ಕನ್ನಡಪ್ರಭ ವಾರ್ತೆ ಚಾಮರಾಜನಗರಯುವ ರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ಯುವ ಚಿತ್ರದ ಮೊದಲ ಹಾಡು ಚಾಮರಾಜನಗರದಲ್ಲಿ ಶನಿವಾರ ಬಿಡುಗಡೆಯಾಯಿತು. ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಯುವ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಚಾಮರಾಜೇಶ್ವರ ದೇಗುಲ ಮುಂಭಾಗ ನಿರ್ಮಿಸಿದ್ದ ಸುಂದರ ವೇದಿಕೆಯಲ್ಲಿ ಜಿಲ್ಲೆಯ 5 ತಾಲೂಕಿನಿಂದ ಓರ್ವ ಅಭಿಮಾನಿಯಿಂದ ಆಯ್ದ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಅಣ್ಣಾವ್ರು ಹಾಗೂ ಅಣ್ಣಾವ್ರ ಕುಟುಂಬ ನಟಿಸಿರುವ ಚಿತ್ರಗಳನ್ನು ಎಲ್ಲಾ ವಯೋಮಾನದವರು ನೋಡುತ್ತಾರೆಂದು ಮಗು, ಯುವಜನರು, ಮಧ್ಯ ವಯಸ್ಕ ಹಾಗೂ ವೃದ್ಧೆಯ ಬಳಿಯಿಂದ ವಿಭಿನ್ನವಾಗಿ ಒಬ್ಬನೇ ಶಿವ ಒಬ್ಬನೇ ಯುವ ಎಂಬ ಹಾಡನ್ನು ಬಿಡುಗಡೆ ಮಾಡಲಾಯಿತು. ಇನ್ನು, ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಅಭಿಮಾನಿಗಳು ಪಾಲ್ಗೊಂಡು ಅಪ್ಪು, ಯುವ ಎಂಬ ಘೋಷಣೆಗಳನ್ನು ಕೂಗಿದರು.ಸಿಂಪ್ಲಿಸಿಟಿ ತೋರಿದ ಯುವರಾಜ್ ಕುಮಾರ್..ಚಾಮರಾಜನಗರಕ್ಕೆ ಎಂಟ್ರಿಯಾಗುತ್ತಿದ್ದಂತೆ ಮೊದಲು ಚಾಮರಾಜೇಶ್ವರ ಪಾದಕ್ಕೆ ನಮಸ್ಕರಿಸಿದ ಯುವರಾಜ್‌ಕಮಾರ್ ಪುನೀತ್ ರಾಜ್ ಕುಮಾರ್ ರೀತಿಯೆ ಸಿಂಪ್ಲಿಸಿಟಿ ತೋರಿ ಅಭಿಮಾನಿಗಳ ಮನಗೆದ್ದರು. ವೇದಿಕೆ ಏರುತ್ತಿದ್ದಂತೆ ವೇದಿಕೆಯ ಮೇಲೆ ವೃದ್ದೆಯ ಕಾಲಿಗೆ ನಮಸ್ಕರಿಸಿದರು. ಯುವ ವೇದಿಕೆಗೆ ಬರ್ತಿದ್ದಂತೆ ಯುವ ಬಾಸ್, ಯುವ ಬಾಸ್ ಜೈಕಾರ ಹಾಕಿದರು. ನಾಯಕ ಯುವರಾಜ್‌ಕುಮಾರ್ ಮಾತನಾಡಿ, ನಮ್ಮ ಕುಟುಂಬ ಕಲಾಕ್ಷೇತ್ರಕ್ಕೆ ಬಂದಿದ್ದೇ ಇಲ್ಲಿಂದ. ನಾನೂ ಸಹ ಇಲ್ಲಿಂದಲೇ ಶುರು ಮಾಡುತ್ತಿದ್ದೇನೆ ಎಂದರು. ನಾನು ಯಾವಾಗಲೂ ನಮ್ಮ ತಾತ, ಅಜ್ಜಿ, ಚಿಕ್ಕಪ್ಪ ಎಲ್ಲರನ್ನೂ ನಿಮ್ಮಲ್ಲೇ ಕಾಣುತ್ತಿದ್ದೇನೆ.ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ. ಈ ಊರಿನ ಮಗ ಎಂದು ಬೆಳೆಸಿ. ನೀವು ನಡೆಸಿದಂತೆ ನಾವು. ಕನ್ನಡ ಸಿನಿಮಾಗಳನ್ನು ಬೆಳೆಸಿ ಎಂದು ಮನವಿ ಮಾಡಿದರು. ನಿರ್ದೇಶಕ ಸಂತೋಷ್ ಆನಂದರಾಮ್ ಮಾತನಾಡಿ, ಏಳು ವರ್ಷ ಒಬ್ಬ ವ್ಯಕ್ತಿ ಜೊತೆಯಿದ್ದೆ. ಅಪ್ಪು ಆಶೀರ್ವಾದ ಈ ಸಿನಿಮಾಕ್ಕೆ ಇದೆ. ನಿಮ್ಮ ಶಿಳ್ಳೆ,ಚಪ್ಪಾಳೆ ಮೂಲಕ ಅವರು ಬಂದು ನೋಡ್ತಾರೆ. ಮಾರ್ಚ್ ತಿಂಗಳಲ್ಲಿ ಮುಹೂರ್ತ ಆಯ್ತು, ಮಾರ್ಚ್ 29ಕ್ಕೆ ಸಿನಿಮಾ ಬಿಡುಯಾಗಲಿದೆ. ನಿಮ್ಮ ಮನೆಯ ಮಗನನ್ನು ಕೈ ಹಿಡಿದು ಕರೆದುಕೊಂಡು ಹೋಗಿ. ಸಿನಿಮಾ ದೊಡ್ಡ ಯಶಸ್ಸಾಗಲಿ. ಅವರಿಗೆ ದೊಡ್ಡ ಮಟ್ಟದ ಹೆಸರು ಸಿಗಲಿ. ವಿಜಯ್ ಕಿರಗಂದೂರು ಸಿನಿಮಾಕ್ಕೆ ಬಹಳ ದೊಡ್ಡ ಬಂಡವಾಳ ಹಾಕಿದ್ದಾರೆ ಎಂದರು.ಅಪ್ಪು ಹುಟ್ಟಿದ ದಿನ ಮತ್ತೊಂದು ಸಾಂಗ್ ರಿಲೀಸ್: ಅಭಿಮಾನಿಗಳಿಗೆ ಈ ಹಾಡು ಮತ್ತಷ್ಟು ಹತ್ತಿರವಾಗುತ್ತೆ. ಮಾರ್ಚ್ ಮೂರನೇ ವಾರದಲ್ಲಿ ಟ್ರೈಲರ್ ಹಾಗೂ ಪ್ರೀ ಸಿನಿಮಾ ಇವೆಂಟ್ ನಡೆಯುತ್ತೆ ಎಂದು ತಿಳಿಸಿದರು. ಗಾಯಕ ನವೀನ್ ಸಜ್ಜು ತಂಡದಿಂದ ಸಂಗೀತ ಗಾಯನ ನಡೆಯಿತು. ಜಿಲ್ಲೆಯವರೇ ಆದ ಚಿತ್ರ ನಿರ್ದೇಶಕ ಚೇತನ್ ಕುಮಾರ್, ಸಂತೋಷ್ ಆನಂದರಾಮ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.