ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲುಂಡ ಬಳಿಕ ಭಾರತ, 2ನೇ ಟೆಸ್ಟ್‌ಗೆ ತನ್ನ ವೇಗದ ಬೌಲಿಂಗ್ ಪಡೆಯ ಬಲ ಹೆಚ್ಚಿಸಲು ಯುವ ವೇಗಿ ಆವೇಶ್ ಖಾನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೊದಲ ಟೆಸ್ಟ್‌ನಲ್ಲಿ ಪ್ರಸಿದ್ಧ್ ಕೃಷ್ಣ ನಿರೀಕ್ಷೆ ಉಳಿಸಿಕೊಳ್ಳದ ಕಾರಣ, ಆವೇಶ್‌ಗೆ ಬುಲಾವ್ ನೀಡಲಾಗಿದೆ. 2ನೇ ಟೆಸ್ಟ್‌ನಲ್ಲಿ ಪ್ರಸಿದ್ಧ್‌ರನ್ನು ಹೊರಗಿಟ್ಟು ಆವೇಶ್‌ರನ್ನು ಆಡಿಸುವ ನಿರೀಕ್ಷೆ ಇದ್ದು, ಶಾರ್ದೂಲ್ ಠಾಕೂರ್ ಬದಲು ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಭ್ಯಾಸ ಆರಂಭಿಸಿದ ಆಲ್ರೌಂಡರ್ ರವೀಂದ್ರ ಜಡೇಜಾಮೊದಲ ಟೆಸ್ಟ್‌ನ ಮೊದಲ ದಿನದಾಟಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿ ಪಂದ್ಯಕ್ಕೆ ಗೈರಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ, ಗುರುವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. 2ನೇ ಟೆಸ್ಟ್‌ಗೆ ಅವರು ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜ.3ರಿಂದ ಕೇಪ್‌ಟೌನ್‌ನಲ್ಲಿ ಪಂದ್ಯ ನಡೆಯಲಿದೆ.ನಿ
ಧಾನಗತಿ ಬೌಲಿಂಗ್: 2 ಅಂಕ ಕಳೆದುಕೊಂಡ ಭಾರತ!
ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಮೂರೇ ದಿನಕ್ಕೆ ಮುಗಿದರೂ, ನಿಧಾನಗತಿ ಬೌಲಿಂಗ್‌ನಿಂದಾಗಿ ಭಾರತ ದಂಡ ಹಾಕಿಸಿಕೊಳ್ಳುವುದರಿಂದ ಪಾರಾಗಲು ಸಾಧ್ಯವಾಗಿಲ್ಲ. ಭಾರತೀಯ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ.10ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿರುವ ಐಸಿಸಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2 ಅಂಕಗಳನ್ನೂ ಕಡಿತಗೊಳಿಸಿದೆ. ನಿಗದಿತ ಸಮಯದಲ್ಲಿ ಭಾರತ 2 ಓವರ್ ಹಿಂದಿತ್ತು ಎಂದು ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ತಿಳಿಸಿದ್ದಾರೆ.
ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ನಾಯಕ ಸ್ಥಾನ!
ಸೆಂಚೂರಿಯನ್: ಭಾರತ ವಿರುದ್ಧ ಸದ್ಯ ಚಾಲ್ತಿಯಲ್ಲಿರುವ ಸರಣಿ ಬಳಿಕ ನಿವೃತ್ತಿ ಪಡೆಯಲಿರುವ ಡೀನ್ ಎಲ್ಗರ್‌ರನ್ನು, ಜ.3ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೆ ದ.ಆಫ್ರಿಕಾ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಮೊದಲ ಟೆಸ್ಟ್ ವೇಳೆ ಗಾಯಗೊಂಡ ಕಾಯಂ ನಾಯಕ ತೆಂಬ ಬವುಮಾ, 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದು, ಅವರ ಬದಲು ಎಲ್ಗರ್ ತಂಡ ಮುನ್ನಡೆಸಲಿದ್ದಾರೆ ಎಂದು ದ.ಆಫ್ರಿಕಾ ಕ್ರಿಕೆಟ್ ತಿಳಿಸಿದೆ. ಜುಬೇರ್ ಹಮ್ಜಾಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಬವುಮಾ ಬದಲು ಆಡುವ ನಿರೀಕ್ಷೆ ಇದೆ. ಡೀನ್ ಎಲ್ಗರ್ 2017ರಿಂದ 2023ರ ನಡುವೆ 17 ಟೆಸ್ಟ್‌ಗಳಲ್ಲಿ ತಂಡ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ದ.ಆಫ್ರಿಕಾ 9 ಗೆಲುವು, 7 ಸೋಲು, 1 ಡ್ರಾ ಕಂಡಿದೆ.