ರಾಮನಗರ: ಚರ್ಕವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಗೋಡೆಗಳಿಗೆ ಬಣ್ಣ ಬಳಿದು ಶಾಲೆಯನ್ನು ಚೆಂದಗೊಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಸುಮಾರು 20ರಿಂದ 30 ಮಂದಿಯ ತಂಡ ಅನುದಾನಿತ ಪ್ರಗತಿ ವಿದ್ಯಾಸಂಸ್ಥೆಯ ಗೋಡೆಗಳನ್ನು ಉಜ್ಜಿ, ಸ್ವಚ್ಛಗೊಳಿಸಿ ನಂತರ ಬಣ್ಣ ಬಳಿದರು.
ತಮ್ಮ ಸಂಘಟನೆಯದ್ದು ಸ್ವಯಂ ಸೇವಕರ ಆಧಾರಿತ ಸೇವೆ. ಶಾಲೆಯ ಗೋಡೆಗಳಿಗೆ ಬಳಿಯುತ್ತಿರುವ ಬಣ್ಣ ಸಗಣಿಯಿಂದ ತಯಾರಿಸಿದ್ದಾಗಿದೆ. ಬೀದರ್‌ನ ಕೈಗಾರಿಕೆಯಲ್ಲಿ ಈ ಬಣ್ಣ ಉತ್ಪಾದನೆಯಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಬಣ್ಣದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು.
ಐರನ್ ಮೌಂಟೇನ್ ಉದ್ಯಮದ ವ್ಯವಸ್ಥಾಪಕಿ ನಮಿತಾ ಮಾತನಾಡಿ, ತಮ್ಮ ಸಂಬಂಧಿಕರೊಬ್ಬರ ಮಗು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದೆ. ಶಾಲೆಯ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ, ಈ ಶಾಲೆಯ ಸ್ಥಿತಿ ಅರ್ಥವಾಯಿತು. ತಮ್ಮ ಉದ್ಯಮದ ಸಿಎಸ್ಆರ್ ನಿಧಿಯಿಂದ ಶಾಲೆಗೆ ಒಂದು ರೂಪ ಕೊಡಬೇಕು ಎಂದು ಅನಿಸಿತು. ಇದಕ್ಕೆ ಪೂರಕವಾಗಿ ಯುವ ಬ್ರಿಗೇಡ್‌ನ ಚರ್ಕವರ್ತಿ ಸೂಲಿಬೆಲೆಯವರು ಸಹ ಸ್ಪಂದಿಸಿದರು ಎಂದು ಹೇಳಿದರು.ಪ್ರಗತಿ ಶಾಲೆಯ ತರಗತಿಗಳಿಗೆ ಅಗತ್ಯವಾಗಿದ್ದ ಸೀಲಿಂಗ್ ಫ್ಯಾನ್‌ಗಳು, ಡೆಸ್ಕ್‌ಗಳು, ಗ್ರೀನ್ ಬೋರ್ಡುಗಳು, ವಾಟರ್ ಫಿಲ್ಟರ್, ಹಂಚಿನ ಮೇಲೆ ಟಾರ್ ಶೀಟ್‌ಗಳ ಹೊದಿಕೆ, ಅಲ್ಯೂಮೀನಿಯಂ ಕಿಟಕಿಗಳನ್ನು ಪೂರೈಸಲಾಗಿದೆ. ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಸಾಕ್ಸ್, ಸಮವಸ್ತ್ರ ನೀಡಲಾಗಿದೆ. ಇಂದು ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಜೊತೆಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್‌ಗಳನ್ನು ಸಹ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ತಮ್ಮದು ಅನುದಾನ ರಹಿತ ಕನ್ನಡ ಶಾಲೆ, ದಾನಿಗಳ ನೆರವಿನಿಂದಲೇ ಅಭಿವೃದ್ಧಿಯಾಗಬೇಕಾಗಿದೆ. ತಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಂದು ನಡೆದ ಶ್ರಮದಾನದಲ್ಲಿ ಯುವ ಬ್ರಗೇಡ್ ಕಾರ್ಯಕರ್ತರೊಂದಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಕೋಟ್.............
-ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್
ರಾಮನಗರದ ಪ್ರಗತಿ ವಿದ್ಯಾ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್‌ಗಳನ್ನು ಯುವ ಬ್ರಿಗೇಡ್ ನವರು ಕೊಡುಗೆಯಾಗಿ ನೀಡಿದರು.