ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಳಬಾಗಿಲಿನ ಶ್ರೀಪಾದರಾಜ ಮಠದ ಅಂಗ ಸಂಸ್ಥೆಯಾದ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ ಹಾಗೂ ಜಯನಗರದ ವಿಜಯ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ವೇದ ವಿಜ್ಞಾನ ಮತ್ತು ಜಾಗತಿಕ ಸಮಕಾಲೀನ ಸವಾಲುಗಳು’ ಕುರಿತ 7ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವೇದ ಪ್ರಪಂಚಕ್ಕೇ ಬೆಳಕು, ಮಾರ್ಗದರ್ಶನ ನೀಡಿದೆ. ಆದ್ದರಿಂದ ವೇದದ ಪ್ರಯೋಜನ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವೇದ ಹಾಗೂ ವಿಜ್ಞಾನ ಬದುಕಿನ ಭಾಗವಾಗಿವೆ. ಈ ನಿಟ್ಟಿನಲ್ಲಿ ವೇದ ಹಾಗೂ ವಿಜ್ಞಾನಕ್ಕೆ ಭಾರತದಲ್ಲಿ ಆದ್ಯತೆ ನೀಡಲಾಗುತ್ತಿದೆ. ವೇದ ಹಾಗೂ ವಿಜ್ಞಾನವನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಎಂದರು.ಗುರುಕುಲ ಶಿಕ್ಷಣ ಪಡೆಯಲು ಎಲ್ಲರೂ ತಯಾರಾಗಬೇಕು. ಗುರುಕುಲ ಶಿಕ್ಷಣ ಪದ್ಧತಿ ಎಂದರೆ ಮನೆಯಲ್ಲೇ ಕುಳಿತು ಓದುವುದಲ್ಲ. ವೇದದ ತಿರುಳನ್ನು ತಿಳಿದು ವೇದದ ಮುಖಾಂತರ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ವಿಜ್ಞಾನದ ಮೂಲಕ ವೇದವನ್ನು ಸಮಾಜಕ್ಕೆ ಹೇಗೆ ನೀಡಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದರು.