ಕಾಲ್ತುಳಿತದ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ : ಸಂಭ್ರಮಾಚರಣೆಗೆ ಶೀಘ್ರ ನಿಯಮ ಜಾರಿ

Published : Jun 12, 2025, 12:15 PM IST
BCCI Logo

ಸಾರಾಂಶ

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಆರ್‌ಸಿಬಿ ಸಂಭ್ರಮಾಚರಣೆಗೆ ವೇಳೆ ನಡೆದ ಕಾಲ್ತುಳಿತ ಘಟನೆಯಿಂದ ಬಿಸಿಸಿಐ ಎಚ್ಚೆತ್ತಿದೆ.

ನವದೆಹಲಿ: ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಆರ್‌ಸಿಬಿ ಸಂಭ್ರಮಾಚರಣೆಗೆ ವೇಳೆ ನಡೆದ ಕಾಲ್ತುಳಿತ ಘಟನೆಯಿಂದ ಬಿಸಿಸಿಐ ಎಚ್ಚೆತ್ತಿದೆ. ಭವಿಷ್ಯದಲ್ಲಿ ಈ ರೀತಿ ಘಟನೆ ಸಂಭವಿಸದಿರಲು ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ.

ಶನಿವಾರ(ಜೂ.14) ಬಿಸಿಸಿಐ 28ನೇ ಅಪೆಕ್ಸ್‌ ಕೌನ್ಸಿಲ್‌ ಸಭೆ ನಡೆಯಲಿದ್ದು, ಇದರ ಅಜೆಂಡಾದಲ್ಲಿ ಸಂಭ್ರಮಾಚರಣೆಗೆ ನಿಯಮ ಜಾರಿಗೊಳಿಸುವ ಬಗ್ಗೆ ಉಲ್ಲೇಖವಿದೆ. ‘ಐಪಿಎಲ್‌ ಸಂಭ್ರಮಾಚರಣೆಗೆ ಕೆಲ ನಿಯಮಗಳನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ಅಲ್ಲದೆ, ಭಾರತ-ನ್ಯೂಜಿಲೆಂಡ್‌ ಸರಣಿಗೆ ಸ್ಥಳ ನಿಗದಿ, ವಯೋ ವಂಚನೆ ತಡೆಗೆ ನಿಯಮಗಳು ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

PREV
Read more Articles on

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌