ನರಸಿಂಹರಾಜಪುರಸಮಾಜದಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಬಾಳೋಣ ಎಂಬ ಸಂದೇಶ ಸಾರುವ ಭಾವೈಕ್ಯತಾ ಗಣೇಶೋತ್ಸವದ ಹೆಸರಿನಲ್ಲಿ ಕಳೆದ 18 ವರ್ಷದಿಂದಲೂ ಜೂನಿಯರ್ ಮದರ್ ತೆರೇಸಾ ಎಂದೇ ಪ್ರಸಿದ್ಧಿಯಾಗಿರುವ ಮುಸ್ಲಿಂ ಮಹಿಳೆ, ಸಮಾಜ ಸೇವಕಿ ಜುಬೇದ ಅಧ್ಯಕ್ಷತೆ ಸಮಿತಿಯಿಂದ ಪಟ್ಟಣದ ರಾಜೀವ್ ನಗರದಲ್ಲಿ 3 ದಿನಗಳ ಗಣೇಶೋತ್ಸವ ಸಾರ್ವಜನಿಕರ ಗಮನ ಸೆಳೆದಿದೆ.
ಸಾರ್ವಜನಿಕರ ಗಮನ ಸೆಳೆದ ಪಟ್ಟಣದ ರಾಜೀವ್ ನಗರದಲ್ಲಿನ 3 ದಿನಗಳ ಗಣೇಶೋತ್ಸವ
ಯಡಗೆರೆ ಮಂಜನಾಥ್
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಸಮಾಜದಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಬಾಳೋಣ ಎಂಬ ಸಂದೇಶ ಸಾರುವ ಭಾವೈಕ್ಯತಾ ಗಣೇಶೋತ್ಸವದ ಹೆಸರಿನಲ್ಲಿ ಕಳೆದ 18 ವರ್ಷದಿಂದಲೂ ಜೂನಿಯರ್ ಮದರ್ ತೆರೇಸಾ ಎಂದೇ ಪ್ರಸಿದ್ಧಿಯಾಗಿರುವ ಮುಸ್ಲಿಂ ಮಹಿಳೆ, ಸಮಾಜ ಸೇವಕಿ ಜುಬೇದ ಅಧ್ಯಕ್ಷತೆ ಸಮಿತಿಯಿಂದ ಪಟ್ಟಣದ ರಾಜೀವ್ ನಗರದಲ್ಲಿ 3 ದಿನಗಳ ಗಣೇಶೋತ್ಸವ ಸಾರ್ವಜನಿಕರ ಗಮನ ಸೆಳೆದಿದೆ.
ರಾಜೀವ್ ನಗರದ ಭಾವೈಕ್ಯತ ಗಣೇಶೋತ್ಸವ ಸಮಿತಿಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರು ಸೇರಿದ್ದಾರೆ. ವಿಶೇಷ ಎಂದರೆ ಕಳೆದ 18 ವರ್ಷದಿಂದಲೂ ಈ ಭಾವೈಕ್ಯತೆ ಗಣೇಶೋತ್ಸವ ಸಮಿತಿಗೆ ಸಮಾಜ ಸೇವಕಿ ಜುಬೇದ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಆಯ್ಕೆಯಾಗುತ್ತಿದ್ದಾರೆ. ಈ ವರ್ಷ ಭಾವೈಕ್ಯತಾ ಗಣೇಶೋತ್ಸವ ಪ್ರಾರಂಭ ವಾಗಿ ಸೋಮವಾರ ಪ್ರತಿಷ್ಠಾಪನೆಯಾಗಿದೆ. -- ಕೋಟ್ ---
ಸತತ 18 ವರ್ಷದಿಂದಲೂ ರಾಜೀವ್ ನಗರದಲ್ಲಿ ಭಾವೈಕ್ಯತಾ ಗಣಪತಿ ಸಮಿತಿ ಅಧ್ಯಕ್ಷೆ ಜುಬೇದ ಕನ್ನಡಪ್ರಭದೊಂದಿಗೆ ಮಾತನಾಡಿ ಭಾರತ ದೇಶದಲ್ಲಿ ಹುಟ್ಟಿರುವ ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು. ಬೇರೆ ಧರ್ಮವನ್ನು ಗೌರವಿ ಸೋಣ, ನಮ್ಮ ಧರ್ಮ ಪ್ರಿತಿಸೋಣ. ಎಲ್ಲಾ ಧರ್ಮದವರು ಒಟ್ಟಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿರುವುದರಿಂದ ಮಕ್ಕಳ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ. ಇದರಿಂದ ಮುಂದೆ ಕೋಮು ಸೌಹಾರ್ದ ಬೆಳೆಯಲಿದೆ. ಸಮಾಜದ ಎಲ್ಲಾ ಧರ್ಮ ದವರು ಒಟ್ಟಾಗಿ ಬಾಳೋಣ ಎಂಬ ಸಂದೇಶ ನೀಡುವುದೇ ಭಾವೈಕ್ಯತಾ ಗಣಪತಿ ಉದ್ದೇಶ ಎಂದರು.
ಜುಬೇದ, ಅಧ್ಯಕ್ಷೆ, ಭಾವೈಕ್ಯತಾ ಗಣೇಶೋತ್ಸವ ಸಮಿತಿ, ರಾಜೀವ್ ನಗರ, ನರಸಿಂಹರಾಜಪುರ
--ಬಾಕ್ಸ್---ಬಾವೈಕ್ಯತಾ ಗಣೇಶೋತ್ಸವ ಸಮಿತಿ ಅಧ್ಯಕ್ಷೆಯಾದ ಜುಬೇದ ನರಸಿಂಹರಾಜಪುರದಲ್ಲಿ ಜೂನಿಯರ್ ಮದರ್ ತೆರೇಸಾ ಎಂದೇ ಪ್ರಸಿದ್ಧಿ. ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಪಟ್ಟಣದಲ್ಲಿ ಅನಾಥರು,ಅನಾಥ ರೋಗಿಗಳು ಕಂಡರೆ ತಕ್ಷಣ ಸ್ಪಂದಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ, ಬಟ್ಟೆ ಕೊಡಿಸಿ ಸಂಬಂಧಪಟ್ಟವರಿಗೆ ಅಥವಾ ಅನಾಥಾ ಶ್ರಮಕ್ಕೆ ಬಿಡುತ್ತಾರೆ. ಈವರೆಗೂ 103 ಅನಾಥ ಶವ ಸಂಸ್ಕಾರ ಮಾಡಿದ್ದಾರೆ. 56 ಬಾರಿ ರಕ್ತದಾನ ಮಾಡಿದ್ದಾರೆ. ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷೆಯಾದ ಜುಬೇದ ವೇದಿಕೆಗೆ ಬಂದಿದ್ದ ಆಂಬ್ಯುಲೆನ್ಸ್ ನ್ನು ತಾವೇ ಚಾಲನೆ ಮಾಡುತ್ತಾರೆ. ಕೋವಿಡ್ ಸಮಯದಲ್ಲಿ ಆಂಬ್ಯುಲೆನ್ಸ್ ಮೂಲಕ ಕೋವಿಡ್ ಸೋಂಕಿತ ರೋಗಿಗಳ ಚಿಕಿತ್ಸೆಗೆ ನೆರ ವಾಗಿದ್ದಾರೆ. ಕಳೆದ 5 ವರ್ಷದ ಅವದಿಯಲ್ಲಿ ಪಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜನ ಸ್ಪಂದನಾ ಮಹಿಳಾ ಸಮಾಜದ ಅಧ್ಯಕ್ಷೆಯಾಗಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕೊಡಿಸಿದ್ದಾರೆ .ಹಲವಾರು ಸಂಘ, ಸಂಸ್ಥೆಗಳು ಜುಬೇದ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.