಲ್ಲಿನ ಮುಖ್ಯ ಕಡಲ ತೀರದಲ್ಲಿ ಭಾನುವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಸಮುದ್ರದಲ್ಲಿ ಆಟವಾಡಲು ತೆರಳಿದ ಯುವತಿಯೋರ್ವಳು ಸುಳಿಗೆ ಸಿಲುಕಿ ಸಾವಿಗೀಡಾದ ಘಟನೆ ಇಲ್ಲಿನ ಮುಖ್ಯ ಕಡಲ ತೀರದಲ್ಲಿ ಭಾನುವಾರ ಸಂಜೆ ನಡೆದಿದೆ.

ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (೨೨) ಮೃತರು.

ಒಟ್ಟು ೧೨ ಜನ ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು ಸಂಜೆ ೭ ಗಂಟೆ ನಂತರ ಸಮುದ್ರಕ್ಕೆ ಇಳಿದಿದ್ದು ಇದರಲ್ಲಿ ಇಬ್ಬರು ಸಮುದ್ರ ಪಾಲಾಗಿದ್ದರು. ಮಹಮದ್ ಅಲಿ ತೀವ್ರ ಅಸ್ವಸ್ಥಗೊಂಡು ದಡಕ್ಕೆ ಬಂದಿದ್ದು ತಕ್ಷಣ ಖಾಸಗಿ ಆ್ಯಂಬುಲೆನ್ಸ್ ಮೂಲಕ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.

ಆರೋಗ್ಯ ಕೇಂದ್ರದಲ್ಲಿದ್ದ ಅಂಕೋಲಾ ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ್ ನಾಯ್ಕ್ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಜೀವಾಪಾಯದಿಂದ ಪಾರು ಮಾಡಿದ್ದಾರೆ.

ಸಮುದ್ರದಲ್ಲಿ ಕೊಚ್ಚಿ ಹೋದ ಯುವತಿ ಹಲವು ಗಂಟೆಗಳ ಕಾಲ ನಾಪತ್ತೆಯಾಗಿದ್ದು, ಮೃತದೇಹ ಶೋಧ ಕಾರ್ಯಕ್ಕೆ ಅಗ್ನಿಶಾಮಕ ದಳದವರು ಸಹ ಆಗಮಿಸಿದ್ದರು. ನಂತರ ತಡರಾತ್ರಿ ಕಡಲತೀರದಲ್ಲಿ ಶವ ಪತ್ತೆಯಾಗಿತ್ತು. ಮೃತದೇಹವನ್ನ ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೂವರು ಪ್ರವಾಸಿಗರ ರಕ್ಷಣೆ:ಸಮುದ್ರ ಸುಳಿಗೆ ಸಿಲುಕಿದ್ದ ಮೂವರು ಪ್ರವಾಸಿಗರನ್ನ ರಕ್ಷಿಸಿದ ಘಟನೆ ಸೋಮವಾರ ಮಧ್ಯಾಹ್ನ ಇಲ್ಲಿನ ಮುಖ್ಯ ಕಡಲತೀರದಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಮನು (೨೩), ಶಿವು (೩೬), ಕಿರಣ್ (೨೬) ರಕ್ಷಣೆಗೊಳಗಾದವರು.ಒಟ್ಟು ೨೧ ಜನ ಸ್ನೇಹಿತರೊಡನೆ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಈಜಾಡಲು ತೆರಳಿದ ವೇಳೆ ಮೂವರು ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದರು. ಇದನ್ನ ಗಮನಿಸಿದ ಕರ್ತವ್ಯ ನಿರತ ಸಿಬ್ಬಂದಿಗಳಾದ ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ, ಮೋಹನ ಅಂಬಿಗ ತಕ್ಷಣ ಧಾವಿಸಿ ರಕ್ಷಣೆ ಮಾಡಿದ್ದು, ಇವರಿಗೆ ಬೀಚ್ ಸೂಪರ್‌ವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ, ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ದೀಪಕ್ ಗೌಡ ಸಹಾಯ ಮಾಡಿದ್ದಾರೆ. ಪ್ರವಾಸಿಗರ ಜೀವ ಉಳಿಸಿದ ಜೀವರಕ್ಷಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಕ್ಕೆ ಪ್ರವಾಸಿಗರು, ಸ್ಥಳೀಯರು ಅಭಿನಂದಿಸಿದ್ದಾರೆ.ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ:ನೀರಿನ ಸುಳಿಗೆ ಸಿಲುಕಿ ಮುಳುಗಿ ಹೋಗುತ್ತಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಸೋಮವಾರ ವಿಭೂತಿ ಫಾಲ್ಸ್‌ನಲ್ಲಿ ನಡೆದಿದೆ.ತಮಿಳುನಾಡು ಚೆನ್ನೈನ ಆದಿತ್ಯ (೧೯) ಜೀವಾಪಾಯದಿಂದ ಪಾರಾದವರು.

ಒಟ್ಟು ೪೦ ಮಂದಿಯೊಂದಿಗೆ ಪ್ರವಾಸಕ್ಕೆ ಬಂದಿದ್ದು, ಫಾಲ್ಸ್‌ನಲ್ಲಿ ನೀರಿಗಿಳಿದಿದ್ದು, ಈ ವೇಳೆ ಓರ್ವ ಮುಳುಗುತ್ತಿರುವುದನ್ನ ಗಮನಿಸಿದ ಕರ್ತವ್ಯ ನಿರತ ಜೀವರಕ್ಷಕ ಸಿಬ್ಬಂದಿ ವಿಜಯಕುಮಾರ ನಾಯಕ ತಕ್ಷಣ ಧಾವಿಸಿ ಹಗ್ಗ ಮತ್ತಿತರ ಪರಿಕರ ಬಳಸಿ ಹರಸಾಹಸ ಮಾಡಿ ಮೇಲಕ್ಕೆ ತಂದು ಜೀವ ಉಳಿಸಿದ್ದಾರೆ. ಜೀವಾಪಾಯದಿಂದ ಪಾರುಮಾಡಿದ ಜೀವರಕ್ಷಕ ಸಿಬ್ಬಂದಿಗೆ ಪ್ರವಾಸಿಗರು ಹಾಗೂ ಸ್ಥಳೀಯರು ಪ್ರಶಂಸಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾದಿರಾಜ ವಾಲಗ ಮಂಡಳಿ’ ಪೋಸ್ಟರ್‌ ಬಿಡುಗಡೆ
ಆನ್ಲೈನ್‌ ಹಾವಳಿ ವ್ಯಾಪಾರಿಗಳಿಗೆ ಠುಸ್‌ ಪಟಾಕಿ