ಇಂದಿನಿಂದ ಏಷ್ಯಾಕಪ್‌ ಟಿ20 : ಹಾಲಿ ಚಾಂಪಿಯನ್‌ ಭಾರತಕ್ಕೆ 9ನೇ ಟ್ರೋಫಿ ಗುರಿ

KannadaprabhaNewsNetwork |  
Published : Sep 09, 2025, 01:00 AM IST
ಏಷ್ಯಾಕಪ್ | Kannada Prabha

ಸಾರಾಂಶ

ಬಹುನಿರೀಕ್ಷಿತ ಟೂರ್ನಿಗೆ ಯುಎಇ ಆತಿಥ್ಯ. 8 ತಂಡ, 19 ಪಂದ್ಯಗಳು. ಇಂದು ಆಫ್ಘನ್‌ vs ಹಾಂಕಾಂಗ್‌. ಭಾರತಕ್ಕೆ ನಾಳೆ ಯುಎಇ ಸವಾಲು

ದುಬೈ: ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಬಹುನಿರೀಕ್ಷಿತ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದೆ. ಭಾರತ, ಪಾಕಿಸ್ತಾನ ಸೇರಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಯುಎಇ ದೇಶದ 2 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಟೂರ್ನಿಯಲ್ಲಿ 20 ದಿನಗಳ ಕಾಲ ಒಟ್ಟು 19 ಪಂದ್ಯಗಳು ನಡೆಯಲಿವೆ. ಸೆ.28ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ. 

 ಉದ್ಘಾಟನಾ ಪಂದ್ಯದಲ್ಲಿ ಮಂಗಳವಾರ ಅಫ್ಘಾನಿಸ್ತಾನಕ್ಕೆ ಹಾಂಕಾಂಗ್‌ ಸವಾಲು ಎದುರಾಗಲಿದೆ. ಹಾಲಿ ಚಾಂಪಿಯನ್‌ ಭಾರತ ತಂಡ ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್‌ ‘ಎ’ ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್‌ ‘ಬಿ’ ಗುಂಪಿನಲ್ಲಿವೆ. ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್‌-4 ಹಂತ ಪ್ರವೇಶಿಸಲಿವೆ. 

ಸೂಪರ್‌-4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.3ನೇ ಬಾರಿ ಟಿ20 ಮಾದರಿ: ಈ ಬಾರಿ ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿವೆ. 1984ರಲ್ಲಿ ಏಷ್ಯಾಕಪ್‌ ಆರಂಭಗೊಂಡಿದ್ದು, ಏಕದಿನ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಆದರೆ 2016ರಿಂದ ಪ್ರತಿ ಆವೃತ್ತಿಗೆ ಆಟದ ಮಾದರಿ ಬದಲಾಗುತ್ತಿದೆ. 2016ರಲ್ಲಿ ಟಿ20, 2018ರಲ್ಲಿ ಏಕದಿನ, 2022ರಲ್ಲಿ ಟಿ20, 2023ರಲ್ಲಿ ಏಕದಿನ ಮಾದರಿಯಲ್ಲಿ ಟೂರ್ನಿ ನಡೆದಿತ್ತು. ಒಟ್ಟು 14 ಬಾರಿ ಏಕದಿನ, 2 ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್‌ ಆಯೋಜನೆಗೊಂಡಿದೆ.

ಏಷ್ಯಾಕಪ್‌ನಲ್ಲಿ ಮೊದಲ ಮೊದಲ ಬಾರಿ 8 ತಂಡ

ಏಷ್ಯಾಕಪ್‌ ಇತಿಹಾಸದಲ್ಲೇ ಮೊದಲ ಬಾರಿ 8 ತಂಡಗಳು ಕಣಕ್ಕಿಳಿಯಲಿವೆ. ಈವರೆಗೆ ಗರಿಷ್ಠ 6 ತಂಡಗಳು ಆಡಿದ್ದವು. 1984, 1986, 1991ರಲ್ಲಿ ತಲಾ 3 ತಂಡಗಳು ಕಣಕ್ಕಿಳಿದಿದ್ದವು. ಕೆಲ ಆವೃತ್ತಿಗಳಲ್ಲಿ 4, 5 ತಂಡಗಳೂ ಆಡಿವೆ.

ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?

ಪಹಲ್ಗಾಂ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸೆ.14ರಂದು ಗುಂಪು ಹಂತದಲ್ಲಿ ಉಭಯ ತಂಡಗಳು ಸೆಣಸಾಟಡಲಿವೆ. ಈ ಬಾರಿ ಟೂರ್ನಿಯಲ್ಲಿ ಭಾರತ-ಪಾಕ್‌ ಒಟ್ಟು 3 ಬಾರಿ ಪರಸ್ಪರ ಎದುರಾಗುವ ಸಾಧ್ಯತೆಗಳಿವೆ. ಗುಂಪು ಹಂತದಲ್ಲಿ ಗೆದ್ದು, ಸೂಪರ್‌-4 ಪ್ರವೇಶಿಸಿದರೆ ಅಲ್ಲೂ ಇತ್ತಂಡಗಳು ಮುಖಾಮುಖಿಯಾಗಲಿವೆ. ಸೂಪರ್‌-4ನಲ್ಲಿ ಅಗ್ರ-2 ಸ್ಥಾನ ಪಡೆದರೆ ಫೈನಲ್‌ನಲ್ಲೂ ಭಾರತ-ಪಾಕಿಸ್ತಾನ ತಂಡಗಳು ಸೆಣಸಾಡಬಹುದು.

ಭಾರತದ ವೇಳಾಪಟ್ಟಿಎದುರಾಳಿದಿನಾಂಕಸ್ಥಳ

ಯುಎಇಸೆ.10ದುಬೈ

ಪಾಕಿಸ್ತಾನಸೆ.14ದುಬೈ

ಒಮಾನ್‌ಸೆ.19ಅಬುಧಾಬಿ

ಭಾರತ 8, ಶ್ರೀಲಂಕಾ 6 ಸಲ ಚಾಂಪಿಯನ್‌

ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಏಷ್ಯಾಕಪ್‌ ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದಿದ್ದು, 3 ಆವೃತ್ತಿಗಳಲ್ಲಿ ರನ್ನರ್‌-ಅಪ್‌ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್‌ ಆಗಿವೆ.

ಸೆ.15ರ ಯುಎಇ-ಒಮಾನ್‌(ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭ. ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌ನಲ್ಲಿ ಪಂದ್ಯಗಳು ನೇರಪ್ರಸಾರ.--

ಎಲ್ಲೆಲ್ಲಿ ಪಂದ್ಯಗಳು

ಸ್ಥಳ: ದುಬೈ ಕ್ರೀಡಾಂಗಣ

ಪಂದ್ಯ: 11

ಆಸನ ಸಾಮರ್ಥ್ಯ: 25000ಸ್ಥಳ: ಅಬುಧಾಬಿ ಕ್ರೀಡಾಂಗಣಪಂದ್ಯ: 08ಆಸನ ಸಾಮರ್ಥ್ಯ: 20000

PREV
Read more Articles on

Recommended Stories

ವಿಶ್ವ ಗೆದ್ದ ಭಾರತದ ಮಹಿಳಾ ಕ್ರಿಕೆಟಿಗರಿಗೆ ಭಾರಿ ಬಹುಮಾನ - ಬಿಸಿಸಿಐನಿಂದ 51 ಕೋಟಿ
ಭಾರತದ ದಿಟ್ಟೆಯರ ಹಿಂದಿದೆ ರೋಚಕ ಕಹಾನಿ