ಯುವ ಜನಾಂಗ ಕ್ರೀಡೆಯಲ್ಲಿ ತೊಡಗಿದರೆ ದುಶ್ಚಟ ತಪ್ಪಿಸಬಹುದು: ನಿವೃತ್ತ ಯೋಧ ಪ್ರದೀಪ್

KannadaprabhaNewsNetwork |  
Published : Feb 01, 2026, 02:30 AM IST
 ನರಸಿಂಹರಾಜಪುರ ತಾಲೂಕು ಶಾಮಿಯಾನ,ಡೆಕೋರೇಷನ್, ದ್ವನಿ ಮತ್ತು ಬೆಳಕು ಮಾಲೀಕರ ಸಂಘ ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಸುಬೇದಾರ್ ಪ್ಟಾಟ್ರಿಕ್ ನಿವೃತ್ತ ಯೋಧ ಪ್ರದೀಪ್ ಉದ್ಘಾಟಿಸಿದರು | Kannada Prabha

ಸಾರಾಂಶ

ನರಸಿಂಹರಾಜಪುರಯುವಜನಾಂಗಕ್ಕೆ ಕ್ರೀಡಾ ಕೂಟಗಳನ್ನು ಆಯೋಜಿಸಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದರಿಂದ ಅವರು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿ ಯಾಗಲಿದೆ ಎಂದು ಬಿ.ಎಚ್.ಕೈಮರದ ಸುಬೇದಾರ್ ಪ್ಯಾಟ್ರಿಕ್ ನಿವೃತ್ತ ಯೋಧ ಪ್ರದೀಪ್ ಹೇಳಿದರು.

ಶಾಮಿಯಾನ,ಡೆಕೋರೇಷನ್, ದ್ವನಿ ಮತ್ತು ಬೆಳಕು ಮಾಲೀಕರ ಸಂಘದಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಯುವಜನಾಂಗಕ್ಕೆ ಕ್ರೀಡಾ ಕೂಟಗಳನ್ನು ಆಯೋಜಿಸಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದರಿಂದ ಅವರು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿ ಯಾಗಲಿದೆ ಎಂದು ಬಿ.ಎಚ್.ಕೈಮರದ ಸುಬೇದಾರ್ ಪ್ಯಾಟ್ರಿಕ್ ನಿವೃತ್ತ ಯೋಧ ಪ್ರದೀಪ್ ಹೇಳಿದರು.ಪಟ್ಟಣದ ಸೈಂಟ್ ಜೋರ್ಜ್ ಚರ್ಚ್ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ತಾಲೂಕು ಶಾಮಿಯಾನ, ಡೆಕೋರೇಷನ್, ಧ್ವನಿ ಮತ್ತು ಬೆಳಕು ಮಾಲೀಕರ ಸಂಘ 30 ಯಾರ್ಡ್ಸ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ರೀಡೆಯಲ್ಲಿ ಜಾತಿ, ಧರ್ಮ, ಬೇಧ ಭಾವವಿಲ್ಲ. ಕ್ರೀಡೆಯಿಂದ ಜೊತೆಗೊಡಿ ಬಾಳುವುದನ್ನು ಕಲಿಯಬಹುದು. ಕ್ರೀಡೆ ನಾಯಕತ್ವ ಗುಣ ಬೆಳೆಸಲು ಸಹಕಾರಿ. ಯಾವುದೇ ಸಮಾರಂಭ ಯಶಸ್ವಿಯಾಗಲು ಶಾಮಿಯಾ, ಡೆಕೋರೇಷನ್, ಧ್ವನಿ, ಬೆಳಕು ಸೇವೆ ನೀಡುವವರ ಕಾರ್ಯ ಅನನ್ಯ ಎಂದರು.

ಅತಿಥಿಯಾಗಿದ್ದ ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಯಾವುದೇ ಕಾರ್ಯ ಕ್ರಮ ಯಶಸ್ಸಿನಲ್ಲಿ ಶಾಮಿಯಾನದವರ ಪಾತ್ರ ಮುಖ್ಯ. ಶಾಮಿಯಾನ ಮಾಲೀಕರು ಉದ್ಯಮ ಸ್ಥಾಪಿಸಿ ಸಾಕಷ್ಟು ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನಕ್ಕೆ ಆಸರೆಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಸಮಾಜ ಸೇವಕಿ ಜುಬೇದಾ ಮಾತನಾಡಿ, ಶಾಮಿಯಾನ ವೃತ್ತಿಯನ್ನು ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಸೇರಿಸಿದರೆ ಸಾಕಷ್ಟು ಸೌಲಭ್ಯ ಲಭ್ಯವಾಗಲಿದೆ ಎಂದರು.

ಅತಿಥಿಯಾಗಿದ್ದ ಕೊಪ್ಪ ಶಾಮಿಯಾನ ಸಂಘದ ಹೇಮಂತ್ ಶೆಟ್ಟಿ ಹಾಗೂ ಉದ್ಘಾಟನೆ ನೆರವೇರಿಸಿದ ಡೆಕೋರೇಷನ್, ಧ್ವನಿ ಮತ್ತು ಬೆಳಕು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ನಾಸೀರ್ ಎಸ್.ತಾಜ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯ ಡಾ.ಪ್ರಸನ್ನಕುಮಾರ್, ನಿವೃತ್ತ ಯೋಧ ಪ್ರದೀಪ್, ಸಮಾಜ ಸೇವಕಿ ಜುಬೇದಾ, ಮೆಸ್ಕಾಂ ಲೈನ್ ಮ್ಯಾನ್ ಶಿವರಾಜ್, ಅಂತಾರಾಷ್ಟ್ರೀಯ ಈಜುಪಟು ಲಾವಣ್ಯ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಈ.ಪಿ.ದ್ರವ್ಯ ಹಾಗೂ ಬಿ.ಟಿ.ಪ್ರತೀಕ್ಷಾ, ಸಂಘದ ಜಿಲ್ಲಾಧ್ಯಕ್ಷ ನಾಸೀರ್ ತಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಭೆ ಅಧ್ಯಕ್ಷತೆಯನ್ನು ತಾಲೂಕು ಶಾಮಿಯಾನ, ಡೆಕೋರೇಷನ್, ಧ್ವನಿ ಮತ್ತು ಬೆಳಕು ಮಾಲೀಕರ ಸಂಘದ ಅಧ್ಯಕ್ಷ ಸಾದತ್ ಸಮೀರ್ ವಹಿಸಿದ್ದರು. ಸಂಘದ ಖಜಾಂಚಿ ಕೆ.ಎ.ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೊಪ್ಪ ತಾಲೂಕು ಶಾಮಿಯಾನ ಸಂಘದ ಅಧ್ಯಕ್ಷ ಪ್ರಸನ್ನ ಸೆರಾವೋ, ಮಾಧ್ಯಮ ಛಾಯಾಬಳಗದ ಅಧ್ಯಕ್ಷ ಪಿ.ಜೆ.ವಿಜು, ಶಾಮಿಯಾನ ಸಂಘದ ಕಾರ್ಯದರ್ಶಿ ಎಚ್.ನಾಗಾರ್ಜುನ್, ಸುನಿತಾ, ಗಾಯಕ ಸುಧಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ