ಬಿಬಿಎಂಪಿ ಹಾಗೂ ಬಿಎಸ್‌ಡಬ್ಲ್ಯೂಎಂಎಲ್‌ನಿಂದ ಸ್ವಯಂ ಚಾಲಿತ ಕಸ ವಿಂಗಣಡಣೆ ಘಟಕಕ್ಕೆ ಸಿಎಂ ಚಾಲನೆ

KannadaprabhaNewsNetwork |  
Published : Nov 29, 2024, 01:02 AM ISTUpdated : Nov 29, 2024, 07:00 AM IST
SOLID WASTE 4 | Kannada Prabha

ಸಾರಾಂಶ

ನಗರದ ಛಲವಾದಿ ಪಾಳ್ಯದಲ್ಲಿ ಬಿಬಿಎಂಪಿ ಹಾಗೂ ಬಿಎಸ್‌ಡಬ್ಲ್ಯೂಎಂಎಲ್‌ನಿಂದ ನಿರ್ಮಿಸಲಾದ ದ್ವಿತೀಯ ಹಂತದ ಕಸ ವರ್ಗಾವಣೆ ಹಾಗೂ ಸ್ವಯಂ ಚಾಲಿತ ಕಸ ವಿಂಗಣಡಣೆ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

 ಬೆಂಗಳೂರು :  ನಗರದ ಛಲವಾದಿ ಪಾಳ್ಯದಲ್ಲಿ ಬಿಬಿಎಂಪಿ ಹಾಗೂ ಬಿಎಸ್‌ಡಬ್ಲ್ಯೂಎಂಎಲ್‌ನಿಂದ ನಿರ್ಮಿಸಲಾದ ದ್ವಿತೀಯ ಹಂತದ ಕಸ ವರ್ಗಾವಣೆ ಹಾಗೂ ಸ್ವಯಂ ಚಾಲಿತ ಕಸ ವಿಂಗಣಡಣೆ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್ ಸೇರಿ ಮೊದಲಾದವರಿಗೆ ಘಟಕ ನಿರ್ವಹಿಸುವ ಕಾರ್ಯ ವಿಧಾನದ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ₹12.50 ಕೋಟಿ ಅನುದಾನದಲ್ಲಿ ಕಸದ ಟ್ರಾನ್ಸ್ ಫರ್ ಸ್ಟೇಷನ್‌ ನಿರ್ಮಾಣ ಮಾಡಲಾಗಿದೆ. ಮನೆ-ಮನೆಯಿಂದ ಸಂಗ್ರಹಿಸಿ ಆಟೋದ ಮೂಲಕ ತೆಗೆದುಕೊಂಡು ಬರುವ ತ್ಯಾಜ್ಯವನ್ನು ಕಾಂಪ್ಯಾಕ್ಟರ್‌ ವಾಹನಕ್ಕೆ ವೈಜ್ಞಾನಿಕವಾಗಿ ವರ್ಗಾವಣೆ ಮಾಡುವ ಘಟಕ ಇದಾಗಿದೆ. ಜತೆಗೆ, ಹಸಿ ಮತ್ತು ಒಣ ಕಸ ಬೇರ್ಪಡಿಸುವ ಘಟಕ ಸಹ ಸ್ಥಾಪನೆ ಮಾಡಲಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 6 ವಾರ್ಡ್‌ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ 3 ವಾರ್ಡ್‌ ಕಸವನ್ನು ಈ ಘಟಕದ ಮೂಲಕ ವರ್ಗಾವಣೆ ಮಾಡಿ ಸಾಗಾಣಿಕೆ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್‌ ತಿಳಿಸಿದರು.

ಕಸವನ್ನುವಿಂಗಡಣೆ ಕಡ್ಡಾಯವಾಗಿದೆ. ಆದರೆ, ಕೆಲವು ಪ್ರದೇಶದಲ್ಲಿ ಕಸ ವಿಂಗಡಣೆ ಮಾಡಿ ಸಾರ್ವಜನಿಕರು ಕಸ ನೀಡುತ್ತಿಲ್ಲ. ಆ ಪ್ರದೇಶದ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡುವುದಕ್ಕೆ ಸ್ವಯಂ ಚಾಲಿತ ಘಟಕ ಸ್ಥಾಪಿಸಲಾಗಿದೆ. ಪ್ರತಿ ಗಂಟೆಗೆ 5 ಮೆಟ್ರಕ್‌ ಟನ್ ತ್ಯಾಜ್ಯ ವಿಂಗಡಣೆ ಮಾಡುವ 2 ಘಟಕ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್, ಬಿ‌.ಎಸ್.ಡಬ್ಲ್ಯೂ.ಎಂ.ಎಲ್ ನ ಸಿಇಒ ಡಾ. ಕೆ. ಹರೀಶ್ ಕುಮಾರ್, ವಲಯ ಆಯುಕ್ತೆ ಅರ್ಚನಾ ಮೊದಲಾದವರಿದ್ದರು.

PREV

Latest Stories

ತೆಂಗು ಬೆಳೆಯುವ ರೈತರೇ ತೆಂಗಿನ ಎಣ್ಣೆ ಉದ್ಯಮಿಯಾಗಿ ಬೆಳೆದಾಗ
ಕ್ಯುಎಸ್‌ ಶಿಕ್ಷಣ ರ್‍ಯಾಂಕಿಂಗ್‌: ಟಾಪ್‌ 130ರಲ್ಲಿ ಬೆಂಗಳೂರು
ಹೆಬ್ಬಾಳ- ಸಿಲ್ಕ್‌ಬೋರ್ಡ್‌ ಸುರಂಗ ರಸ್ತೆ ನಿರ್ಮಾಣಕ್ಕೆ ಸಿದ್ಧತೆ