ಹೊರ ಪ್ರಪಂಚದ ಜೊತೆ ಗಾಜಾ಼ ಸಂಪರ್ಕ ಕಡಿತ

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ
-ನೀರು, ವಿದ್ಯುಚ್ಛಕ್ತಿಯ ನಂತರ ಟೆಲಿಕಾಂ ಸಂಪರ್ಕ ಬಂದ್‌ -ಮೊಬೈಲ್‌ ಸಂಪರ್ಕ ಮರುಸ್ಥಾಪಿಸುವ ಯತ್ನದಲ್ಲಿ ಮಸ್ಕ್‌! ಜೆರುಸಲೆಂ: ಗಾಜಾದ ಮೇಲೆ ಶುಕ್ರವಾರ ಇಸ್ರೇಲ್‌ ನಡೆಸಿದ ಭಾರೀ ದಾಳಿಯ ಪರಿಣಾಮ ಅಂತರ್ಜಾಲ ಸಂಪರ್ಕ ಪೂರ್ಣ ಕಡಿತಗೊಂಡಿದೆ. ಹೀಗಾಗಿ ಹೊರ ಜಗತ್ತಿನೊಂದಿಗೆ ಗಾಜಾದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದೆ. ಜೊತೆಗೆ ವಿವಿಧ ಸೇವೆಗಳಿಗೆ ಅಂತರ್ಜಾಲ ಅವಲಂಬಿಸಿದ್ದ ಸೇವೆಗಳು ಸ್ಥಗಿತಗೊಂಡಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌ಗೆ ಕರೆ ಮಾಡಲೂ ಕೂಡ ಸಂಪರ್ಕ ಸಿಗದಂತಾಗಿದ್ದು, ಬಹಳ ನರಕಸದೃಶ ಪರಿಸ್ಥಿತಿ ಎದುರಿಸುವಂತಾಗಿದೆ. ಆದರೆ ಸ್ಯಾಟಲೈಟ್‌ ಫೋನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅಡಗುತಾಣಗಳಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗಿರುವುದು ತುಸು ನೆಮ್ಮದಿ ಮೂಡಿಸಿದೆ. ಮಸ್ಕ್‌ರಿಂದ ಇಂಟರ್‌ನೆಟ್‌: ಈ ನಡುವೆ ಎಕ್ಸ್‌ ಖಾತೆಯ ಮಾಲೀಕ ಎಲಾನ್‌ ಮಸ್ಕ್ ಸ್ಟಾರ್‌ಲಿಂಕ್‌ ಸಂಸ್ಥೆಯ ಸಹಯೋಗದಲ್ಲಿ ಗಾಜಾ಼ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳ ಸಹಾಯಕ್ಕಾಗಿ ಮೊಬೈಲ್‌ ಸಂಪರ್ಕ ಮರುಸ್ಥಾಪಿಸಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

Share this article