ಯುವಕರು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ: ಹಿರೇಮಠ

KannadaprabhaNewsNetwork | Published : Apr 4, 2025 12:47 AM

ಸಾರಾಂಶ

ಯುವಕರು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಪ್ರೊ. ಅನ್ನದಾನಿ ಹಿರೇಮಠ ಹೇಳಿದರು.

ಗದಗ: ಯುವಕರು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಪ್ರೊ. ಅನ್ನದಾನಿ ಹಿರೇಮಠ ಹೇಳಿದರು.

ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಜರುಗಿದ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾಟಕ ಸಾಹಿತ್ಯದ ಮಹತ್ವದ ಪ್ರಕಾರವಾಗಿದ್ದು, ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ಒಳನೋಟವನ್ನು ಉಂಟು ಮಾಡುತ್ತದೆ. ನವರಸಗಳಿಂದ ತುಂಬಿದ ಈ ಮಾಧ್ಯಮ ಪ್ರೇಕ್ಷಕ ಮತ್ತು ನಟ ಮುಖಾಮುಖಿಯ ಸಂದರ್ಭವನ್ನು ಏರ್ಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿಯ ಪ್ರಾಮುಖ್ಯತೆ ಕ್ಷೀಣಿಸುತ್ತಿದ್ದು, ಯುವಜನ ಈ ಚಟುವಟಿಕೆಗಳಲ್ಲಿ ತೊಡುಗುವಂತೆ ಮಾಡುವ ಅನಿವಾರ್ಯ ಉಂಟಾಗಿದೆ ಎಂದರು.ಆಧುನಿಕ ರಂಗಭೂಮಿ ಕುರಿತು ರಂಗ ನಿರ್ದೇಶಕ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಉಪನ್ಯಾಸ ನೀಡಿ, ರಂಗಭೂಮಿಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪ್ರೇಕ್ಷಕರನ್ನು ಸೆಳೆಯುವ ಕಾರ್ಯವನ್ನು ಮಾಡಬೇಕಾಗಿದೆ. ಯುವಜನಾಂಗಕ್ಕೆ ಶಿಬಿರಗಳನ್ನು ಸಂಘಟಿಸಿ ಆಸಕ್ತಿ ಬೆಳೆಸಬೇಕೆಂದರು.

ಚಿನ್ಮಯ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿದ ಹಿರಿಯ ರಂಗಭೂಮಿ ಕಲಾವಿದ ವಿಜಯಕುಮಾರ ಜಿತೂರಿ ಮಾತನಾಡಿ, ಶಾಲಾ ಹಂತದಲ್ಲಿ ಶಿಕ್ಷಕರಿಂದ ಅಭಿನಯ ಕಲೆಯಲ್ಲಿ ಪ್ರೋತ್ಸಾಹ ದೊರೆಯಿತು. ನಂತರ ಗದುಗಿನ ಅನೇಕ ಸಂಘಟನೆಗಳ ನಾಟಕಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದುದರ ಫಲವಾಗಿ ಮುಂದೆ ಬೆಂಗಳೂರಿನಲ್ಲಿ ಹೆಸರಾಂತ ರಂಗ ಸಂಸ್ಥೆಗಳಲ್ಲಿ ಹಾಗೂ ಚಲನಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಯಿತು. ಅಭಿನಯದ ಜೊತೆಗೆ ಹಾಡುಗಾರಿಕೆ ಕಲಿತಿದ್ದರಿಂದ ಹೆಚ್ಚು ಅವಕಾಶಗಳು ದೊರೆತವು. ಇಂದಿನ ಯುವಪೀಳಿಗೆ ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.ರಂಗಗೌರವ ಪ್ರಶಸ್ತಿ ಸ್ವೀಕರಿಸಿದ ಹಿರಿಯ ರಂಗ ಕಲಾವಿದೆ ಕವಿತಾ ಕಾಶಪ್ಪನವರ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಬಡಿಗೇರ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಡಾ. ರಾಜಶೇಖರ ದಾನರಡ್ಡಿ, ಬಸವರಾಜ ನೆಲಜೇರಿ, ತುಕಾರಾಮ ಪಾಂಡ್ರೆ, ರಾಜಶೇಖರ ಪಾಟೀಲ, ಮುರಳಿಧರ ಸಂಕನೂರ, ಶ್ಯಾಮಸುಂದರ ಕುಲಕರ್ಣಿ, ಬಸವರಾಜ ವಾರಿ, ಡಾ. ಬಿ.ಬಿ. ಹೊಳಗುಂದಿ, ಶಶಿಧರ ರೇಷ್ಮೆ, ಅನಂತಮೋಹನ ಭಟ್, ಮಾಲತೇಶಗೌಡ ಪಾಟೀಲ, ಕಾಶೀನಾಥಸಾ ಜಿತೂರಿ, ರಂಗಪ್ಪ ಹುಯಿಲಗೋಳ, ಶಿವು ಭಜಂತ್ರಿ, ಬಾಹುಬಲಿ ಜೈನರ್, ಅಶೋಕ ಗಿರಡ್ಡಿ, ಮಲ್ಲಪ್ಪ ಡೋಣಿ, ಯಲ್ಲಪ್ಪ ಹಂದ್ರಾಳ, ಶಕುಂತಲಾ ಸಿಂಧೂರ, ರೂಪಾ ಜಿತೂರಿ, ರಾಜೇಶ್ವರಿ ಬಡ್ನಿ, ಸಿ.ಎಂ.ಮಾರನಬಸರಿ, ಅನಸೂಯಾ ಮಿಟ್ಟಿ, ಶುಭಾಂಗಿ ದ್ಯಾಮೇನಹಳ್ಳಿ, ಷಡಕ್ಷರಿ ಮೆಣಸಿನಕಾಯಿ, ಶೈಲಶ್ರೀ ಕಪ್ಪರದ, ಎಚ್.ಟಿ. ಸಂಜೀವಸ್ವಾಮಿ, ಬಿ.ಎಸ್. ಹಿಂಡಿ, ಅಮರೇಶ ರಾಂಪೂರ, ಕೆ.ಜಿ. ವ್ಯಾಪಾರಿ, ಪ್ರ.ತೋ. ನಾರಾಯಣಪೂರ, ದಿಲೀಪಕುಮಾರ ಮುಗಳಿ, ಶಶಿಕಾಂತ ಕೊರ್ಲಹಳ್ಳಿ, ಜಿ.ಎ. ಪಾಟೀಲ, ಶರಣಪ್ಪ ಹೊಸಂಗಡಿ, ಶಾರದಾ ಕಾತರಕಿ, ಸುಧಾ ಬಳ್ಳಿ, ಪ್ರಶಾಂತ ಪಾಟೀಲ, ಅಮೃತಾ ಚನ್ನಪಗೌಡರ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಚನವೀರಪ್ಪ ದುಂದೂರ, ಎಸ್.ಸಿ. ಹಾಲಕೇರಿ, ರತ್ನಾ ಪುರಂತರ, ಆರ್.ಡಿ. ಕಪ್ಪಲಿ ಮೊದಲಾದವರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.

Share this article