ರೋಟರಿ, ರೋಟರಿ ಸಿಲ್ಕ್‌ಸಿಟಿಯಿಂದ ಜಾಗೃತಿ ಅಭಿಯಾನ । ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು, ಪ್ರತಿಜ್ಞಾ ವಿಧಿ ಬೋಧನೆ
ದೀಪಾವಳಿ ಹಬ್ಬವನ್ನು ದೀಪಗಳನ್ನು ಹಚ್ಚಿ ಕತ್ತಲಿನಿಂದ ಬೆಳಕಿನ ಜ್ಞಾನದೆಡೆಗೆ ಎಲ್ಲರೂ ಹೋಗೋಣ. ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುವ ಪಟಾಕಿಗಳನ್ನು ತ್ಯಜಿಸೋಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನ ಮುಂಭಾಗದ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಮತ್ತು ರೋಟರಿ ಜಿಲ್ಲೆ -೩೧೮೧ರ ವಲಯ -೯ರ ರೋಟರಿ ಸಂಸ್ಥೆಗಳು, ಮೈಸೂರು ಸೈನ್ಸ್ ಫೌಂಡೇಷನ್ ಸಹಯೋಗದಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದಾಗುವ ದುಷ್ಪರಿಣಾಮಗಳು ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೀಪಾವಳಿ ಹಾಗೂ ಇನ್ಯಾವುದೇ ಹಬ್ಬಗಳ ಆಚರಣೆ ನೆಪದಲ್ಲಿ ಪರಿಸರವನ್ನು ಹಾಳುವುದು ಮಾಡುವುದು ಸರಿಯಲ್ಲ.ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು ಹಾಗೂ ಹಸಿರು ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಯಿಂದ ಬಹಳಷ್ಟು ದುಷ್ಪರಿಣಾಮಗಳಾಗುತ್ತಿವೆ. ಪರಿಸರದ ಕಾಡುಪ್ರಾಣಿಗಳು, ಸಾಕು ಪ್ರಾಣಿಗಳು ಹಾಗೂ ಪಟಾಕಿ ಹೊಡೆಯುವಾಗ ನಡೆಯುವ ದುರಂತಗಳು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಶಬ್ದದಿಂದ ತೊಂದರೆಯಾಗುತ್ತದೆ. ಅಲ್ಲದೇ, ಪಟಾಕಿ ಸಿಡಿತದಿಂದ ವಾಯುವ್ಯ ಮಾಲಿನ್ಯವಾಗುತ್ತದೆ. ಉಸಿರಾಟಕ್ಕೆ ತೊಂದರೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತದೆ. ಇದನ್ನು ತಪ್ಪಿಸಲು ಎಲ್ಲರೂ ಪಟಾಕಿ ಬದಲಾಗಿ ದೀಪಗಳನ್ನು ಹಚ್ಚಿ ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡೋಣ ಎಂದರು.
ಪರಿಸರ ಅಧಿಕಾರಿ ಉಮಾಶಂಕರ್ ಮಾತನಾಡಿ, ನಮ್ಮ ಜಿಲ್ಲೆಯು ಉತ್ತಮ ಪರಿಸರ ಸಂರಕ್ಷಣೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಜಿಲ್ಲೆ ಅರಣ್ಯ ಪ್ರದೇಶವನ್ನು ಹೆಚ್ಚು ಹೊಂದಿರುವುದು . ಈ ಪ್ರದೇಶವನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಲು ನಿಮ್ಮಲ್ಲರ ಸಹಕಾರ ಅತಿ ಮುಖ್ಯವಾಗಿದೆ ಎಂದರು.
------------------------