)
ಸ್ವಾಮಿ ವಿವೇಕಾನಂದರು ಹೇಳಿದಂತೆ ನಾಲ್ಕು ಅಂಶಗಳು ಸಮಾಜದ ರೋಗಗಳಷ್ಟೇ ಅಲ್ಲ, ನಮ್ಮ ವ್ಯಕ್ತಿತ್ವದ ದೋಷಗಳು ಕೂಡಾ ಹೌದು
--1) ಶಾರೀರಿಕ ಬಲದ ಹೆಗ್ಗಳಿಕೆ (ದೈಹಿಕ ಶಕ್ತಿಯ ದುರ್ಬಳಕೆ):ಸಮಾಜದಲ್ಲಿ ಶಕ್ತಿವಂತರು ದುರ್ಬಲರನ್ನು ಶೋಷಿಸುವುದು ಒಂದು ರೋಗ. ಸ್ವಾಮೀಜಿಯವರ ಪ್ರಕಾರ, ಕೇವಲ ಶಾರೀರಿಕ ಬಲವನ್ನು ಬಳಸಿ ಇನ್ನೊಬ್ಬರನ್ನು ಅಡಗಿಸುವುದು ಪಾಶವೀಕೃತ್ಯ. ಅಂದರೆ ಪಾಪ ಕೃತ್ಯ. ಇದು ಅನಾರೋಗ್ಯಕರ ಸಮಾಜದ ಲಕ್ಷಣ.ವಿದ್ಯಾರ್ಥಿಗಳಾದ ನಾವು ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗಳನ್ನು ಆಡುತ್ತೇವೆ. ನಮ್ಮ ದೈಹಿಕ ಶಕ್ತಿಯನ್ನು ಇತರರನ್ನು ಗೆಲ್ಲಲು ಅಥವಾ ಗೋಳಾಡಿಸಲು ಬಳಸದೆ, ಸಮಾಜದ ದುರ್ಬಲರನ್ನು ರಕ್ಷಿಸಲು ಮತ್ತು ಸಹಾಯ ಮಾಡಲು ಬಳಸಬೇಕು. ಜೊತೆಗೆ, ಶಾಲೆಯಲ್ಲಿ ''''''''ರ್ಯಾಗಿಂಗ್'''''''' (Ragging) ಮಾಡುವ ಮೂಲಕ ಅನೇಕ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹಿಂಸೆ ಕೊಡುವುದನ್ನು ನೋಡಿರುತ್ತೇವೆ. ವಿವೇಕಾನಂದರ ಪ್ರಕಾರ ಈ ರೀತಿ ಮಾಡುವವನು ಅನಾರೋಗ್ಯ ತುಂಬಿಕೊಂಡ ವ್ಯಕ್ತಿ. ಇಂತಹ ಅನಾರೋಗ್ಯದಿಂದ ದೂರವಾಗಬೇಕಾದರೆ ಶಾರೀರಿಕವಾಗಿ ಪ್ರಬಲವಾಗಿರುವವನು ದುರ್ಬಲನಾದವನಿಗೆ ಸಹಾಯ ಮಾಡು. ಇಲ್ಲವಾದಲ್ಲಿ ನಿನ್ನ ದೇಹ ತುಕ್ಕು ಹಿಡಿಯುತ್ತದೆ ಎಂಬ ಅರ್ಥದಲ್ಲಿ ಸ್ವಾಮೀಜಿ ಯುವಕರನ್ನು ಬಡಿದೆಬ್ಬಿಸಿದ್ದರು. ಈ ರೀತಿ ನಮ್ಮ ಶಕ್ತಿ ರಾಷ್ಟ್ರದ ರಕ್ಷಣೆಗೆ ಮತ್ತು ಸಮಾಜ ಸೇವೆಗೆ ಮೀಸಲಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಕರಾಟೆ, ಜಿಮ್ ಅಥವಾ ಕ್ರೀಡೆಗಳ ಮೂಲಕ ತಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಯುವಕರು ''''''''ಸೆಲ್ಫ್ ಡಿಫೆನ್ಸ್'''''''' (ಸ್ವಯಂ ರಕ್ಷಣೆ) ಕಲಿಯುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಕೇವಲ ತಮ್ಮನ್ನು ರಕ್ಷಿಸಿಕೊಳ್ಳಲಷ್ಟೇ ಅಲ್ಲ, ಅಗತ್ಯವಿದ್ದಾಗ ಇತರ ಮಹಿಳೆಯರನ್ನು ಅಥವಾ ದುರ್ಬಲರನ್ನು ರಕ್ಷಿಸಲು ಸಹಕಾರಿಯಾಗಿದೆ. ಇದುವೇ ಸ್ವಾಮೀಜಿ ಹೇಳಿದ ಶಕ್ತಿಯ ಸದ್ಬಳಕೆ.
---2) ಬೌದ್ಧಿಕ ಬಲದ ಹೆಗ್ಗಳಿಕೆ (ಬುದ್ಧಿವಂತರಿಂದ ಶೋಷಣೆ):ಬುದ್ಧಿವಂತರು ತಮ್ಮ ಬುದ್ಧಿಶಕ್ತಿಯಿಂದ ದಡ್ಡರನ್ನು ಮೋಸಗೊಳಿಸುವುದು, ಶೋಷಿಸುವುದು ಅಥವಾ ಹಿಂಸಿಸುವುದು ಸಮಾಜದ ಎರಡನೇ ರೋಗ. ಜ್ಞಾನವನ್ನು ಇತರರನ್ನು ಮುಳುಗಿಸಲು ಬಳಸುವುದು ಪೈಶಾಚಿಕ ಕೃತ್ಯ.ವಿದ್ಯಾರ್ಥಿಗಳಾದ ನಾವು ಓದುವ ಜ್ಞಾನವನ್ನು ಸಮಾಜದ ಕಲ್ಯಾಣಕ್ಕೆ ಬಳಸಬೇಕು. ತರಗತಿಯಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ದುರ್ಬಲ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಬೇಕು. ಜ್ಞಾನ ಪಡೆದು ಚೆನ್ನಾಗಿ ಓದಿಕೊಂಡ ವಿದ್ಯಾರ್ಥಿಯೊಬ್ಬ ದಡ್ಡನಂತೆ ಇರುವ ವಿದ್ಯಾರ್ಥಿಯನ್ನು ಹೀಯಾಳಿಸುವುದು ಮಹಾಪಾಪ ಎಂದು ವಿವೇಕಾನಂದರು ಹೇಳುತ್ತಾರೆ. ಜ್ಞಾನವನ್ನು ಶಸ್ತ್ರವಾಗಿ ಬಳಸದೆ, ಸೇತುವೆಯಾಗಿ ಬಳಸಬೇಕು. ಅಂದರೆ ತಿಳಿಯದೆ ಇರುವವನಿಗೆ ತಿಳಿಸಿ ಸಹಾಯ ಮಾಡಬೇಕು.ಟೆಕ್ ಫಾರ್ ಗುಡ್ ಕಮ್ಯುನಿಟಿ ಒಂದು ಮಾದರಿ ನಡೆ.ನಮ್ಮ ದೇಶದಲ್ಲಿ ಅನೇಕ ವಿದ್ಯಾರ್ಥಿಗಳು ''''''''ಟೆಕ್ ಫಾರ್ ಗುಡ್'''''''' ಎಂಬಂತಹ ಯೋಜನೆಗಳನ್ನು ಕೈಗೊಂಡಿದ್ದಾರೆ. ಒಳ್ಳೆಯ ವಿಚಾರಗಳಿಗೆ ತಂತ್ರಜ್ಞಾನ ಬಳಸಲು ಕೆಲವು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ. ಇದು ಬುದ್ಧಿಶಕ್ತಿಯನ್ನು ಸಮಾಜದ ಒಳಿತಿಗೆ ಬಳಸಿದ ಉತ್ತಮ ನಿದರ್ಶನ. ಇದನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಬಹುದು. ಅಂದರೆ ನಮ್ಮ ಬುದ್ಧಿಶಕ್ತಿಯ ಮೇಲೆ ನಮಗೆ ಅಹಂಕಾರವೂ ಇರಬಾರದು ಹಾಗೂ ಸ್ವಾರ್ಥಕ್ಕೂ ಬಳಸಿಕೊಳ್ಳಬಾರದು. ಅದು ಸಮಾಜಮುಖಿ ಆಗಿರಬೇಕು.----
--4) ಆಧ್ಯಾತ್ಮಿಕ ಬಲದ ಹೆಗ್ಗಳಿಕೆ (ಧರ್ಮದ ಹೆಸರಿನಲ್ಲಿ ಶೋಷಣೆ):ಧರ್ಮ ಮತ್ತು ಆಧ್ಯಾತ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಮೋಸಗೊಳಿಸುವುದು, ಅವರನ್ನು ಪಾಪಿಗಳೆಂದು ದೂಷಿಸುವುದು ಮತ್ತು ಅವರಿಂದ ದೂರವಿರುವುದು ನಾಲ್ಕನೇ ಅನಾರೋಗ್ಯ. ಆಧ್ಯಾತ್ಮಿಕತೆ ನಮ್ಮನ್ನು ನಾವು ಅರಿತುಕೊಳ್ಳುವ ಒಂದು ಪ್ರಮುಖವಾದ ಸಾಧನ. ನಾವು ರೂಢಿಸಿಕೊಂಡಿರುವ ಭಕ್ತಿ, ಯೋಗ, ಆಚಾರ ಮತ್ತು ವಿಚಾರಗಳಿಂದ ಅಹಂಕಾರ ಬೆಳೆಯಬಾರದು. ಆಧ್ಯಾತ್ಮಿಕತೆಯನ್ನು ಮತ್ತೊಬ್ಬರ ಬದುಕಿಗೂ ಸಹಾಯ ಆಗುವಂತೆ ಮಾಡಬೇಕು. ಈ ಮೂಲಕ ಎಷ್ಟೋ ಜನರ ಬದುಕಿಗೆ ದಾರಿ ದೀಪವಾಗಬಹುದು.ದೇಶದಲ್ಲಿ ನಡೆದ ಅನೇಕ ಪ್ರಕೃತಿ ವಿಕೋಪಗಳ ಸಮಯದಲ್ಲಿ ವಿದ್ಯಾರ್ಥಿಗಳು ಭೇದ ಮಾಡದೆ ಎಲ್ಲಾ ಜನರಿಗೆ ಪರಿಹಾರ ಕಾರ್ಯಗಳಲ್ಲಿ ನೆರವು ನೀಡಿದ್ದಾರೆ. ಇದೂ ಕೂಡ ಧರ್ಮ ಕಾರ್ಯವೇ.ಸ್ವಾಮಿ ವಿವೇಕಾನಂದರು ಹೇಳಿದ ಈ ನಾಲ್ಕು ಅಂಶಗಳು ಕೇವಲ ಸಮಾಜದ ರೋಗಗಳಷ್ಟೇ ಅಲ್ಲ, ಅವು ನಮ್ಮ ವ್ಯಕ್ತಿತ್ವದ ದೋಷಗಳು ಕೂಡಾ ಹೌದು. ಒಂದು ರಾಷ್ಟ್ರವು ಅಭಿವೃದ್ಧಿ ಹೊಂದಬೇಕಾದರೆ, ಅಲ್ಲಿನ ಪ್ರಜೆಗಳು, ಅದರಲ್ಲೂ ಯುವಕರು ಮತ್ತು ವಿದ್ಯಾರ್ಥಿಗಳು ಈ ನಾಲ್ಕು ಅಂಶಗಳನ್ನು (ಶಾರೀರಿಕ, ಬೌದ್ಧಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ) ತಮ್ಮ ಜೀವನದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು.ನಾವು ನಮ್ಮ ಶಕ್ತಿಯನ್ನು, ಬುದ್ಧಿಮತ್ತೆಯನ್ನು, ಹಣವನ್ನು ಮತ್ತು ಧರ್ಮವನ್ನು ಇನ್ನೊಬ್ಬರನ್ನು ಶೋಷಿಸಲು ಬಳಸದೆ, ಅವರನ್ನು ಮೇಲಕ್ಕೆತ್ತಲು ಬಳಸಿದಾಗ, ನಿಜವಾದ ರಾಷ್ಟ್ರಪ್ರೇಮ ನಮ್ಮಲ್ಲಿ ಹುಟ್ಟುತ್ತದೆ. ಹಾಗಾದರೆ, ನಾವಿಂದು ಪ್ರತಿಜ್ಞೆ ಮಾಡೋಣ; ನಾವು ಯಾರನ್ನೂ ಶೋಷಿಸುವುದಿಲ್ಲ, ಬದಲಾಗಿ ಸಮಾಜದ ಏಳಿಗೆಗೆ ಸಮರ್ಪಣೆಯಾಗಲಿ. ಸ್ವಾಮಿ ವಿವೇಕಾನಂದರು ಹೇಳಿದ ಹೇಳಿದ ಮಾತುಗಳು ಎಲ್ಲಾ ಕಾಲಕ್ಕೂ ಸತ್ಯವಲ್ಲವೇ.-----