ಮೆಡ್‌ಟ್ರಾನಿಕ್ ಮತ್ತು ಅಪೋಲೋ ಸಹಭಾಗಿತ್ವದಲ್ಲಿ ಹೈದರಾಬಾದ್‌ನಲ್ಲಿ ಐಸಿಯು ಆಫ್ ದಿ ಫ್ಯೂಚರ್

KannadaprabhaNewsNetwork |  
Published : Jul 21, 2026, 03:00 AM IST
ಮೆಡ್‌ಟ್ರಾನಿಕ್‌ | Kannada Prabha

ಸಾರಾಂಶ

ಮೆಡ್‌ ಟ್ರಾನಿಕ್ ಮತ್ತು ಅಪೋಲೋ ಹಾಸ್ಪಿಟಲ್ಸ್ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ‘ಐಸಿಯು ಆಫ್ ದಿ ಫ್ಯೂಚರ್’ ಅನ್ನು ಆರಂಭಿಸಿವೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು:

ಆರೋಗ್ಯ ರಕ್ಷಣೆ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆ ಮೆಡ್‌ ಟ್ರಾನಿಕ್ ಮತ್ತು ದೇಶದ ಪ್ರಮುಖ ಹೆಲ್ತ್‌ ಕೇರ್ ನೆಟ್‌ವರ್ಕ್ ಅಪೋಲೋ ಹಾಸ್ಪಿಟಲ್ಸ್, ವೈದ್ಯಕೀಯ ರಂಗದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಸಹಭಾಗಿತ್ವ ಮಾಡಿಕೊಂಡಿವೆ. ಈ ಸಹಭಾಗಿತ್ವದ ಭಾಗವಾಗಿ ಹೈದರಾಬಾದ್‌ ನ ಜುಬಿಲಿ ಹಿಲ್ಸ್‌ ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸುಧಾರಿತ ಐಸಿಯು (ತೀವ್ರ ನಿಗಾ ಘಟಕ) ‘ಐಸಿಯು ಆಫ್ ದಿ ಫ್ಯೂಚರ್’ ಅನ್ನು ಉದ್ಘಾಟಿಸಲಾಗಿದೆ.

ಜುಬಿಲಿ ಹಿಲ್ಸ್ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ಈ 11 ಹಾಸಿಗೆಗಳ ಅತ್ಯಾಧುನಿಕ ಐಸಿಯು ಇದಾಗಿದ್ದು, ಈ ಘಟಕವು ಮೆಡ್‌ಟ್ರಾನಿಕ್ ಸಂಸ್ಥೆಯ ಸುಧಾರಿತ ಅಕ್ಯೂಟ್ ಕೇರ್ ಮತ್ತು ಮಾನಿಟರಿಂಗ್ (ಎಸಿಎಂ) ತಂತ್ರಜ್ಞಾನಗಳನ್ನು ಹೊಂದಿರಲಿದೆ. ತೀವ್ರ ನಿಗಾದಲ್ಲಿರುವ ರೋಗಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲು ಮತ್ತು ತುರ್ತು ಚಿಕಿತ್ಸೆ ನೀಡಲು ಇದು ಸಹಕಾರಿಯಾಗಲಿದ್ದು, ಜಂಟಿ ಆರೋಗ್ಯ ಆವಿಷ್ಕಾರದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಸೌಲಭ್ಯವು ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರದೆ, ಮೆಡ್‌ ಟ್ರಾನಿಕ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ನೈಜ-ಪ್ರಪಂಚದ ಕ್ಲಿನಿಕಲ್ ಆವಿಷ್ಕಾರದ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.

ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ, ಅಪೋಲೋ ಹೆಲ್ತ್‌ ಆಕ್ಸಿಸ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನ್‌ಪ್ರೀತ್ ಸಿಂಗ್ ಮತ್ತು ಮೆಡ್‌ಟ್ರಾನಿಕ್ ಸಂಸ್ಥೆಯ ಭಾರತೀಯ ಉಪಖಂಡದ ದೇಶಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷ ಮನ್‌ದೀಪ್ ಸಿಂಗ್ ಕುಮಾರ್ ಈ ಒಪ್ಪಂದದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೆಡ್‌ ಟ್ರಾನಿಕ್‌ ನ ಎಸಿಎಂ ತಂಡದ ಸಹಯೋಗದೊಂದಿಗೆ ರೂಪುಗೊಂಡಿರುವ ಈ ಯೋಜನೆಯು, ದೇಶದ ತುರ್ತು ಚಿಕಿತ್ಸಾ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮತ್ತು ಜಂಟಿ ಆರೋಗ್ಯ ಆವಿಷ್ಕಾರಗಳನ್ನು ಉತ್ತೇಜಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ವೈದ್ಯಕೀಯ ವೃತ್ತಿಪರರು ಮತ್ತು ತಂತ್ರಜ್ಞಾನ ನಾಯಕರ ನಡುವೆ ನಿಕಟ ಸಹಯೋಗವನ್ನು ಬೆಳೆಸುವ ಜೊತೆಗೆ, ದಿನದಿಂದ ದಿನಕ್ಕೆ ಬದಲಾಗುತ್ತಿರುವ ರೋಗಿಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಈ ಸಂಯೋಜಿತ ಐಸಿಯುವನ್ನು ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಮಾತನಾಡಿದ ಮೆಡ್‌ ಟ್ರಾನಿಕ್ ಸಂಸ್ಥೆಯ ಭಾರತೀಯ ಉಪಖಂಡದ ದೇಶಗಳ ಉಪಾಧ್ಯಕ್ಷ ಮನ್‌ದೀಪ್ ಸಿಂಗ್ ಕುಮಾರ್ ಅವರು, ‘ಅಪೋಲೋ ಆಸ್ಪತ್ರೆಯಲ್ಲಿನ ಈ ಸುಧಾರಿತ ಐಸಿಯು ರೋಗಿಗಳ ಆರೈಕೆ ಮತ್ತು ಕ್ಲಿನಿಕಲ್ ಶ್ರೇಷ್ಠತೆ ಸಾಧಿಸಲು ನಮ್ಮಿಬ್ಬರ ಜಂಟಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಹಯೋಗದ ಮೂಲಕ ನೈಜ-ಪ್ರಪಂಚದ ಕ್ಲಿನಿಕಲ್ ವಾತಾವರಣದಿಂದ ನಾವು ಅಮೂಲ್ಯವಾದ ಒಳನೋಟಗಳನ್ನು ಪಡೆಯಲಿದ್ದೇವೆ. ಇದು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ವೈದ್ಯರಿಗೆ ನೆರವಾಗುವ ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸುವ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಾಯ ಮಾಡಲಿದೆ’ ಎಂದರು.

ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಅವರು ಮಾತನಾಡಿ, ‘ತುರ್ತು ನಿಗಾ ವಿಭಾಗದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಪ್ರತಿ ನಿಮಿಷ ಮತ್ತು ಪ್ರತಿಯೊಂದು ಚಿಕಿತ್ಸಾ ಕ್ರಮವೂ ರೋಗಿಯ ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ. ಇಂದಿನ ವೈದ್ಯಕೀಯ ರಂಗವು ಸಂಪೂರ್ಣವಾಗಿ ದತ್ತಾಂಶ ಆಧಾರಿತವಾಗುತ್ತಿದ್ದು, ಭಾರತಕ್ಕೆ ಕೇವಲ ಅತ್ಯುತ್ತಮ ತಂತ್ರಜ್ಞಾನಗಳನ್ನು ತರುವುದು ಮಾತ್ರ ನಮ್ಮ ಜವಾಬ್ದಾರಿಯಲ್ಲ, ಬದಲಿಗೆ ಅವು ವೈದ್ಯಕೀಯ ನಿರ್ಧಾರಗಳನ್ನು ಮತ್ತು ರೋಗಿಗಳು ಗುಣಮುಖರಾಗುವ ಪ್ರಮಾಣವನ್ನು ಅರ್ಥಪೂರ್ಣವಾಗಿ ಸುಧಾರಿಸುವಂತೆ ನೋದಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ’ ಎಂದು ಹೇಳಿದರು.

ಮೆಡ್‌ ಟ್ರಾನಿಕ್‌ ನ ಅಕ್ಯೂಟ್ ಕೇರ್ ಮಾನಿಟರಿಂಗ್ ವಿಭಾಗದ ಆರ್‌ ಆಂಡ್‌ ಡಿ ಉಪಾಧ್ಯಕ್ಷ ಜೇಸನ್ ಕೇಸ್ ಮಾತನಾಡಿ, ‘ವೈದ್ಯರಿಗಾಗಿ ಆವಿಷ್ಕಾರಗಳನ್ನು ಮಾಡುವ ಬದಲು, ವೈದ್ಯರ ಜೊತೆಗೂಡಿ ಆವಿಷ್ಕಾರಗಳನ್ನು ಮಾಡಿದಾಗ ತಂತ್ರಜ್ಞಾನವು ಹೆಚ್ಚು ಬಲಶಾಲಿಯಾಗುತ್ತದೆ’ ಎಂದು ಹೇಳಿದರು.

ಮೆಡ್‌ ಟ್ರಾನಿಕ್ ಸಂಸ್ಥೆಯ ಜಾಗತಿಕ ನಾಯಕತ್ವದ ಪ್ರಮುಖರಾದ ಕೇಟ್ ಬೆನೆಡಿಕ್ಟ್ (ಎಸ್‌ವಿಪಿ ಮತ್ತು ಪ್ರೆಸಿಡೆಂಟ್, ಅಕ್ಯೂಟ್ ಕೇರ್ ಮಾನಿಟರಿಂಗ್), ಜೇಸನ್ ಕೇಸ್ (ವಿಪಿ, ಆರ್‌ ಆಂಡ್‌ ಡಿ, ಅಕ್ಯೂಟ್ ಕೇರ್ ಮಾನಿಟರಿಂಗ್), ದೇವ್ ಜೋಶುವಾ (ಸೀನಿಯರ್ ಡೈರೆಕ್ಟರ್, ಡಿಜಿಟಲ್ ಹೆಲ್ತ್), ಗೌರಿ ಜೋಗ್ಲೇಕರ್ (ಸೀನಿಯರ್ ಡೈರೆಕ್ಟರ್, ಪೋರ್ಟ್‌ಫೋಲಿಯೋ ಆರ್‌ ಆಂಡ್‌ ಡಿ ಮತ್ತು ಪಿಎಂಒ – ಇನ್ನೋವೇಶನ್ ಡೆಲಿವರಿ) ಮತ್ತು ದಿವ್ಯ ಪ್ರಕಾಶ್ ಜೋಶಿ (ವಿಪಿ, ಇಂಜಿನಿಯರಿಂಗ್ ಮತ್ತು ಬೋರ್ಡ್ ಮೆಂಬರ್, ಮೆಡ್‌ಟ್ರಾನಿಕ್ ಇಂಜಿನಿಯರಿಂಗ್ ಅಂಡ್ ಇನ್ನೋವೇಶನ್ ಸೆಂಟರ್ - ಎಂಇಐಸಿ) ಉಪಸ್ಥಿತರಿದ್ದರು.

ಅಪೋಲೋ ಹಾಸ್ಪಿಟಲ್ಸ್ ಪರವಾಗಿ ಮನ್‌ಪ್ರೀತ್ ಸಿಂಗ್ (ಸಿಇಒ, ಅಪೋಲೋ ಹೆಲ್ತ್‌ಆಕ್ಸಿಸ್), ತೇಜಸ್ವಿ ರಾವ್ (ಸಿಇಒ - ಅಪೋಲೋ ಹಾಸ್ಪಿಟಲ್ಸ್ ಆಂಧ್ರಪ್ರದೇಶ್ ಮತ್ತು ತೆಲಂಗಾಣ), ಡಾ. ಸಾಯಿ ಪ್ರವೀಣ್ ಹರನಾಥ್ (ಚೀಫ್ ಫಿಸಿಶಿಯನ್ ಮತ್ತು ಇನ್ನೋವೇಶನ್ ಆಫೀಸರ್) ಮತ್ತು ಡಾ. ರಾಹುಲ್ ಖಂಡೇಲ್ವಾಲ್ (ವಿಪಿ, ಪಾರ್ಟ್‌ನರ್‌ಶಿಪ್ಸ್ ಅಂಡ್ ಕ್ಲೈಂಟ್ ಸಲ್ಯೂಷನಿಂಗ್) ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ಗಮನಿಸಿ: ಇಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿಗಾಗಿ ಮಾತ್ರವಾಗಿದೆ. ಇದನ್ನು ವೈದ್ಯಕೀಯ ಸಲಹೆ ಅಥವಾ ಶಿಫಾರಸು ಎಂದು ಪರಿಗಣಿಸಬಾರದು. ರೋಗಿಗಳು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಸೂಕ್ತ ವೈದ್ಯಕೀಯ ಸಲಹೆಗಾಗಿ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು. ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆಯ ಫಲಿತಾಂಶಗಳು ಭಿನ್ನವಾಗಿರಬಹುದು.)

PREV

Recommended Stories

ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಹೌಸ್ಲಾ 2.0 ಅಭಿಯಾನಕ್ಕೆ ಚಾಲನೆ
ಶಿಕ್ಷಣ ಕ್ಷೇತ್ರದಲ್ಲಿ ಅಸಮರ್ಪಕ ಅನುದಾನ ಹಂಚಿಕೆ