ಕನ್ನಡಪ್ರಭ ವಾರ್ತೆ ಬೆಂಗಳೂರು
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಯನಗರ ಘಟಕ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ, ಜಾತಿ ಧರ್ಮ, ಅಸೂಯೆ, ದ್ವೇಷದಿಂದ ಪ್ರಪಂಚದಲ್ಲಿ ಯುದ್ಧ ನಡೆಯುತ್ತಿದ್ದು, ಮನುಷ್ಯರು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ನಮಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಬೇಕಾಗಿದೆ ಎಂದರು.
ಬಸವಣ್ಣ, ಅಕ್ಕಮಹಾದೇವಿ, ಶಿವಕುಮಾರ ಸ್ವಾಮಿ ಅವರು ಜಾತಿ, ಧರ್ಮ, ಅಸೂಯೆ ಬಿಟ್ಟು ಮಾನವರಾಗಿ ಬದುಕಬೇಕೆಂದು ನೀಡಿದ ಸಂದೇಶಗಳನ್ನು ವಿಶ್ವವೂ ಪಾಲಿಸಿದಾಗ ಮಾತ್ರ ಮಾನವ ಜನ್ಮಸಾರ್ಥಕ ಎಂದು ಸ್ವಾಮೀಜಿ ತಿಳಿಸಿದರು.ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಯಾವುದೇ ಸರ್ಕಾರ ಆಗಿದ್ದರೂ ಬಸವಣ್ಣನವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಮೂಲಕ ಉತ್ತಮ ಕೆಲಸ ಮಾಡಲಾಗಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಯನಗರ ಘಟಕ ಹಮ್ಮಿಕೊಂಡಿದ್ದ ಬಸವ ಜಯಂತಿಯನ್ನು ಸಿದ್ದಗಂಗಾ ಮಠದ ಶಿವ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಸಿ.ಕೆ. ರಾಮಮೂರ್ತಿ, ಮಾಜಿ ಮೇಯರ್ ಗಂಗಾಬಿಕೆ ಇದ್ದರು.ಮಹನೀಯರ ಮೂರ್ತಿಗಳ ಮೆರವಣಿಗೆ:
ಕಂಬಿ ಸಿದ್ದರಾಮಣ್ಣ ವಸತಿ ನಿಲಯದಿಂದ ರಾಜಾಜಿನಗರದ ಮೇಲ್ಸೇತುವೆಯಲ್ಲಿರುವ ಬಸವಣ್ಣನವರ ಪ್ರತಿಮೆವರೆಗೆ ಮಹನೀಯರ ಮೂರ್ತಿಗಳ ಮೆರವಣಿಗೆ ನಡೆಯಿತು. ವೀರಗಾಸೆ, ಕಂಸಾಳೆ ಮತ್ತು ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ರಾಜಾಜಿನಗರದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಗೋಪಾಲಯ್ಯ ಮಾಲಾರ್ಪಣೆ ಮಾಡಿದರು.ಕೇಂದ್ರ ನಗರ ಪಾಲಿಕೆಯಲ್ಲಿ ಆಚರಣೆ:
ಮುಸ್ಲಿಂ ಕುಟುಂಬದಿಂದ ಬಸವ ಜಯಂತಿ:
ಕಳೆದ ನಾಲ್ಕು ವರ್ಷಗಳಿಂದ ಮೌಲಾಲಿ ಬಸವ ಜಯಂತಿ ಆಚರಿಸುತ್ತಿದ್ದಾರೆ. ಸಮಾನತೆ ಸಂದೇಶ ಸಾರಿದ ಬಸವಣ್ಣ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಹೀಗಾಗಿ, ಇವರ ಜಯಂತಿ ಆಚರಣೆ ನನಗೆ ನಾಡ ಹಬ್ಬದಂತೆ ಎಂದು ಮೌಲಾಲಿ ಹೇಳಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಬಸವ ಜಯಂತಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಅವರು ಬಸವಣ್ಣನ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ, ಅದನ್ನು ಅಳವಡಿಸಕೊಳ್ಳದೇ ಬರೀ ಆಚರಣೆಗೆ ಸೀಮಿತವಾಗಿಸಿದ್ದಾರೆ ಎಂದು ವಿಷಾದಿಸಿದರು.
ಮುಸ್ಲಿಂ ಕುಟುಂಬದಿಂದ ಬಸವ ಜಯಂತಿಶ್ವಾನದಳದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೌಲಾಲಿ ಅವರು ಆಡುಗೋಡಿ ಪೊಲೀಸ್ ವಸತಿಗೃಹದಲ್ಲಿನ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಬಸವ ಜಯಂತಿ ಆಚರಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಮೌಲಾಲಿ ಬಸವ ಜಯಂತಿ ಆಚರಿಸುತ್ತಿದ್ದಾರೆ. ಸಮಾನತೆ ಸಂದೇಶ ಸಾರಿದ ಬಸವಣ್ಣ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಹೀಗಾಗಿ, ಇವರ ಜಯಂತಿ ಆಚರಣೆ ನನಗೆ ನಾಡ ಹಬ್ಬದಂತೆ ಎಂದು ಮೌಲಾಲಿ ಹೇಳಿದ್ದಾರೆ.