ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಶ್ರೀ ಮಹಿಮರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಪಶುಸಂಗೋಪನಾ ಇಲಾಖೆ ಏರ್ಪಡಿಸಿದ್ದ ದನಗಳ ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಿಂದ ನಿರುದ್ಯೋಗ ಸಮಸ್ಯೆ ನಿವಾರಿಸಿ ಆರ್ಥಿಕ ಮಟ್ಟವನ್ನು ವೃದ್ಧಿಸಿ ಕೊಳ್ಳಬಹುದು. ಸರ್ಕಾರದಿಂದ ಸಿಗುವ ಸಹಾಯಧನ ಪಡೆದು ಆರ್ಥಿಕ ಪ್ರಗತಿ ಸಾಧಿಸಬಹುದು. ರೈತರು ಪಶುಗಳನ್ನು ಸಾಕುವ ಮೂಲಕ ಆದಾಯ ಪಡೆಯಬಹುದು. ಕೃಷಿಯ ಜೊತೆಗೆ ಇತರೆ ಬೆಳೆಗಳಿಗೂ ಮನ್ನಣೆ ನೀಡಿ ಲಾಭದಾಯಕ ಬೆಳೆಗಳನ್ನು ಬೆಳೆಯುವ ಜೊತೆಗೆ ಪಶು ಸಂಗೋಪನೆ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.ಬಹುಮಾನ ವಿತರಣೆ:
ಕಾರ್ಯಕ್ರಮದಲ್ಲಿ ಎನ್.ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ, ಬಿ.ಟಿ.ರಾಮಚಂದ್ರ, ಶ್ರೀನಿವಾಸ್, ಧಾರ್ಮಿಕದತ್ತಿ ಇಲಾಖೆಯ ಇಒ ಬೃಂದಾ, ಪಿಡಿಒ ಮೋಹನಕುಮಾರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಮು, ಡಾ.ಮಸೂದ್ ಖಾನ್, ಪಶುವೈದ್ಯರಾದ ಡಾ.ಬಾಲಸುಬ್ರಹ್ಮಣ್ಯ. ಡಾ.ಚಂದ್ರಶೇಖರ್, ಡಾ.ಪವಿತ್ರಾ, ಡಾ.ಅರುಣ್, ಮಲ್ಲೇಶ್, ನಾಗರಾಜು, ವೀರಭದ್ರಯ್ಯ, ಅಶೋಕ್, ಮುಖಂಡರಾದ ಭೂಸಿರಿ ಮಂಮಜುನಾಥ್ ಬಿ.ಟಿ.ರಾಮಚಂದ್ರ, ಶ್ರೀನಿವಾಸ್, ಕಾಚನಹಳ್ಳಿ ಮನು ಮೊದಲಾದವರು ಹಾಜರಿದ್ದರು.