ಅಧ್ಯಕ್ಷರೇ, ನಾನು ಯಾರಿಗೆ ಜಾಗೃತಿ ಮೂಡಿಸಲಿ ! ಅಧ್ಯಕ್ಷ ಸ್ಥಾನ ಕಬಳಿಸಿ ಶಿಷ್ಯನಿಗೆ ತಿರುಮಂತ್ರ

Sujatha NR | Published : May 19, 2025 11:21 AM
Kandiddu

ಆಗಿದ್ದೇನಪ್ಪ ಅಂದರೆ, ವಿಶ್ವ ಅಸ್ತಮಾ ದಿನದ ಅಂಗವಾಗಿ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜಾಗೃತಿ ಹಾಗೂ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಆದರೆ, ಈ ಜಾಗೃತಿ ಶಿಬಿರಕ್ಕೆ ಗದಗ ಮೂಲದ ಸಂಸ್ಥೆ ಅಧ್ಯಕ್ಷ ಸಂಶಿಮಠ, ವೈದ್ಯ ಗೋವಿಂದ ದೇಸಾಯಿ ಹಾಗೂ ಮಾಧ್ಯಮದ ಒಬ್ಬ ಪ್ರತಿನಿಧಿ ಮಾತ್ರ ಬಂದಿದ್ದರು.

ಆಗಿದ್ದೇನಪ್ಪ ಅಂದರೆ, ವಿಶ್ವ ಅಸ್ತಮಾ ದಿನದ ಅಂಗವಾಗಿ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜಾಗೃತಿ ಹಾಗೂ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಆದರೆ, ಈ ಜಾಗೃತಿ ಶಿಬಿರಕ್ಕೆ ಗದಗ ಮೂಲದ ಸಂಸ್ಥೆ ಅಧ್ಯಕ್ಷ ಸಂಶಿಮಠ, ವೈದ್ಯ ಗೋವಿಂದ ದೇಸಾಯಿ ಹಾಗೂ ಮಾಧ್ಯಮದ ಒಬ್ಬ ಪ್ರತಿನಿಧಿ ಮಾತ್ರ ಬಂದಿದ್ದರು.

ದೊಡ್ಡ ಕಾರ್ಯಕ್ರಮದ ಆ ಮೂರು ಜನ!

ಅಲ್ಲಾ ಅಧ್ಯಕ್ಷರೇ, ಯಾರೊಬ್ಬರೂ ಬಂದೇ ಇಲ್ಲ. ನಾ ಯಾರಿಗೆ ಚೆಕ್‌ ಮಾಡಲಿ, ಯಾರ ಮುಂದೆ ಜಾಗೃತಿ, ಅರಿವು ಮೂಡಿಸುವ ಭಾಷಣ ಮಾಡಲಿ..!

ಇದು ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಸ್ತಮಾ ಕುರಿತು ವೈದ್ಯಕೀಯ ಜಾಗೃತಿ ಹಾಗೂ ತಪಾಸಣಾ ಶಿಬಿರದಲ್ಲಿ ವೈದ್ಯರೊಬ್ಬರು ಪ್ರಶ್ನೆ ಮಾಡಿದ ಪರಿ.

ಆಗಿದ್ದೇನಪ್ಪ ಅಂದರೆ, ವಿಶ್ವ ಅಸ್ತಮಾ ದಿನದಂಗವಾಗಿ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜಾಗೃತಿ ಹಾಗೂ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಆದರೆ, ಈ ಜಾಗೃತಿ ಶಿಬಿರಕ್ಕೆ ಗದಗ ಮೂಲದ ಸಂಸ್ಥೆ ಅಧ್ಯಕ್ಷ ಸಂಶಿಮಠ, ವೈದ್ಯ ಗೋವಿಂದ ದೇಸಾಯಿ ಹಾಗೂ ಮಾಧ್ಯಮದ ಒಬ್ಬ ಪ್ರತಿನಿಧಿ ಮಾತ್ರ ಬಂದಿದ್ದರು.

ಸಂಸ್ಥೆಯ ಸದಸ್ಯರು ಒತ್ತಟ್ಟಿಗಿರಲಿ, ಪದಾಧಿಕಾರಿಗಳು, ನಿರ್ದೇಶಕ ಮಂಡಳಿ ಕೂಡ ಭಾಗವಹಿಸಿರಲಿಲ್ಲ. ಅದರಲ್ಲೂ ಚಿಕಿತ್ಸೆ, ಪರೀಕ್ಷೆಗೆ ಅಸ್ತಮಾದಿಂದ ಬಳಲುತ್ತಿರುವವರೂ ಯಾರೂ ಬಂದಿರಲಿಲ್ಲ. ಇದರಿಂದ ತೀವ್ರ ಬೇಸರಗೊಂಡ ವೈದ್ಯರು - ಗದಗದಿಂದ ನೀವು ಬಂದಿದ್ದೀರಿ. ಆಸ್ಪತ್ರೆಯಿಂದ ನಾನು ಬಂದಿದ್ದೀನಿ. ಪತ್ರಿಕೆಯಿಂದ ಇವರೊಬ್ಬರು ಮಾತ್ರ ಬಂದಿದ್ದರು. ಮೂರೇ ಜನಕ್ಕೆ ಏನಂತ ಶಿಬಿರ ಮಾಡೋದು ಸರ್‌ ಎಂದು ಹೇಳಿದರು.

ನಮ್ಮ ಪದಾಧಿಕಾರಿಗಳು ಬರಲಿಲ್ಲ ನೋಡ್ರಿ ಎಂದು ಬೇಸರಿಸಿಕೊಳ್ಳುತ್ತಾ ಅಧ್ಯಕ್ಷರು ಮುಂದೆ ಯಾವಾಗಲಾದರೂ ಮಾಡೋಣ ಬಿಡಿ ಎಂದರು.

ಕೈ ಕೊಟ್ಟ ಗಾಡ್‌ಫಾದರ್‌

ಕರಾವಳಿಯ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆ ಕೊನೆಗೂ ನಡೆದಿದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದ ಗಾಡ್‌ಫಾದರ್‌ರೇ ಏಕಾಏಕಿ ಶಿಷ್ಯನಿಗೆ ತಿರುಮಂತ್ರ ಹಾಕಿದ ಕಥೆಯಿದು.

ಸ್ಥಳೀಯ ಮುಖಂಡರೊಬ್ಬರು ಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇನ್ನಿಲ್ಲದ ಪೈಪೋಟಿ ನಡೆಸಿದ್ದರು. ಹಿಂದಿನ ಆಡಳಿತದ ಅವ್ಯವಹಾರ ಬಯಲಿಗೆ ಎಳೆಯುತ್ತೇನೆ ಎಂದು ಬೇಕಾದ ದಾಖಲೆಯನ್ನೂ ಸಿದ್ಧಪಡಿಸಿ ಪಕ್ಷ ನಾಯಕರ ಬಾಗಿಲು ತಟ್ಟಿದ್ದರು. ಇದನ್ನೇ ನಂಬಿ ಅವರ ಪಕ್ಷ ನಾಯಕರು ಮುಖಂಡರ ಬೆಂಬಲಕ್ಕೆ ನಿಂತರು.

ಈ ಬೆಂಬಲ ಸಿಕ್ಕಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಸದರಿ ಮುಖಂಡರೇ ಅಧ್ಯಕ್ಷರು ಎಂಬ ಪ್ರಚಾರ ಜೋರಾಯಿತು. ಮುಖಂಡರೇ ಅಧ್ಯಕ್ಷರಾಗುತ್ತಾರೆ ಎಂಬುದರಲ್ಲಿ ಯಾರಿಗೂ ಸಂಶಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ, ಆ ರೀತಿಯಾಗಲಿಲ್ಲ. ಏಕೆಂದರೆ, ಮುಖಂಡರಿಗೆ ಸಡನ್‌ ಆಗಿ ಇಬ್ಬರು ಪ್ರತಿಸ್ಪರ್ಧಿಗಳು ಹುಟ್ಟಿಕೊಂಡರು.

ಆ ಸ್ಪರ್ಧಿಗಳನ್ನು ರಾಜ್ಯ ನಾಯಕರು ಸಮಾಧಾನಪಡಿಸಿದರೂ ಅವರು ಮಾತ್ರ ಪಟ್ಟು ಬಿಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮುಖಂಡರು ಸಭೆಯಿಂದ ಹೊರ ನಡೆದರು. ಇದೇ ಸರಿಯಾದ ಸಂದರ್ಭ ಎಂದು ಉಳಿದ ಸದಸ್ಯರು ಒಟ್ಟಾಗಿ ಅವರಲ್ಲೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಯೇ ಬಿಟ್ಟರು.

ಸೋ, ಮುಖಂಡರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಯಿತು. ಇದೆಲ್ಲದರ ಹಿಂದೆ ತಮ್ಮದೇ ಗಾಡ್‌ಫಾದರ್‌ ಇದ್ದಾರೆ ಎಂಬ ಗುಮಾನಿಗೆ ಬಿದ್ದ ಸದರಿ ಮುಖಂಡ ಈಗ ಗಾಡ್ ಫಾದರ್‌ ವಿರುದ್ಧ ಬೈಗುಳಗಳ ಸುರಿಮಳೆ ಸುರಿಸುತ್ತಿದ್ದಾರಂತೆ!

-ಶಿವಾನಂದ ಗೊಂಬಿ

-ಆತ್ಮಭೂಷಣ್‌

Read more Articles on