ಹುದ್ದೆಗಾಗಿ ಹಣ: ಕೆಪಿಎಸ್‌ಸಿ ಮಾಜಿ ಸದಸ್ಯೆ ವಿರುದ್ಧ ಕೇಸ್‌

Published : Aug 09, 2026, 06:55 AM IST
KPSC

ಸಾರಾಂಶ

ಕೆಎಎಸ್‌ ನೇಮಕಾತಿ ಸಂಬಂಧಿಸಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ದ ಮಾಜಿ ಸದಸ್ಯೆ ಸೇರಿ ಇಬ್ಬರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಶಿವಶಂಕರಪ್ಪ ಎಸ್‌.ಸಾಹುಕಾರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಅದರ ಬೆನ್ನಲ್ಲೇ ಇದೀಗ ಕೆಪಿಎಸ್ಸಿ ಮಾಜಿ ಸದಸ್ಯೆಯೊಬ್ಬರ ಮೇಲೂ ಕೇಸ್‌ ದಾಖಲಾಗಿದೆ.

ಬೆಂಗಳೂರು : ಕೆಎಎಸ್‌ ನೇಮಕಾತಿ ಸಂಬಂಧಿಸಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ದ ಮಾಜಿ ಸದಸ್ಯೆ ಸೇರಿ ಇಬ್ಬರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪಶು ವೈದ್ಯಾಧಿಕಾರಿ ನೇಮಕ ಸಂಬಂಧಿಸಿ ಈಗಾಗಲೇ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಅದರ ಬೆನ್ನಲ್ಲೇ ಇದೀಗ ಕೆಪಿಎಸ್ಸಿ ಮಾಜಿ ಸದಸ್ಯೆಯೊಬ್ಬರ ಮೇಲೂ ಕೇಸ್‌ ದಾಖಲಾಗಿದೆ.

ವಿದ್ಯಾರ್ಥಿ ಸಂಘಟನೆ ಮುಖಂಡ ಶ್ರೀಕಾಂತ ಕುಮಾರ್‌ ಎಂಬುವರು ನೀಡಿದ ದೂರಿನನ್ವಯ ಕೆಪಿಎಸ್‌ಸಿ ಮಾಜಿ ಸದಸ್ಯೆ ಶಾಂತಾ ಹೊಸಮನಿ ಮತ್ತು ಅಭ್ಯರ್ಥಿ ಮಮಿತಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ನಿವಾಸಿಯಾಗಿರುವ ಮಮಿತಾ ಕೆಎಎಸ್‌ ಪರೀಕ್ಷೆ ಬರೆದು ಸಂದರ್ಶನಕ್ಕೆ ಹಾಜರಾಗಿ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ನಡೆಯುವ ವೇಳೆ ಕೆಪಿಎಸ್‌ಸಿ ಸದಸ್ಯೆಯಾಗಿದ್ದ ಶಾಂತಾ ಹೊಸಮನಿ ಅವರಿಗೆ ಹಣ ನೀಡಿ ಹುದ್ದೆ ಗಿಟ್ಟಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದು ಶ್ರೀಕಾಂತಕುಮಾರ್‌ ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ವಿವರ:

ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಅಕ್ರಮ ಲಂಚದ ವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಮಾಹಿತಿ ನನಗೆ ಲಭ್ಯವಾಗಿದೆ. ದೊರೆತ ಮಾಹಿತಿ ಪ್ರಕಾರ, ಮಮಿತಾ ಅವರು ನೇಮಕಾತಿ ಪ್ರಕ್ರಿಯೆಯಲ್ಲಿ ಹುದ್ದೆ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಲಂಚದ ಹಣ ಪಾವತಿಸಿದ್ದಾರೆ ಅಥವಾ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂಬ ಆರೋಪವಿದೆ. ಅವರು ಸಂದರ್ಶನಕ್ಕೆ ಹಾಜರಾಗಿದ್ದು, ಪ್ರಸ್ತುತ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಮಮಿತಾ ಅವರಿಗೆ ಕೆಪಿಎಸ್‌ಸಿ ಸದಸ್ಯರಾದ ಶಾಂತ ಹೊಸಮನಿ ಅವರ ಸಂಪರ್ಕವಿದೆ ಎಂಬ ಮಾಹಿತಿ ದೊರೆತಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ನಡೆದಿರಬಹುದು ಎಂಬುದರ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- ಕೆಎಎಸ್‌ ಪರೀಕ್ಷೆಯ ಸಂದರ್ಶನಕ್ಕೆ ಹಾಜರಾಗಿ ಫಲಿತಾಂಶಕ್ಕೆ ಕಾಯುತ್ತಿರುವ ಕಲಬುರಗಿಯ ಮಮಿತಾ

- ಕೆಪಿಎಸ್‌ಸಿ ಸದಸ್ಯೆಯಾಗಿದ್ದಾಗ ಶಾಂತಾ ಹೊಸಮನಿ ಅವರಿಗೆ ಮಮಿತಾ ಹಣ ನೀಡಿದ್ದಾರೆಂಬ ಆರೋಪ

- ವಿದ್ಯಾರ್ಥಿ ಸಂಘಟನೆ ಮುಖಂಡ ಶ್ರೀಕಾಂತ ಕುಮಾರ್‌ ಎಂಬುವರಿಂದ ವಿಧಾನಸೌಧ ಠಾಣೆಗೆ ದೂರು

- ಆ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿದ ಪೊಲೀಸರು. ಶಾಂತಾ ಹೊಸಮನಿಯ ಬಗ್ಗೆ ತನಿಖೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಿಡದಿ ಟೌನ್‌ಶಿಪ್‌ನ ವಿರುದ್ಧ ಪಾದಯಾತ್ರೆಗೆ ದೋಸ್ತಿ ಒಗ್ಗಟ್ಟು
ಖಾತೆ ಹಂಚಿಕೆ ಚರ್ಚೆಗೆ ಇಂದು ಸಿಎಂ ದಿಲ್ಲಿಗೆ