ವಾಣಿಜ್ಯ ಎಲ್‌ಪಿಜಿ ದರ 101 ರು. ಹೆಚ್ಚಳ: ಗೃಹಎಲ್‌ಪಿಜಿ ಯಥಾಸ್ಥಿತಿ

KannadaprabhaNewsNetwork | Published : Nov 2, 2023 1:01 AM

ಸಾರಾಂಶ

ವಾಣಿಜ್ಯ ಅಡುಗೆ ಅನಿಲದ ಸಿಲಿಂಡರ್‌ ದರವನ್ನು 101.5 ರು.ನಷ್ಟು ಹೆಚ್ಚಳ ಮಾಡಲಾಗಿದೆ
ನವದೆಹಲಿ: ವಾಣಿಜ್ಯ ಅಡುಗೆ ಅನಿಲದ ಸಿಲಿಂಡರ್‌ ದರವನ್ನು 101.5 ರು.ನಷ್ಟು ಹೆಚ್ಚಳ ಮಾಡಲಾಗಿದೆ. ಹೀಗಾಗಿ 19 ಕೇಜಿಯ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 1914 ರು.ಗೆ, ಮುಂಬೈನಲ್ಲಿ 1785 ರು., ದೆಹಲಿಯಲ್ಲಿ 1833 ರು.ಗೆ ತಲುಪಿದೆ.101.5 ರು.ಗಳಷ್ಟು ಹೆಚ್ಚಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಕೂಡಾ ವಾಣಿಜ್ಯ ಎಲ್‌ಪಿಜಿ ದರವನ್ನು 209 ರು. ಹೆಚ್ಚಿಸಲಾಗಿತ್ತು. ಅದರೆ ಗೃಹಬಳಕೆಯ 14.2 ಕೇಜಿಯ ಸಿಲಿಂಡರ್‌ ಬೆಲೆ ಯಾವುದೇ ಬದಲಾವಣೆಯಲ್ಲಿ 903 ರು.ಗಳಿಗೆ ಸ್ಥಿರವಾಗಿದೆ.

Share this article