==========
ರಸ್ತೆ ಸಂಪರ್ಕವು ಇಲ್ಲಿ ಅತ್ಯಂತ ಪ್ರಬಲ ವೇಗವರ್ಧಕವಾಗಿ ಕೆಲಸ ಮಾಡಿದೆ. ಎಚ್ಎಸ್ಆರ್ ಲೇಔಟ್, ಕೋರಮಂಗಲ, ನೈಸ್ ರಸ್ತೆ ಮತ್ತು ಹೊಸಕೋಟೆಯನ್ನು ಬೆಸೆಯುವ ಕಾರಿಡಾರ್ನಾದ್ಯಂತ ಉತ್ತಮಗೊಂಡಿರುವ ಸಂಪರ್ಕ ವ್ಯವಸ್ಥೆಯು ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳು ಹಾಗೂ ವಸತಿ ಪ್ರದೇಶಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಿದೆ. ಮೆಟ್ರೋ ಕಾರಿಡಾರ್ ಸೇರಿದಂತೆ ಉದ್ದೇಶಿತ ಸಂಪರ್ಕ ಯೋಜನೆಗಳು ಭವಿಷ್ಯದ ಸಾಧ್ಯತೆಗಳನ್ನು ಹೆಚ್ಚಿಸಿವೆ. ಆದರೆ, ಇದರ ನಿಜವಾದ ಲಾಭವು ಈ ಯೋಜನೆಗಳ ಅನುಷ್ಠಾನ ಹಾಗೂ ಸ್ಥಳೀಯ ಸಾರಿಗೆಯೊಂದಿಗಿನ ಸಮರ್ಪಕ ಸಂಯೋಜನೆಯನ್ನು ಅವಲಂಬಿಸಿದೆ. ಹೀಗಾಗಿಯೇ ಜನರ ಪ್ರಶ್ನೆಯೀಗ "ನನ್ನ ಆಫೀಸ್ನಿಂದ ಇದು ಎಷ್ಟು ದೂರದಲ್ಲಿದೆ? " ಎನ್ನುವುದರಿಂದ, "ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ನಾನಿಲ್ಲಿ ಎಷ್ಟು ಸುಲಭವಾಗಿ ಜೀವಿಸಬಹುದು, ಕೆಲಸ ಮಾಡಬಹುದು ಮತ್ತು ಓಡಾಡಬಹುದು? " ಎಂಬುದಕ್ಕೆ ಬದಲಾಗುತ್ತಿದೆ.
ಕೇವಲ ಸಂಪರ್ಕವಲ್ಲ, ಸಂಪೂರ್ಣ ‘ಅರ್ಬನ್ ಇಕೋಸಿಸ್ಟಮ್’ಉತ್ತಮ ಸಂಪರ್ಕ ವ್ಯವಸ್ಥೆಯು ಬೆಳವಣಿಗೆಯನ್ನು ಪ್ರೇರೇಪಿಸಬಲ್ಲದು, ಆದರೆ ಅದು ಮಾತ್ರವೇ ಒಂದು ಪರಿಪೂರ್ಣ ತಾಣವನ್ನು ಸೃಷ್ಟಿಸಲಾರದು. ಯಶಸ್ವಿ ಬಡಾವಣೆಗಳಿಗೆ ವಸತಿಯ ಜೊತೆಗೆ ಮೂಲಭೂತ ಅಗತ್ಯಗಳಾದ ಶಾಲೆಗಳು, ಹೆಲ್ತ್ಕೇರ್, ಮಳಿಗೆಗಳು, ಕೆಲಸದ ಸ್ಥಳಗಳು, ಸಾರ್ವಜನಿಕ ಸ್ಥಳಗಳು ಹಾಗೂ ಸುಸಜ್ಜಿತ ಮೂಲಸೌಕರ್ಯಗಳ ಅಗತ್ಯವಿರುತ್ತದೆ. ಈ ನಾಗರಿಕ ಮತ್ತು ಸಾಮಾಜಿಕ ಸೌಲಭ್ಯಗಳು ಹೆದ್ದಾರಿಗಳು ಮತ್ತು ಸಾರಿಗೆ ವ್ಯವಸ್ಥೆಯಷ್ಟೇ ಪ್ರಮುಖವಾಗಿವೆ. ನಿವಾಸಿಗಳು ತಮ್ಮ ದೈನಂದಿನ ಅಗತ್ಯಗಳನ್ನು ಸ್ಥಳೀಯವಾಗಿಯೇ ಪೂರೈಸಿಕೊಳ್ಳಬಹುದೇ ಅಥವಾ ಅದಕ್ಕಾಗಿ ಇಡೀ ನಗರವನ್ನು ಸುತ್ತಬೇಕೇ ಎಂಬುದನ್ನು ಇವೇ ನಿರ್ಧರಿಸುತ್ತವೆ. ಸಮೀಪದ ಕೈಗಾರಿಕಾ ಹಾಗೂ ಟೆಕ್ನಾಲಜಿ ವಲಯಗಳ ಸುತ್ತ ಉದ್ಯೋಗ ಕೇಂದ್ರಗಳು ಅಭಿವೃದ್ಧಿಯಾಗುತ್ತಿರುವುದರಿಂದ, ಕೆಲಸದ ಸ್ಥಳ ಮತ್ತು ಮನೆಗಳು ಹತ್ತಿರದಲ್ಲೇ ಇರುವುದು ಪ್ರಯಾಣದ ಆಯಾಸವನ್ನು ಕಡಿಮೆ ಮಾಡುತ್ತದೆ. ಆದರೆ, ಇದು ತಾನಾಗಿಯೇ ಒಲಿದು ಬರುವುದಿಲ್ಲ; ಉದ್ಯೋಗ, ವಸತಿ, ಸಾರಿಗೆ ಹಾಗೂ ಸಾರ್ವಜನಿಕ ಸೇವೆಗಳು ಪ್ರತ್ಯೇಕವಾಗಿರದೆ, ಒಟ್ಟೊಟ್ಟಿಗೆ ಹೆಜ್ಜೆ ಹಾಕುತ್ತಾ ಬೆಳೆಯಬೇಕಿದೆ.
ಒಂದು ''''''''ಲೈಫ್ಸ್ಟೈಲ್ ಡೆಸ್ಟಿನೇಶನ್''''''''ಗೆ ಆಫೀಸ್ ಪಾರ್ಕ್ಗಳು ಮತ್ತು ವಸತಿ ಸಮುಚ್ಚಯಗಳ ಗೇಟ್ಗಳನ್ನು ಮೀರಿದ ವಿಸ್ತೃತ ಸ್ಥಳೀಯ ಆರ್ಥಿಕತೆಯ ಅಗತ್ಯವಿರುತ್ತದೆ. ಕೆಫೆಗಳು, ರಿಟೇಲ್ ಮಳಿಗೆಗಳು, ಸಾಂಸ್ಕೃತಿಕ ಕೇಂದ್ರಗಳು, ಕ್ರೀಡಾ ಸೌಲಭ್ಯಗಳು ಮತ್ತು ಹಾಸ್ಪಿಟಾಲಿಟಿ ಉದ್ಯಮಗಳು ದಿನವಿಡೀ ಚಟುವಟಿಕೆಗಳನ್ನು ಜೀವಂತವಾಗಿರಿಸುತ್ತವೆ ಹಾಗೂ ಜನರಿಗೆ ಬೆರೆಯಲು ಸೂಕ್ತ ಸ್ಥಳಗಳನ್ನು ಒದಗಿಸುತ್ತವೆ. ಸುಲಭವಾಗಿ ತಲುಪಬಹುದಾದ ವಾಣಿಜ್ಯ ಮಳಿಗೆಗಳು ಹಾಗೂ ಸುರಕ್ಷಿತವಾಗಿ ನಡೆದಾಡಬಹುದಾದ (ವಾಕಬಲ್) ಸಾರ್ವಜನಿಕ ಸ್ಥಳಗಳೊಂದಿಗೆ ಹೊಸ ಸಮುದಾಯಗಳನ್ನು ರೂಪಿಸಿದಾಗ ಸಣ್ಣ ವ್ಯಾಪಾರಗಳಿಗೂ ಅನುಕೂಲವಾಗುತ್ತದೆ. ಕೇವಲ ಖಾಸಗಿ ಬಡಾವಣೆಗಳ ಒಳಗೆ ಮಾತ್ರವೇ ಅತ್ಯುತ್ತಮ ನೆರೆಹೊರೆಯನ್ನು ಕಟ್ಟಿಕೊಡಲು ಸಾಧ್ಯವಿಲ್ಲ; ಮನೆ, ಕೆಲಸದ ಸ್ಥಳ ಮತ್ತು ಸಾರ್ವಜನಿಕ ಹಂಚಿಕೆಯ ಸ್ಥಳಗಳ ನಡುವೆ ನಡೆಯುವ ದೈನಂದಿನ ಒಡನಾಟಗಳಿಂದ ಮಾತ್ರ ಸುಂದರ ಬಡಾವಣೆಗಳು ನಿರ್ಮಾಣವಾಗುತ್ತವೆ. ಇಂತಹ ವಿಸ್ತೃತ ಇಕೋಸಿಸ್ಟಮ್, ಬೆಂಗಳೂರನ್ನು ಕೇವಲ ಉದ್ಯೋಗಕ್ಕೆ ಹೋಗಿ ಬರುವ ಸ್ಥಳವನ್ನಾಗಿಸದೆ, ಜನರು ಭಾವನಾತ್ಮಕವಾಗಿ ಗುರುತಿಸಿಕೊಳ್ಳುವ ತಾಣವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಇತ್ತೀಚೆಗೆ ಮನೆ ಖರೀದಿದಾರರು ಕೇವಲ ಚದರ ಅಡಿ (ಸ್ಕ್ವೇರ್ ಫೀಟ್), ಸೌಲಭ್ಯಗಳು ಅಥವಾ ಮ್ಯಾಪ್ನಲ್ಲಿನ ಲೊಕೇಶನ್ ಅನ್ನು ಮಾತ್ರ ನೋಡುತ್ತಿಲ್ಲ. ಅವರು ಮನೆಯಿಂದಲೇ ಕೆಲಸ ಮಾಡಲು ಪ್ರತ್ಯೇಕ ಜಾಗ, ಮಕ್ಕಳಿಗೆ ಸುರಕ್ಷಿತ ವಾತಾವರಣ, ವೆಲ್ನೆಸ್ ಹಾಗೂ ಮನರಂಜನೆ, ದೈನಂದಿನ ಅನುಕೂಲತೆಗಳು ಮತ್ತು ''''''''ಇದು ನಮ್ಮದು'''''''' ಎಂಬ ಭಾವನೆಯನ್ನು ಬಯಸುತ್ತಾರೆ. ಓಪನ್ ಸ್ಪೇಸ್ಗಳು ಮತ್ತು ಕಡಿಮೆ ಜನದಟ್ಟಣೆಯ ಪರಿಸರವು ಅನೇಕ ಕುಟುಂಬಗಳನ್ನು ಆಕರ್ಷಿಸುತ್ತವೆ. ಆದರೆ, ಅಗತ್ಯ ಸೇವೆಗಳು ಮತ್ತು ವಿಶ್ವಾಸಾರ್ಹ ಸಂಪರ್ಕವು ಸುಲಭವಾಗಿ ಕೈಗೆಟಕುವಂತಿದ್ದಾಗ ಮಾತ್ರ ಇದು ಸಾಧ್ಯ. ಡೆವಲಪರ್ಗಳಿಗೆ ಈಗ ಕೇವಲ ಸಾಮಾನ್ಯ ಪ್ರಾಜೆಕ್ಟ್ಗಳನ್ನು ಮೀರಿ ಯೋಚಿಸುವ ಅವಕಾಶವಿದೆ. ಸಮಗ್ರ ಹಸಿರು ವಲಯಗಳು, ವಾಕಿಂಗ್ ಟ್ರ್ಯಾಕ್ಗಳು, ಫಿಟ್ನೆಸ್ ಸೌಲಭ್ಯಗಳು, ಆಟದ ಮೈದಾನಗಳು ಹಾಗೂ ಎಲ್ಲರೂ ಬಳಸಬಹುದಾದ ಸ್ಥಳಗಳೊಂದಿಗೆ ಕರಾರುವಾಕ್ ಆಗಿ ಯೋಜಿಸಿದ ಸಮುದಾಯಗಳನ್ನು ನಿರ್ಮಿಸಬೇಕಿದೆ. ಇದರಷ್ಟೇ ಮುಖ್ಯವಾಗಿ, ನೀರಿನ ಸದ್ಬಳಕೆ, ಮಳೆನೀರು ಕೊಯ್ಲು, ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ಉಳಿತಾಯದ ವಿನ್ಯಾಸಗಳ ಕಡೆಗೂ ಗಮನಹರಿಸಬೇಕಿದೆ. ಇವು ಕೇವಲ ''''''''ಲೈಫ್ಸ್ಟೈಲ್'''''''' ಆಕರ್ಷಣೆಗಳಾಗದೆ, ಮೂಲಸೌಕರ್ಯದ ಅವಿಭಾಜ್ಯ ಅಂಗಗಳಾಗಬೇಕು.
ನಗರದ ವಿಸ್ತರಣೆಯು ತನ್ನೊಂದಿಗೆ ಹೊಸ ಜವಾಬ್ದಾರಿಗಳನ್ನೂ ತರುತ್ತದೆ. ಕಟ್ಟಡ ನಿರ್ಮಾಣಗಳ ಜೊತೆಗೆ ನೀರಿನ ಭದ್ರತೆ, ಒಳಚರಂಡಿ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆ, ತ್ಯಾಜ್ಯ ವಿಲೇವಾರಿ ಹಾಗೂ ಕೆರೆಗಳು ಮತ್ತು ಹಸಿರು ಹೊದಿಕೆಯ ಸಂರಕ್ಷಣೆಗೆ ಸಮಾನ ಗಮನ ನೀಡಲೇಬೇಕು. ಉತ್ತಮ ಜೀವನಮಟ್ಟ ಮತ್ತು ರಿಯಲ್ ಎಸ್ಟೇಟ್ನ ದೀರ್ಘಕಾಲೀನ ಮೌಲ್ಯ ಕಾಪಾಡಿಕೊಳ್ಳಲು ಪರಿಸರ ಸ್ನೇಹಿ ಯೋಜನೆಗಳು ಅತ್ಯಗತ್ಯ. ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವ ಹಾಗೂ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ಪ್ರಾಜೆಕ್ಟ್ಗಳು ಸ್ಥಳೀಯ ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರ ಜೊತೆಗೆ ನೈಜತೆಯೂ ಅಷ್ಟೇ ಮುಖ್ಯ. ಉದ್ದೇಶಿತ ಸಾರಿಗೆ ಸಂಪರ್ಕಗಳು ಹಾಗೂ ಐಟಿ ಪಾರ್ಕ್ಗಳು ಆಯಾ ಪ್ರದೇಶವನ್ನು ಬಲಪಡಿಸಬಹುದೇನೋ ನಿಜ, ಆದರೆ ಕೇವಲ ಘೋಷಣೆಗಳೇ ಪೂರ್ಣಗೊಂಡ ಮೂಲಸೌಕರ್ಯಗಳಾಗುವುದಿಲ್ಲ. ಯಾವ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ, ಯಾವವು ನಿರ್ಮಾಣ ಹಂತದಲ್ಲಿವೆ ಅಥವಾ ಇನ್ನು ಕೇವಲ ಪ್ರಸ್ತಾಪದ ಹಂತದಲ್ಲಿಯೇ ಇವೆ ಎಂಬುದರ ಬಗ್ಗೆ ಖರೀದಿದಾರರಿಗೆ ಸ್ಪಷ್ಟನೆ ಸಿಗಬೇಕು. ಕೇವಲ ಭರವಸೆಗಳಿಂದಲ್ಲ, ಪಾರದರ್ಶಕತೆ, ಜವಾಬ್ದಾರಿ ಹಾಗೂ ಹೇಳಿದ್ದನ್ನು ಕೃತಿಯಲ್ಲಿ ತರುವ ಮೂಲಕ ಮಾತ್ರ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯ.ಪ್ರಗತಿಯ ನೈಜ ಮತ್ತು ಅರ್ಥಪೂರ್ಣ ಅಳತೆಗೋಲು