ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ಅಂತರ್ ವಲಯ ಯುವಜನೋತ್ಸವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಶದ ಯುವ ಶಕ್ತಿ. ನಮ್ಮಲ್ಲಿ ಯುವಕರ ಅತೀ ದೊಡ್ಡ ಪಡೆ ಇದೆ.ಇದು ನಾವು ಜಾಗತಿಕವಾಗಿ ದೊಡ್ಡ ಶಕ್ತಿಯಾಗಿ ಬೆಳೆಯಲು ಕಾರಣ ಎಂದರು.
ಕಲೆ, ಸಾಹಿತ್ಯಾಭಿರುಚಿಯು ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಸಹಕಾರಿಯಾಗುವುದು. ಓದಿನ ಜೊತೆಗೆ ಇತರ ಕಲೆಗಳನ್ನು ಅಳವಡಿಸಿಕೊಂಡರೆ ಉತ್ತಮ ಅವಕಾಶಗಳು ಮನೆ ಬಾಗಿಲಿಗೆ ಬಂದು ನಿಲ್ಲುತ್ತವೆ. ಅವಕಾಶಗಳ ಬಳಸಿ ಎತ್ತರೆತ್ತರಕ್ಕೆ ಬೆಳೆಯಲು ಮುಂದಾಗಬೇಕು. ಲಭ್ಯವಿರುವ ಎಲ್ಲ ವೇದಿಕೆಗಳ ವಿದ್ಯಾರ್ಥಿಗಳು ಬಳಸಿ ತಮ್ಮ ಪ್ರತಿಭೆ ಪ್ರದರ್ಶಿಸಿದಾಗ ಮಾತ್ರ ಆ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.ಕುಲಸಚಿವೆ (ಆಡಳಿತ) ಸರೋಜಾ ಬಿ.ಬಿ ಮಾತನಾಡಿ ಈ ಜಗತ್ತು ಯುವಕರಿಗೆ ಸೇರಿರೋದು ಎಂಬ ಮಾತಿದೆ, ಕಾರಣ ಯುವಕ,ಯುವತಿಯರು ನಿಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಧನೆಗೈಯಬೇಕು. ಮಾದಕ ವಸ್ತುಗಳಿಗೆ ಬಲಿಯಾಗದೆ, ಪ್ರೀತಿ,ಪ್ರೇಮದಲ್ಲಿ ಸಿಲುಕದೆ ನಿಮ್ಮನ್ನು ನಂಬದವರಿಗೆ ವಿಶೇಷ ಕೊಡುಗೆ ನೀಡಬೇಕು. ಉತ್ತಮ ಸಮಾಜ ನಿರ್ಮಾಣದ ರೂವಾರಿಗಳು ನೀವಾಗಬೇಕು ಎಂದರು.