ಮೈಸೂರುನಗರದ ಯಾದವಗಿರಿ ರಾಮಕೃಷ್ಣ ವಿದ್ಯಾಶಾಲೆ ಆವರಣದಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ 4- 5 ವರ್ಷದ ಗಂಡು ಚಿರತೆ ಸಿಕ್ಕಿಬಿದ್ದಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಡಿ.10 ರಂದು ರಾಮಕೃಷ್ಣ ವಿದ್ಯಾಶಾಲಾ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿರುವುದಾಗಿ ಮಾಹಿತಿ ಬಂದ ಮೇರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಡಿ.11 ರಂದು ಒಂದು ಚಿರತೆ ಬೋನ್, ನಂತರ ಡಿ.14 ರಂದು ಮತ್ತೊಂದು ಬೋನನ್ನು ಮತ್ತೊಂದು ಸ್ಥಳದಲ್ಲಿ ಇರಿಸಿ, ಜೊತೆಗೆ ಟ್ರಾಪ್ ಕ್ಯಾಮರಾ ಅಳಡಿಸಿ ನಿಗಾ ವಹಿಸಲಾಗಿತ್ತು. ಹೀಗಿರುವಾಗ, ಮಂಗಳವಾರ ಬೆಳಗಿನ ಜಾವ ಚಿರತೆ ಬೋನಿಗೆ ಸಿಕ್ಕಿಬಿದ್ದಿದ್ದು, ಅರಣ್ಯ ಇಲಾಖೆಯ ಆರ್ ಎಫ್ಒ ಸುರೇಂದ್ರ ಮತ್ತು ಸಿಬ್ಬಂದಿ ಚಿರತೆಯನ್ನು ಅರಣ್ಯಕ್ಕೆ ಬಿಡಲು ರವಾನಿಸಿದ್ದಾರೆ.