₹2000 ಮುಖಬೆಲೆಯ ಶೇ.97ರಷ್ಟು ನೋಟು ವಾಪಸ್‌: ಆರ್‌ಬಿಐ

KannadaprabhaNewsNetwork |  
Published : Nov 02, 2023, 01:01 AM IST

ಸಾರಾಂಶ

2000ರು. ಮೌಲ್ಯದ ನೋಟು ಅಮಾನ್ಯೀಕರಣದ ನಂತರ ಅ.31ರವರೆಗೆ 3.46 ಲಕ್ಷ ಕೋಟಿ ರು. (ಶೇ.97) ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ

ಮುಂಬೈ: 2000ರು. ಮೌಲ್ಯದ ನೋಟು ಅಮಾನ್ಯೀಕರಣದ ನಂತರ ಅ.31ರವರೆಗೆ 3.46 ಲಕ್ಷ ಕೋಟಿ ರು. (ಶೇ.97) ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಮೇ 19ರಂದು ನೋಟು ಅಮಾನ್ಯೀಕರಣದ ಘೋಷಣೆ ಮಾಡಿದಾಗ ದೇಶದಲ್ಲಿ ಒಟ್ಟು 3.46 ಲಕ್ಷ ಕೋಟಿ ರು. ಮೌಲ್ಯದ 2 ಸಾವಿರ ರು. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಅವುಗಳ ಪೈಕಿ ಶೇ.97ರಷ್ಟು ನೋಟುಗಳು ಬ್ಯಾಂಕಿಗೆ ಬಂದಿದ್ದು, ಇನ್ನು ಕೇವಲ 10 ಸಾವಿರ ಕೋಟಿ ರು. ಮೌಲ್ಯದ 2 ಸಾವಿರ ನೋಟುಗಳು ಮಾತ್ರ ಬರುವುದು ಬಾಕಿಯಿದೆ. ಅದಕ್ಕಾಗಿ ದೇಶದ 19 ರಿಜರ್ವ್‌ ಬ್ಯಾಂಕ್‌ ಶಾಖೆಗಳು ಹಾಗೂ ಅಂಚೆ ಕಚೇರಿಯಲ್ಲಿ 2 ಸಾವಿರ ರು. ನೋಟುಗಳನ್ನು ರಿಜರ್ವ್‌ ಬ್ಯಾಂಕಿಗೆ ಕಳುಹಿಸುವ ಮೂಲಕ ಬದಲಾಯಿಸಿಕೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ