ಪ್ರೈಮ್ ವಾಲಿಬಾಲ್ ಲೀಗ್‌: ಮುಂದುವರಿದ ಬೆಂಗಳೂರು ಟಾರ್ಪೆಡೊಸ್‌ ಗೆಲುವಿನ ನಾಗಾಲೋಟ

KannadaprabhaNewsNetwork |  
Published : Mar 07, 2024, 01:46 AM IST
ಬೆಂಗಳೂರು ಆಟಗಾರನ ಸಂಭ್ರಮ | Kannada Prabha

ಸಾರಾಂಶ

ಕ್ಯಾಲಿಕಟ್‌ ಹೀರೋಸ್‌ ವಿರುದ್ಧದ ಗೆಲುವಿನೊಂದಿಗೆ ಬೆಂಗಳೂರು ಟಾರ್ಪೆಡೊಸ್‌ ತಂಡ ಸೂಪರ್‌ 5 ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮಾ.8ಕ್ಕೆ ಬೆಂಗಳೂರಿಗೆ ಚೆನ್ನೈ ಬ್ಲಿಟ್ಜ್‌ ಸವಾಲು ಎದುರಾಗಲಿದೆ.

ಚೆನ್ನೈ: ಚೆನ್ನೈನ ಜವಾಹರಲಾಲ್‌ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೈಮ್‌ ವಾಲಿಬಾಲ್‌ ಲೀಗ್‌ನ ಮೂರನೇ ಆವೃತ್ತಿಯ ಪಂದ್ಯದಲ್ಲಿ ಕ್ಯಾಲಿಕಟ್‌ ಹೀರೋಸ್‌ ವಿರುದ್ಧ ಬೆಂಗಳೂರು ಟಾರ್ಪೆಡೊಸ್‌ ತಂಡ ಜಯಭೇರಿ ಬಾರಿಸಿದೆ.ಬೆಂಗಳೂರು ತಂಡವು 14-16, 19-17, 13-15, 15-10, 15-11 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದ ನಂತರ ಟಾರ್ಪೆಡೊಸ್‌ನ ಮುಂದಿನ ಹಂತಕ್ಕೇರುವ ಆಸೆ ಜೀವಂತವಾಗಿ ಉಳಿದಿದೆ. ಸೇತು ಟಿ.ಆರ್‌. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಸೇತು ಸರ್ವ್‌ನೊಂದಿಗೆ ತನ್ನ ಫಾರ್ಮ್‌ಅನ್ನು ಮುಂದುವರಿಸಿದರು. ನಾಯಕ ಪಂಕಜ್‌ ಶರ್ಮಾ ಅವರ ಆಕ್ರಮಣಕಾರಿ ಆಟ ಕ್ಯಾಲಿಕಟ್‌ ಡಿಫೆನ್ಸ್‌ಗೆ ತೊಂದರೆ ನೀಡಿತು. ಆದರೆ ಹಲವು ತಪ್ಪುಗಳು ಬೆಂಗಳೂರನ್ನು ಪಂದ್ಯದುದ್ದಕ್ಕೂ ಕಾಡಿತು. ಚಿರಾಗ್‌ ಅವರ ದಾಳಿ ಕ್ಯಾಲಿಕಟ್‌ ತಂಡ ಆರಂಭಿಕ ಮುನ್ನಡೆ ಸಾಧಿಸಲು ಸಹಾಯ ಮಾಡಿದವು.ಸೇತು ಆಕ್ರಮಣಕಾರಿ ಸರ್ವ್‌ಗಳಿಂದ ಕ್ಯಾಲಿಕಟ್‌ಗೆ ತೊಂದರೆ ನೀಡುತ್ತಿದ್ದರೆ, ಚಿರಾಗ್‌ ಅವರ ಸ್ಪೈಕ್‌ಗಳು ಟಾರ್ಪೆಡೊಸ್‌ಗೆ ಸವಾಲು ಎಸೆಯುತ್ತಿದ್ದವು. ಆದರೆ ಮುಜೀಬ್‌ ಅವರ ರಕ್ಷಣಾತ್ಮಕ ಆಟ ಬೆಂಗಳೂರು ಮತ್ತೆ ಸ್ಪರ್ಧೆಗೆ ಮರಳಲು ಸಹಾಯ ಮಾಡಿತು. ಆದರೆ ಬೆಂಗಳೂರು ಸತತ ಸೂಪರ್‌ ಪಾಯಿಂಟ್‌ ಗೆಲುವುಗಳೊಂದಿಗೆ ಪಂದ್ಯವನ್ನು ಅಂತಿಮ ಸೆಟ್‌ಗೆ ಕೊಂಡೊಯ್ಯಿತು.ನಿಮ್ಮ ಸ್ವಂತ ರಾಜ್ಯವನ್ನೇ ಪ್ರತಿನಿಧಿಸಿ: ರೆಸ್ಲರ್ಸ್‌ಗೆ ಆದೇಶನವದೆಹಲಿ: ಆಯಾ ರಾಜ್ಯಗಳ ಕುಸ್ತಿಪಟುಗಳು ರಾಷ್ಟ್ರೀಯ ಕೂಟಗಳಲ್ಲಿ ಅದೇ ರಾಜ್ಯವನ್ನು ಪ್ರತಿನಿಧಿಸಬೇಕು ಎಂದು ಭಾರತೀಯ ಕುಸ್ತಿ ಫೆಡರೇಶನ್‌ ಸೂಚನೆ ನೀಡಿದೆ.ಇತ್ತೀಚಿಗೆ ಜೈಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಕೂಟದಲ್ಲಿ ಹರ್ಯಾಣದ ಹಲವು ಕುಸ್ತಿಪಟುಗಳು ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ಪ್ರತಿನಿಧಿಸಿದ್ದಕ್ಕೆ ಡಬ್ಲ್ಯುಎಫ್‌ಐ ಗರಂ ಆಗಿ ಈ ಆದೇಶ ಹೊರಡಿಸಿದೆ. ಅರುಣಾಚಲ ಪ್ರದೇಶ, ಸಿಕ್ಕಿಂ ಡಬ್ಲ್ಯುಎಫ್‌ಐನಿಂದ ಮಾನ್ಯತೆ ಪಡೆದಿಲ್ಲ. ಈ ಎರಡು ರಾಜ್ಯಗಳ ಸ್ಪರ್ಧಿಗಳನ್ನೂ ನಾವು ವಿಶೇಷ ಆಹ್ವಾನಿತರು ಎಂದೇ ಪರಿಗಣಿಸುತ್ತೇವೆ ಎಂದಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ