ಸಿಎಂ ಸ್ಥಾನದ ಗೊಂದಲಕ್ಕೆ ರಾಜ್ಯದಲ್ಲಿ ಅಭಿವೃದ್ದಿ ಶೂನ್ಯ: ಕೆ.ಎಸ್.ಈಶ್ವರಪ್ಪ

KannadaprabhaNewsNetwork |  
Published : Feb 08, 2026, 01:30 AM IST
ಪೋಟೊ:07ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಸಿಎಂ ಸ್ಥಾನದ ಗೊಂದಲದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತೆ ಬಾಸವಾಗುತ್ತಿದೆ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿಎಂ ಸ್ಥಾನದ ಗೊಂದಲದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತೆ ಬಾಸವಾಗುತ್ತಿದೆ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸಿಎಂ ಸ್ಥಾನದ ಗೊಂದಲದಲ್ಲಿ ಮುಳುಗಿದೆ. ಎಲ್ಲರೂ ತಮ್ಮ ಹಿಂಬಾಲಕರ ಮೂಲಕ ಹೇಳಿಕೆ ನೀಡಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಯತೀಂದ್ರರವರು ನಮ್ಮಪ್ಪನೇ ಮುಂದಿನ ೫ ವರ್ಷದ ಸಿಎಂ ಎಂದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯತೀಂದ್ರನೇ ನಮ್ಮ ಹೈಕಮಾಂಡ್ ಎಂದು ಹೇಳುತ್ತಾರೆ. ಇವರ ನಾಟಕದಲ್ಲಿ ರಾಜ್ಯದ ಜನ ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದಾರೆಂದು ಕಿಡಿಕಾರಿದರು.

ಕಾಂಗ್ರೆಸ್ ಹೈಕಮಾಂಡ್ ಆಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಕೈಎತ್ತಿದ್ದಾರೆ. ಹಾಗಾದರೆ ಹೈಕಮಾಂಡ್ ಯಾರು ಈ ಆಟವನ್ನು ನಿಲ್ಲಿಸಬೇಕು, ಈ ರೀತಿಯ ಗೊಂದಲ ಹೇಳಿಕೆ ನಿಲ್ಲಿಸಿ ಅಧಿಕಾರಿಗಳು ಕೆಲಸ ಮಾಡುವಂತೆ ಮಾಡಿ ಎಂದು ಆಗ್ರಹಿಸಿದರು. ಗುತ್ತಿಗೆದಾರರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಹಾಗಾಗಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸರ್ಕಾರದ ಸೂಚನೆ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಸಂಪೂರ್ಣ ಅರಾಜಕತೆ ಉಂಟಾಗಿ,ದೆ ಯಲವಟ್ಟಿ ಕೆರೆ ಅತಿಕ್ರಮಣವಾಗುತ್ತಿದೆ ಏನಾದರೂ ಮಾಡಿ ಎಂದು ಗುರುಗಳು ನನಗೆ ಹೇಳಿದ ಹಿನ್ನೆಲೆಯಲ್ಲಿ ನಾನು ನೀರಾವರಿ ಸಚಿವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಅವರು ಒಂದೂವರೆ ಕೋಟಿ ಬಿಡುಗಡೆ ಮಾಡಿದ್ದರು. ಟೆಂಡರ್ ಆಗಿತ್ತು. ಆದರೆ ಗುತ್ತಿಗೆದಾರರು ಈ ಸರ್ಕಾರ ಹಣ ನೀಡಲ್ಲ ಎಂಬ ಕಾರಣಕ್ಕೆ ಯಾರೂ ಟೆಂಡರ್ ಹಾಕೇ ಇಲ್ಲ. ಇದೊಂದು ಉದಾಹರಣೆ ಅಷ್ಟೇ ಎಂದರು.

ವಿಶೇಷ ಅಧಿವೇಶನವನ್ನು ನಾನು ನೋಡಿದಾಗ ನನಗೆ ತುಂಬಾ ದುಃಖವಾಯಿತು. ನಾನು ಹಿಂದೆ ಸರ್ಕಾರದ ವಿವಿಧ ಇಲಾಖೆ ಸಚಿವನಾಗಿದ್ದೇನೆ. ಡಿಸಿಎಂ ಆಗಿದ್ದೆ, ಇಂತಹ ಅಧಿವೇಶನ ಎಂದೂ ನೋಡಿಲ್ಲ. ಪದ ಬಳಕೆಯಲ್ಲೂ ಶಾಸಕರು ಮೌಲ್ಯ ಕಳೆದುಕೊಂಡಿದ್ದಾರೆ. ವಿಧಾನ ಸಭೆ ಮತ್ತು ಪರಿಷತ್ ದೇಶಕ್ಕೇ ಮಾದರಿಯಾದ ಸಭೆಗಳಾಗಿವೆ ನಸೀರ್ ಅಹಮದ್, ಶಿವಲಿಂಗೇ ಗೌಡರಂತಹ ಸದಸ್ಯರ ಪದ ಬಳಕೆ ನೋಡಿದರೆ ನಾಚಿಕೆಯಾಗುತ್ತದೆ. ಇದನ್ನ ನೋಡಿಕೊಂಡು ಸರ್ಕಾರದ ಸಚಿವರು ಸುಮ್ಮನಿರುವುದು ಅಚ್ಚರಿ ಮೂಡಿಸಿದೆ. ಇಂತಹ ಶಾಸಕರು ಸಭೆಗಳಲ್ಲಿ ಇದ್ದಾರಲ್ಲ ಎಂಬ ನೋವಿದೆ ಎಂದರು.

ಜಿಪಂ ಮಾಜಿ ಸದಸ್ಯ ಹಾಗೂ ರಾಷ್ಟ್ರ ಭಕ್ತರ ಬಳಗದ ಮುಖಂಡ ಕೆ.ಈ.ಕಾಂತೇಶ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ತಿಳಿಸಿದರೂ ಸಿಎಂ ಡಿಸಿಎಂ ನಾಟಿಕೋಳಿ ಸೇವನೆಯಲ್ಲಿ ಮುಳುಗಿದ್ದಾರೆ ಎಂದ ವ್ಯಂಗ್ಯವಾಡಿದರು. ಸೆಕೆಂಡ್ ಲೈನ್ ಲೀಡರ್‌ಗಳು ಸ್ಟೀಮ್ ಲೈನ್‌ಗೆ ಬಂದು ಶಾಸಕರ ಸ್ಥಾನಕ್ಕೆ ಆಕಾಂಕ್ಷಿಗಳಾಗುವ ಭಯದಿಂದ ಚುನಾವಣೆ ನಡೆಸಲು ಸಿಎಂ ಮುಂದಾಗಿರಲಿಲ್ಲ. ಸರ್ಕಾರದಿಂದ ಮತ್ತು ಚುನಾವಣೆ ಆಯೋಗದಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜ.20ರಂದು ನಾವು ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು. ರಿಟ್ ಪಿಟಿಷನ್‌ಗೆ ತಾತ್ಕಾಲಿಕ ಜಯಸಿಕ್ಕಿದೆ. ಏ.21ರೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟೀಸ್ ನೀಡಿದೆ. ಇದು ರಾಷ್ಟ್ರಭಕ್ತರ ಬಳಗಕ್ಕೆ ಸಿಕ್ಕ ಜಯವಾಗಿದೆ. ಪಾಲಿಕೆಗೆ ತಕ್ಷಣ ಚುನಾವಣೆ ನಡೆಸಿ. ಭ್ರಷ್ಟಾಚಾರ ತಡೆಯಬೇಕೆಂದು ಕೇಳಿಕೊಂಡರು. ಬೆಂಗಳೂರಿನ ಪಾಲಿಕೆಗಳ ಚುನಾವಣೆ ನಡೆಸಲು 10 ವರ್ಷದ ಹಿಂದಿನ ಹೋರಾಟವಾಗಿದೆ ಎಂದು ಹೇಳಿದರು. ಇಲ್ಲಿ ಕೂಡ ತಕ್ಷಣವೇ ಚುನಾವಣೆ ನಡೆಸುವ ಸಾಧ್ಯತೆಯಿಲ್ಲ. ಆದರೂ ಹೈಕೋರ್ಟ್ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಸೂಚನೆ ನೀಡುವ ಲಕ್ಷಣ ಇದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಮೋಹನ್ ಜಾದವ್, ಲಕ್ಷ್ಮೀಶಂಕರ್‌ನಾಯ್ಕ, ಶ್ರೀಕಾಂತ್, ವಾಗೀಶ್, ಶಿವಾಜಿ, ಕುಬೇರಪ್ಪ, ರಾಜು, ದಿನೇಶ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು